ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದಿಂದ ಆಯೋಜಿಸಿದ್ದ ಪೂರ್ಣ ಪ್ರಮಾಣದ ತಾಲೂಕು ಸಮಿತಿ ಸಭೆ ಹಾಗೂ ಐಕ್ಯತಾ ಸಭೆಯಲ್ಲಿ ಮಾತನಾಡಿ, ನಾನಾ ಕಾರಣಗಳಿಂದ ರೈತ ಸಂಘವು ಒಡೆದು ಹೋಳಾಗಿ ಹಂಚಿಹೋಗಿತ್ತು. ಆದರೆ, ಎಲ್ಲಾ ರೈತ ಮುಖಂಡರು ಒಂದೇ ತತ್ವ, ಸಿದ್ಧಾಂತದಡಿ ರೈತರ ಹಾಗೂ ಸಾರ್ವಜನಿಕರು ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ರೈತಪರ ಹೋರಾಟಗಾರರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಗೂ ಕೆ.ಎಸ್.ಪುಟ್ಟಣ್ಣಯ್ಯರ ಆಶಯ ಮತ್ತು ಕನಸುಗಳು ಈಡೇರಬೇಕಾದರೆ ನಾವೆಲ್ಲರು ಒಗ್ಗಟ್ಟಾಗುವುದು ಅನಿವಾರ್ಯ. ರೈತರ ಚಳವಳಿಗೆ ತನ್ನದೆಯಾದ ಇತಿಹಾಸವಿದೆ. ಆ ಪರಂಪರೆ ಮುಂದುವರೆಸಿಕೊಂಡು ಹೋಗಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಕಿವಿಮಾತು ಹೇಳಿದರು.ರೈತ ಸಂಘದ ವಿಭಜನೆ ಲಾಭ ಪಡೆದಿರುವ ಕೇಂದ್ರ ಮತ್ತು ರಾಜ್ಯಗಳಲ್ಲಿರುವ ಆಡಳಿತ ಸರ್ಕಾರಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ರೈತ ವಿರೋಧಿ ನೀತಿ ಜಾರಿಗೆ ತರುವ ಮೂಲಕ ದ್ರೋಹ ಮಾಡುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಒಗ್ಗೂಡುವಿಗೆ ಅನಿವಾರ್ಯವಾಗಿದೆ ಎಂದರು.
ಈ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ರಾಜೇಗೌಡ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಕೆ.ಆರ್.ಪೇಟೆ ಜಯರಾಮು, ಕೆನ್ನಾಳು ನಾಗರಾಜು, ಜಿ.ಎ.ಶಂಕರ್, ಲಿಂಗಪ್ಪಾಜಿ, ಜವರೇಗೌಡ, ಬೋರಾಪುರ ಶಂಕರೇಗೌಡ, ರಾಮಲಿಂಗಯ್ಯ, ರೇವಣ್ಣ, ವಿನೋದ್ ಬಾಬು, ಗೊಲ್ಲರದೊಡ್ಡಿ ಅಶೋಕ, ವರದರಾಜು, ಶೆಟ್ಟಹಳ್ಳಿ ರವಿಕುಮಾರ್, ಶಿವರಾಮು, ವಕೀಲ ಜಿ.ಎಸ್. ಸತ್ಯ, ವಳಗೆರಹಳ್ಳಿ ಅಲೋಕ, ಶಿವಕುಮಾರ್, ಶಶಿ, ಶ್ರೀನಿವಾಸ್, ಆಬಲವಾಡಿ ಪುಟ್ಟಸ್ವಾಮಿ, ಕೃಷ್ಣ, ಮಾಯಿಗಣ್ಣ, ಹೊಸಹಳ್ಳಿ ರವಿ, ವೈ.ಮಂಜು, ಸೇರಿದಂತೆ ಇತರರು ಇದ್ದರು.