ತವರಿಗೆ ಮರಳಿದ ಮಾರ್ಷಲ್‌ ಆರ್ಟ್ಸ್‌ ಸಾಧಕರಿಗೆ ಆತ್ಮೀಯ ಸ್ವಾಗತ

KannadaprabhaNewsNetwork |  
Published : Dec 13, 2024, 12:48 AM IST

ಸಾರಾಂಶ

ಮಾರ್ಷಲ್ ಆರ್ಟ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಜಿಲ್ಲೆಗೆ ಆಗಮಿಸಿದ ಕುಶಾಲನಗರ ಸಮೀಪದ ಕೂಡುಮಂಗಳೂರು ಬಾಲಕಿ ಆಜ್ಞ ಅಮಿತ್ ಮತ್ತು ತರಬೇತುದಾರ ಆಕೆಯ ತಂದೆ ಅಮಿತ್ ಅವರಿಗೆ ಜಿಲ್ಲೆಯ ಗಡಿಭಾಗದಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಮಾರ್ಷಲ್ ಆರ್ಟ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಜಿಲ್ಲೆಗೆ ಆಗಮಿಸಿದ ಕುಶಾಲನಗರ ಸಮೀಪದ ಕೂಡುಮಂಗಳೂರು ಬಾಲಕಿ ಆಜ್ಞ ಅಮಿತ್ ಮತ್ತು ತರಬೇತುದಾರ ಆಕೆಯ ತಂದೆ ಅಮಿತ್ ಅವರಿಗೆ ಜಿಲ್ಲೆಯ ಗಡಿಭಾಗದಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು.

ಗ್ಲೋಬಲ್ ಅಸೋಸಿಯೇಷನ್ ಆಫ್ ಮಿಕ್ಸ್ ಮಾರ್ಷಿಯಲ್ ಆರ್ಟ್ಸ್ ಆಯೋಜಿತ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಜ್ಞ ಇಂಡೋನೇಷಿಯಾದಲ್ಲಿ ನಡೆದ ಮಾರ್ಷಿಯಲ್ ಆರ್ಟ್ಸ್ ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹಮ್ಮಿ ಗುರುವಾರ ಬೆಳಗ್ಗೆ ಕುಶಾಲನಗರಕ್ಕೆ ಆಗಮಿಸಿದ ವೇಳೆ ಗಡಿ ಭಾಗದ ಕಾವೇರಿ ಪ್ರತಿಮೆ ಬಳಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕುಟುಂಬ ಸದಸ್ಯರು ಮಾಡಿಕೊಂಡು ಗೌರವಿಸಿ ಶುಭಾಶಯ ಕೋರಿದರು.

ನಂತರ ಮೆರವಣಿಗೆ ಮೂಲಕ ಕುಶಾಲನಗರ ಪಟ್ಟಣಕ್ಕೆ ಆಗಮಿಸಿ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎಂ ಕೆ ದಿನೇಶ್, ಕುಶಾಲನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಎಂ ಎಂ ಪ್ರಕಾಶ್, ಪುರಸಭೆ ಸದಸ್ಯ ದಿನೇಶ್, ಸಾಹಿತಿ ಕಣಿವೆ ಭಾರದ್ವಾಜ್, ಶಾಸಕರ ಆಪ್ತ ಸಹಾಯಕ ಎಚ್ ಪಿ ರಂಜನ್, ಸೋಮವಾರಪೇಟೆ ಹಿಂದೂ ಮಲಯಾಳ ಸಮಾಜದ ಉಪಾಧ್ಯಕ್ಷ ಎನ್ ಆರ್ ಅಜೀಶ್ , ಕೆ ಆರ್ ರಾಜೇಶ್ ಮುತ್ತಪ್ಪ ಸೇವಾ ಸಮಿತಿ ಅಧ್ಯಕ್ಷ ವರದ, ರಂಜಿತ್, ಕೃಷ್ಣ, ಉದ್ಯಮಿ ಕೆ ಕೆ ಬಾಲಕೃಷ್ಣ, ಕಾವೇರಿ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕುಟುಂಬ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ