ಲಿಂಗಾಯತರನ್ನು ದಾರಿ ತಪ್ಪಿಸುವ ವಚನ ದರ್ಶನ

KannadaprabhaNewsNetwork |  
Published : Jun 01, 2025, 04:40 AM IST
ಲಿಂಗಾಯತರನ್ನು ದಾರಿ ತಪ್ಪಿಸುವ ವಚನ ದರ್ಶನದ ಬಗ್ಗೆ ಜಾಗೃತರಾಗಿ- ಡಾ. ಶಿವಾನಂದ ಜಾಮದಾರ  | Kannada Prabha

ಸಾರಾಂಶ

ಚಾಮರಾಜನಗರದ ಡಾ.ಕಲಾಮಂದಿರದಲ್ಲಿ ಆಯೋಜಿಸಿದ್ದ ವಚನ ದರ್ಶನ: ಮಿಥ್ಯ ವರ್ಸಸ್ ಸತ್ಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು,

ಕನ್ನಡಪಭ ವಾರ್ತೆ ಚಾಮರಾಜನಗರಆರ್‌ಎಸ್‌ಎಸ್ ಮೂಲದವರು ಪ್ರಕಟಿಸಿರುವ ವಚನ ದರ್ಶನ ಕೃತಿ ಲಿಂಗಾಯತರನ್ನು ದಾರಿ ತಪ್ಪಿಸುವುದಾಗಿದ್ದು ಅದರಲ್ಲಿನ ವಿಷಯಗಳು ಸತ್ಯಕ್ಕೆ ದೂರವಾಗಿದ್ದು,ಲಿಂಗಾಯತ ಸಮಾಜದ ಜನರು ಜಾಗೃತರಾಗಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಹೇಳಿದರು.ಜಿಲ್ಲಾ ಘಟಕ ಜಾಗತಿಕ ಲಿಂಗಾಯತ ಮಹಾಸಭಾ, ಜಿಲ್ಲಾ ಮಹಿಳಾ ಘಟಕ ಹಾಗೂ ತಾಲೂಕು ಘಟಕಗಳು, ಬಸವಕೇಂದ್ರ ಹಾಗೂ ಎಲ್ಲಾ ಬಸವ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ನಗರದ ಡಾ.ಕಲಾಮಂದಿರದಲ್ಲಿ ಆಯೋಜಿಸಿದ್ದ ’ವಚನ ದರ್ಶನ: ಮಿಥ್ಯ ವರ್ಸಸ್ ಸತ್ಯ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಲಿಂಗಾಯತ ಸಮಾಜದ ವಿರುದ್ಧದ ಕೃತಿ ಪ್ರಕಟಿಸಿ ಲಿಂಗಾಯತ ಮಠಾಧೀಶರಿಂದಲೇ ಬಿಡುಗಡೆಗೊಳಿಸಿದರೆ ಜನರು ಒಪ್ಪುತ್ತಾರೆ ಎಂಬ ಭ್ರಮೆಯಲ್ಲಿದ್ದರು. ಆದರೆ ಅವರಿಗೆ ಹಿನ್ನಡೆಯಾಗಿದೆ, ವೈದಿಕ ಧರ್ಮವನ್ನು ಧಿಕ್ಕರಿಸಿ ಬಸವಣ್ಣನವರಿಂದ ಸ್ಥಾಪಿತವಾದ ಧರ್ಮ ಲಿಂಗಾಯಿತ ಧರ್ಮ ಇದನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲೂ ಜಾಗೃತರಾಗಬೇಕು ಎಂದರು.ವಚನಗಳನ್ನು ಪ್ರಸಾರ ಮಾಡಲು ಪ್ರತಿಯೊಬ್ಬರಿಗೆ ಹಕ್ಕಿದೆ. ಆದರೆ ಉದ್ಧೇಶ ಸರಿಯಾಗಿರಬೇಕು. ವಚನಗಳಿಗೆ ಅಪಾರ್ಥ ಕಲ್ಪಿಸಿರುವ ’ವಚನ ದರ್ಶನ’ ದುರುದ್ಧೇಶದಿಂದ ಕೂಡಿದೆ. ’ಮಿಥ್ಯ ಸತ್ಯ’ ಪುಸ್ತಕ ಅದಕ್ಕೆ ಸರಿಯಾದ ಉತ್ತರ ನೀಡಿದೆ ಎಂದು ಹೇಳಿದರು. ವಚನ ದರ್ಶನ ಪುಸ್ತಕ ೯ ಜಿಲ್ಲೆಗಳಲ್ಲಿ ಮತ್ತು ದೆಹಲಿಯಲ್ಲಿ ಬಿಡುಗಡೆಯಾಯಿತು. ಅದಕ್ಕೆ ಸರಿಯಾದ ಉತ್ತರ ಕೊಟ್ಟಿರುವ ಮಿಥ್ಯ ಸತ್ಯ ೧೫ ಜಿಲ್ಲೆಗಳಲ್ಲಿ ಮತ್ತು ದೆಹಲಿಯಲ್ಲಿ ಬಿಡುಗಡೆಯಾಗಲಿದೆ ಎಂದು ಜಾಮದಾರ್ ಹೇಳಿದರು.ಬಸವಣ್ಣನವರ ಅನುಯಾಯಿಗಳನ್ನು ದಾರಿತಪ್ಪಿಸಲು ವಚನ ದರ್ಶನ’ದಂತಹ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹನ್ನೆರಡನೇ ಶತಮಾನದ ವಚನಗಳ ಉದ್ದೇಶಗಳು ಮತ್ತು ಆಕಾಂಕ್ಷೆಗಳನ್ನು ಉದ್ದೇಶಪೂರ್ವಕವಾಗಿ ವಿರೂಪಗೊಳಿಸಿ, ವೈದಿಕ ಸಂಸ್ಕೃತಿಯನ್ನು ಲಿಂಗಾಯಿತ ಧರ್ಮದಲ್ಲಿ ಬೆರೆಸುವ ಹುನ್ನಾರ ಮಾಡಿದ್ದಾರೆ. ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಎನ್ನುವುದು ಲಿಂಗಾಯತ ರಕ್ತದಲ್ಲೇ ಬೆರೆತು ಹೋಗಿದೆ ಯಾರು ನಮಗೆ ಹೇಳಿಕೊಡಬೇಕಿಲ್ಲ, ಸಿಖ್, ಜೈನ, ಬುದ್ಧ ಧರ್ಮದಂತೆ ನಮ್ಮದು ಸ್ವತಂತ್ರ ಧರ್ಮ, ಇದಕ್ಕೆ ನಾವು ಹೋರಾಡುತ್ತೇವೆ ಹೊರತು, ಭಾರತೀಯತೆ, ಐಕ್ಯತೆಗೆ ಧಕ್ಕೆ ತರುವುದಲ್ಲಿ, ಇಲ್ಲಿಯವರೆಗೆ ಯಾವೊಬ್ಬ ಲಿಂಗಾಯಿತರು ದೇಶ ದ್ರೋಹಿಗಳಾಗಿಲ್ಲ ಎಂದರು.ಹನ್ನೆರಡನೇ ಶತಮಾನದ ಶರಣರು ಬಸವಣ್ಣನವರ ನೇತೃತ್ವದಲ್ಲಿ ವಚನಗಳ ಮೂಲಕ ತಿಳಿಸಿದ ಸಂದೇಶವನ್ನು ಒಗ್ಗೂಡಿ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಆ ಮೂಲಕ ಲಿಂಗಾಯತ ಧರ್ಮವನ್ನು ರಕ್ಷಿಸಬೇಕು, ಇಲ್ಲದಿದ್ದರೆ, ಸ್ವಾರ್ಥಿಗಳು ಜನರನ್ನು ದಾರಿ ತಪ್ಪಿಸಲು ಮತ್ತು ಬಣ್ಣ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯವನ್ನು ಮುಂದುವರಿಸುವ ಗುರಿಯನ್ನು ಸಾಧಿಸಲು ವಚನಗಳ ಅರ್ಥವನ್ನು ವಿರೂಪಗೊಳಿಸುತ್ತಾರೆ ಎಂದರು.ವಚನಗಳ ಬೌದ್ಧಿಕ ಚಿಂತನೆಯ ಪ್ರಕ್ರಿಯೆ ಮತ್ತು ವೈಜ್ಞಾನಿಕ ಸ್ವರೂಪವನ್ನು ಉದ್ದೇಶಪೂರ್ವಕವಾಗಿ ಮರೆಮಾಚುವುದು ಅವರ ಉದ್ದೇಶವಾಗಿದೆ, ಮತ್ತು ಈ ಉದ್ದೇಶಕ್ಕಾಗಿ ’ವಚನ ದರ್ಶನ’ ದಂತಹ ಪುಸ್ತಕವನ್ನು ಪ್ರಕಟಿಸಲಾಗಿದೆ ಇದರ ಬಗ್ಗೆ ಪ್ರತಿಯೊಬ್ಬ ಲಿಂಗಾಯಿತರು ಜಾಗೃತರಾಗಬೇಕು ಎಂದರು.ಲಿಂಗಾಯತರ ಮೇಲೆ ನಡೆಯುತ್ತಿರುವ ದಾಳಿಯನ್ನು ವಿಸ್ತೃತವಾಗಿ ಅರ್ಥ ಮಾಡುಕೊಳ್ಳಬೇಕು. ಇದು ಭಾರತದ ಜನತಂತ್ರ, ಸಂವಿಧಾನ, ಕನ್ನಡ ಭಾಷೆಯ ಮೇಲೆ ನಡೆಯುತ್ತಿರುವ ದಾಳಿಯ ಭಾಗ. ಇದು ಬಹುತ್ವ ಸಂಸ್ಕೃತಿಯ ಮೇಲೆ ಏಕ ಸಂಸ್ಕೃತಿಯನ್ನು ಹೇರುವ ಹುನ್ನಾರ ಎಂದರು. ಪುಸ್ತಕ ಬಗ್ಗೆ ಮಾತನಾಡಿದ ಹಿರಿಯ ವಕೀಲ ಆರ್. ವಿರೂಪಾಕ್ಷಗ್ರಂಥ ಉಪನಿಷತ್ತಿನ ಅನುವಾದ, ವೇದಗಮಗಳ ತಾತ್ಪರ್ಯ ಎನ್ನುವ ವಾದಕ್ಕೆ ’ಮಿಥ್ಯ-ಸತ್ಯ’ ಉತ್ತರ ಕೊಟ್ಟಿದೆ ಎಂದರು.ನೂರಾರು ವರ್ಷಗಳ ಹಿಂದೆ ಹಿರಿಯ ಲೇಖಕರು ಲಿಂಗಾಯಿತ, ವಚನಗಳ ಬಗ್ಗೆ ಹೇಳಿದ್ದ ಲೇಖನಗಳನ್ನು ಈ ಸತ್ಯ ಪುಸ್ತಕದಲ್ಲಿ ಮುದ್ರಿಸಿ ವಚನ ದರ್ಶನಕ್ಕೆ ತಕ್ಕ ಉತ್ತರ ಕೊಡಲಾಗಿದೆ, ಆದರೂ ನಮ್ಮವರೇ ಸಾಮಾಜಿಕದ ಜಾಲ ತಾಣದಲ್ಲಿ ವಿವಿಧ ಪ್ರಕ್ರಿಯೆಗಳನ್ನು ನೀಡುವುದು ಸರಿಯಲ್ಲ ಎಂದರು. ಸಂವಿಧಾನದಡಿಯಲ್ಲಿ ಕಾನೂನಾತ್ಮಕವಾಗಿ ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಹೋರಾಡಿತ್ತಿದ್ದೇವೆ ಹೊರತು, ದೇಶದ ಐಕ್ಯತೆ ಯಾವುದೇ ರೀತಿಯ ಧಕ್ಕೆಯನ್ನು ಮಾಡುವುದಲ್ಲ ಎಂದರು. ಸಾನ್ನಿಧ್ಯವನ್ನು ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ವಹಿಸಿದ್ದು, ಷಟ್‌ಸ್ಥಲ ಧ್ವಜಾರೋಹಣವನ್ನು ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ ಮಾಡಿದರು, ಮುಡುಗೂರು ವಿರಕ್ತ ಮಠದ ಉದ್ದಾನಸ್ವಾಮೀಜಿ ಗ್ರಂಥ ಬಿಡುಗಡೆ ಮಾಡಿದರು.ಜಿಲ್ಲಾಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಂತ ಮಲ್ಲಿಕಾರ್ಜುನಸ್ವಾಮಿ, ಶಿವಕುಮಾರಸ್ವಾಮಿ, ಶಿವಬಸವಸ್ವಾಮಿ, ಮೈಸೂರು ಘಟಕದ ಅಧ್ಯಕ್ಷ ಮಹದೇವಪ್ಪ, ಜಿಲ್ಲಾ ಬಸವಕೇಂದ್ರದ ಎನ್ ರಿಚ್ ಮಹದೇವಸ್ವಾಮಿ ಇದ್ದರು. ಕಾರ್ಯಕ್ರಮಕೂ ಮುನ್ನ ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ’ವಚನೋತ್ಸವ’ ಲಿಂಗಾಯತ ಧರ್ಮ ಗ್ರಂಥಗಳ ಮೆರವಣಿಗೆ ನಡೆಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ