ರಾಮನಗರ: ನಗರದ ಪ್ರದೇಶದ ಪಿಎಂಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದ ಸರಳ ಜೀವನಶೈಲಿ, ಪರಿಸರದೊಂದಿಗಿನ ಅವಿನಾಭಾವ ಸಂಬಂಧ ಪರಿಚಯಿಸಲು ಗ್ರಾಮಾನುಭವ ಪ್ರವಾಸ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬೈರೇಗೌಡ ತಿಳಿಸಿದರು.
ಸ್ಥಳೀಯ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಗಳ ಪರಿಚಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ. ಹಳ್ಳಿಯ ಜನರ ಆತಿಥ್ಯ, ಪರಸ್ಪರ ಸಹಕಾರ ಮನೋಭಾವ ಮತ್ತು ಸಮುದಾಯ ಜೀವನದ ಮೌಲ್ಯಗಳನ್ನು ಹತ್ತಿರದಿಂದ ನೋಡುವುದರಿಂದ ಮಕ್ಕಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ತಂತ್ರಜ್ಞಾನ ಮತ್ತು ಯಾಂತ್ರಿಕ ಬದುಕಿನ ಒತ್ತಡದಿಂದ ಹೊರಬಂದು ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯು ವುದರಿಂದ ಅವರಲ್ಲಿ ಹೊಸ ಚೈತನ್ಯ, ಕುತೂಹಲ ಮತ್ತು ಪ್ರಾಯೋಗಿಕ ಜ್ಞಾನ ವೃದ್ಧಿಯಾಗುತ್ತದೆ, ಇದು ಮುಂದೆ ಅವರ ಭವಿಷ್ಯದ ಬದುಕಿಗೆ ಭದ್ರ ಬುನಾದಿಯಾಗಲಿದೆ ಎಂದು ತಿಳಿಸಿದರು.
ನಮ್ಮ ಪಿಎಂಸಿ ವತಿಯಿಂದ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜಿನ 400 ವಿದ್ಯಾರ್ಥಿಗಳಿಗೆ 8 ತಂಡಗಳಲ್ಲಿ ನಿಯೋಜಿತ ರೈತರ ಕೃಷಿ ತೋಟಗಳಿಗೆ ಗ್ರಾಮಾನುಭವದ ಪ್ರವಾಸ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯ ಪ್ರಗತಿಪರ ರೈತರ ಕೃಷಿ ಭೂಮಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗುವುದು. ಈ ವೇಳೆ ಮಕ್ಕಳಿಗೆ ಕೃಷಿ ಅಧಿಕಾರಿಗಳು, ರೈತರು ಮಕ್ಕಳಿಗೆ ಮಾಹಿತಿ ಒದಗಿಸಲಿದ್ದಾರೆ ಎಂದು ಬೈರೇಗೌಡ ತಿಳಿಸಿದರು.ಸಭೆಯಲ್ಲಿ ಪಿಎಂಸಿ ಶಾಲೆಗೆ ಮಂಜೂರಾಗಿರುವ ಅನುದಾನದಲ್ಲಿ ಮ್ಯೂಸಿಕ್, ಕಂಪ್ಯೂಟರ್ ಶಿಕ್ಷಕರ ನೇಮಕ, ಗೌರವಧನ ನೀಡುವುದು, ಸೆಕ್ಯುರಿಟಿ ನೇಮಕ, ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲಾಯಿತು.
ಕೋಟ್............
- ಬೈರೇಗೌಡ, ಉಪಾಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬೈರೇಗೌಡ ಅಧ್ಯಕ್ಷತೆಯಲ್ಲಿ