ಪ್ರತಿ ಜೀವಿಯ ಬದುಕಿಗೆ ಉತ್ತಮ ಸಮತೋಲನ ಪರಿಸರ ಅಗತ್ಯ

KannadaprabhaNewsNetwork |  
Published : Jun 20, 2026, 02:15 AM IST
ಹಾವೇರಿ ನಗರದ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಆಯೋಸಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಸಸಿ ನೆಟ್ಟು ನೀರುಣಿಸಿದರು. | Kannada Prabha

ಸಾರಾಂಶ

ಪ್ರತಿ ಜೀವಿಯ ಬದುಕಿಗೆ ಉತ್ತಮ ಸಮತೋಲನ ಪರಿಸರ ಅಗತ್ಯವಾಗಿದ್ದು, ಪರಿಸರ ಬೆಳೆಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ಹಾವೇರಿ: ಪ್ರತಿ ಜೀವಿಯ ಬದುಕಿಗೆ ಉತ್ತಮ ಸಮತೋಲನ ಪರಿಸರ ಅಗತ್ಯವಾಗಿದ್ದು, ಪರಿಸರ ಬೆಳೆಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.ನಗರದ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಗೂ ವಿಕಲಚೇತನರ ಪುನವರ್ಸತಿ ಕೇಂದ್ರದ ಸಹಯೋಗದೊಂದಿಗೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಆಯೋಸಿದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಟ್ಟು ಅವರು ಮಾತನಾಡಿದರು.ಉತ್ತಮ ಆರೋಗ್ಯಯುತ ಬದುಕಿಗೆ ಪರಿಸರ ಬಹಳ ಮುಖ್ಯವಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಗಿಡ ನೆಡುವ ಕಾರ್ಯ ಮಾಡಬೇಕಾಗಿದೆ. ಸರ್ಕಾರ ಅರಣ್ಯ ಇಲಾಖೆಯ ಜೊತೆಗೆ ಸಹಕಾರ ನೀಡೋಣ ಎಂದರು.ರೆಡ್ ಕ್ರಾಸ್ ಸಂಸ್ಥೆಯ ಪರಿಸರ ಜಾಗೃತಿ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘ- ಸಂಸ್ಥೆಯ ವತಿಯಿಂದ ಹೆಚ್ಚು ಸಸಿ ನೆಡುವ ಕೆಲಸ ಮಾಡಬೇಕಾಗಿದೆ. ಪರಿಸರದಲ್ಲಿನ ಗಿಡಗಳು ನಮಗೆ ಜೀವಾಳು ಆದ ಆಮ್ಲಜನಕ ನೀಡುತ್ತೇವೆ. ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಶ್ರೇಷ್ಠವಾಗಿದೆ. ಪರಿಸರ ಉಳಿಸಿ ಬೆಳಿಸಲು ಎಲ್ಲರಿಗೂ ಪಣತೋಡಬೇಕಾಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯ ರವಿ ಮೆಣಸಿನಕಾಯಿ, ಜಿಲ್ಲಾ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಸಹಕಾರ್ಯದರ್ಶಿ ಡಾ. ಪ್ರದೀಪ ದೊಡ್ಡಗೌಡ್ರ, ಖಜಾಂಚಿ ಪ್ರಭು ಹಿಟ್ನಳ್ಳಿ, ಸದಸ್ಯರಾದ ರವಿ ಹಿಂಚಿಗೇರಿ, ಹನುಮಂತಗೌಡ ಗೊಲ್ಲರ, ಉಡಚಪ್ಪ ಮಾಳಗಿ, ನಾಗಪ್ಪ ಈರಪ್ಪ ಇಚ್ಚಂಗಿ, ಶಿವಯೋಗಯ್ಯ ಹಿರೇಮಠ, ಜಿಲ್ಲಾ ಶಸ್ತ್ರಚಿಕಿತ್ಸ ಡಾ. ಪಿ.ಆರ್. ಹಾವನೂರ, ವಿಜಯಕುಮಾರ ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಕೊಟುರ, ಉಜ್ವಲ್ ಹಿರೇಗೌಡರ್, ಡಿಡಿಆರ್‌ಸಿ ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಪಿಜಿಯೋಥೇರಪಿಸ್ಟ್ ಡಾ. ಅಂಕಿತ ಆನಂದ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಮಿಕರ ಕಿಟ್‌ ಅವ್ಯವಹಾರ ತನಿಖೆಗೆ ಒತ್ತಾಯ
ಪೋಷಕತ್ವ ಯೊಜನೆಗೆ ಅರ್ಹರು ಅರ್ಜಿ ಸಲ್ಲಿಸಿ