ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಗ್ರಾಮೀಣ ಜನರಲ್ಲಿ ಹುರುಪು ತುಂಬಿ ಅವರ ಆರೋಗ್ಯ ವೃದ್ಧಿಸುವ ಉದ್ದೇಶದಿಂದ ಈಶ ಫೌಂಡೇಶನ್ ಗ್ರಾಮೋತ್ಸವ ಆಯೋಜಿಸಲಾಗಿದೆ ಎಂದು ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಬ್ಯಾಟ್‌ಮಿಂಟನ್ ಆಟಗಾರ್ತಿ ತೃಪ್ತಿ ಮುರಗುಂಡೆ ಹೇಳಿದರು.ತಾಲೂಕಿನ ಅವಲಗುರ್ಕಿ ಬಳಿಯ ಈಶಾ ಫೌಂಡೇಶನ್‌ನ ಶಿವನ ವಿಗ್ರಹದ ಬಳಿಯ ಮೈದಾನದಲ್ಲಿ ಭಾನುವಾರ ಈಶ ಫೌಂಡೇಶನ್‌ವತಿಯಿಂದ ಗ್ರಾಮೋತ್ಸವ ಪ್ರಯುಕ್ತ ವಿಭಾಗ ಮಟ್ಟದ ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಗಳ ಉಧ್ಘಾಟಸಿ ಮಾತನಾಡಿದರು.
ಆರೋಗ್ಯಕರ ಸ್ಪರ್ಧೆ ಪ್ರಜ್ಞೆಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸಿ ಸಮುದಾಯ, ಸಂಪ್ರದಾಯ ಮತ್ತು ಆರೋಗ್ಯಕರ ಸ್ಪರ್ಧೆಯ ಪ್ರಜ್ಞೆ ಬೆಳೆಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇದರಲ್ಲಿ ಕ್ರೀಡಾ ವೃತ್ತಿಪರರನ್ನು ಹೊರತು ಪಡಿಸದಂತೆ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಪ್ರತಿನಿತ್ಯ ಕ್ರೀಡೆಗಳ ಕ್ರೀಡೆಗಳನ್ನು ಆಡಲು ಅವಕಾಶ ಇಲ್ಲದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಇನ್ನು ಪ್ರತಿ ತಂಡದಲ್ಲಿ ಒಂದೇ ಗ್ರಾಮದವರು ಮಾತ್ರ ಇರುವುದು ವಿಶೇಷವಾಗಿದೆ ಎಂದರುಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ 10 ಜಿಲ್ಲೆಗಳ 3000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇಂದಿನಿಂದ 17ರವರೆಗೆ ನಡೆಯುವ ವಿಭಾಗ ಮಟ್ಟದ ಪಂದ್ಯಾವಳಿ ನಡೆಯಲಿದೆ. ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ಅಂತಿಮ ಪಂದಾವಳಿಗಳು ನಡೆಯಲಿದೆ ಎಂದರು.
ಯಾರು ಬೇಕಾದರೂ ಸ್ಪರ್ಧೆಸಿಪಿಎಡ್ ಕಾಲೇಜಿನ ಪ್ರಾಂಶುಪಾಲ ಬಾಲರಾಜ್ ಮಾತನಾಡಿ, ಇಂತಹ ಗ್ರಾಮೀಣ ಕ್ರೀಡೆಗಳು ಮಾನವನ ದೇಹ ಮತ್ತು ಮನಸ್ಸು ಉಲ್ಲಾಸ ವಾಗಿರಲು ಸಹಕಾರಿಯಾಗಿದೆ. ಈಶ ಫೌಂಡೇಶನ್‌ನ ಗ್ರಾಮೋತ್ಸವದಿಂದ ಪ್ರತಿಯೊಬ್ಬರು ಕ್ರೀಡೆಯಲ್ಲಿ ಬಾಗವಹಿಸಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಈಶ ಫೌಂಡೇಶನ್‌ನ ಸ್ವಾಮಿ ಪ್ರಭೋಧ, ಕೆ.ಎಸ್.ಶರತ್, ರವಿತೇಜ, ಮಹಾಜ್ಞಾನ, ಮತ್ತಿತರರು ಇದ್ದರು.
.