ಲಿಂಗದಹಳ್ಳಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ
ಪ್ರಕೃತಿ ವಿಜ್ಞಾನದ ಕಣಜವಾಗಿದ್ದು ಅದರಲ್ಲಿ ಅಡಗಿರುವುದನ್ನು ಹೊರತೆಗೆಯುವುದೇ ವಿಜ್ಞಾನಿಗಳ ಕಾರ್ಯವಾಗಿದೆ ಎಂದು ಲಿಂಗದಹಳ್ಳಿ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗೇಶ್ ಹೇಳಿದ್ದಾರೆ.
ಲಿಂಗದಹಳ್ಳಿಯಲ್ಲಿ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಿಂದ ಶಾಲೆ ಅವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು. ಗಣಿತ ಮತ್ತು ವಿಜ್ಞಾನದ ಆವಿಷ್ಕಾರಗಳನ್ನು ಭಾರತೀಯರು ಬಹಳ ಹಿಂದೆಯೇ ಅರಿತಿದ್ದರಿಂದಲೇ ಮನೆಗಳ ಮುಂದಿನ ಅಂಗಳಕ್ಕೆ ಹಸುವಿನ ಸಗಣಿ, ಗೋಮಯಗಳ ನೀರನ್ನು ಹಾಕುವುದು, ಬಾಗಿಲಿಗೆ ಮಾವಿನ ತೋರಣ ಮತ್ತು ಬಾಳೆ ಗಿಡಗಳನ್ನು ಕಟ್ಟುವುದು ಸೇರಿದಂತೆ ಅನೇಕ ಪ್ರಯೋಗ ಗಳನ್ನು ಮಾಡುವ ಮೂಲಕ ಕ್ರಿಮಿ ಕೀಟಗಳಿಂದ ರಕ್ಷಣೆ ಪಡೆಯುತ್ತಿದ್ದರು ಎಂದು ಹೇಳಿದರು.ನಮ್ಮ ಹಿರಿಯರು ಗ್ರಾಮಗಳ ವ್ಯಾಪ್ತಿಯಲ್ಲಿ ತುಳಸಿಗಿಡ, ಬೇವಿನಮರ, ಮಾವಿನಮರ, ಎಕ್ಕದ ಗಿಡಗಳನ್ನು ಬೆಳೆಸಿ ಅವುಗಳಿಂದ ಬರುವ ಶುದ್ಧ ಗಾಳಿಯನ್ನು ಪ್ರಕೃತಿಯಿಂದಲೇ ನೇರವಾಗಿ ಪಡೆದುಕೊಳ್ಳುತ್ತಿದ್ದರು ಎಂದರುಸಮಾಜಸೇವಕ ಗೋಪಾಲಕೃಷ್ಣ ಮಾತನಾಡಿ ವಿಶ್ವಕ್ಕೆ ಸೊನ್ನೆಯನ್ನು ಮೊದಲ ಅಕ್ಷರದ ಕೊಡುಗೆ ನೀಡಿದವರೂ ಬಾರತೀಯರೇ ಆಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸುವ ಕಾರ್ಯ ಮಾಡುವ ಹವ್ಯಾಸ ಬೆಳೆಸಿಕೊಂಡು ಪ್ರಕೃತಿಯಲ್ಲಿ ನಡೆಯುವ ವಿಸ್ಮಯಗಳನ್ನು ಕಾಣಬಹುದಾಗಿತ್ತು. ಪ್ರಕೃತಿಯಲ್ಲಿರುವ ಸಣ್ಣ ಹುಲ್ಲುಕಡ್ಡಿಯಿಂದ ಹಿಡಿದು ದೊಡ್ಡ ದೊಡ್ಡ ಮರಗಳಾಗಿ ಬೆಳೆಯುವುದೂ ಪ್ರಾಕೃತಿಕ ವಿಜ್ಞಾನ. ಪ್ರತೀ ವಿದ್ಯಾರ್ಥಿಯೂ ಇವುಗಳ ಅಧ್ಯಯನ ಮಾಡುವ ಮೂಲಕ ತಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
1ಕೆಟಿಆರ್.ಕೆ.4ಃ