ಹೆಣ್ಣು ಏನೂ ಬೇಕಾದರೂ ಸಾಧಿಸಬಹುದು: ಮಮತಾ

KannadaprabhaNewsNetwork |  
Published : Apr 07, 2026, 01:30 AM IST
ಿ | Kannada Prabha

ಸಾರಾಂಶ

ಜಗತ್ತಿನಲ್ಲಿ ಹೆಣ್ಣು ಮನಸ್ಸು ಮಾಡಿದರೆ, ಏನೂ ಬೇಕಾದರೂ ಸಾಧಿಸಬಹುದು. ಎಲ್ಲಾ ಜವಾಬ್ದಾರಿಗಳಿಂದಲೂ ನ್ಯಾಯ ಒದಗಿಸುತ್ತಾ ಸಾಧನೆಗೆ ಮುಂದಾಗಿರುವುದು ಹೆಣ್ಣು ಎಂದು ಉದ್ಯಮಿ ಹಾಗೂ ಕೌಶಲ್ಯ ತರಬೇತುದಾರರು ಹಾಗೂ ವೃತ್ತಿಮಾರ್ಗದರ್ಶಕರಾದ ಮಮತಾ ಕೆ.ಕೆ.ರವರು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಗತ್ತಿನಲ್ಲಿ ಹೆಣ್ಣು ಮನಸ್ಸು ಮಾಡಿದರೆ, ಏನೂ ಬೇಕಾದರೂ ಸಾಧಿಸಬಹುದು. ಎಲ್ಲಾ ಜವಾಬ್ದಾರಿಗಳಿಂದಲೂ ನ್ಯಾಯ ಒದಗಿಸುತ್ತಾ ಸಾಧನೆಗೆ ಮುಂದಾಗಿರುವುದು ಹೆಣ್ಣು ಎಂದು ಉದ್ಯಮಿ ಹಾಗೂ ಕೌಶಲ್ಯ ತರಬೇತುದಾರರು ಹಾಗೂ ವೃತ್ತಿಮಾರ್ಗದರ್ಶಕರಾದ ಮಮತಾ ಕೆ.ಕೆ.ರವರು ತಿಳಿಸಿದರು.ನಗರದ ಶೆಟ್ಟಿಹಳ್ಳಿ ಹೊರವಲಯದ ಜಯನಗರ ದಕ್ಷಿಣದಲ್ಲಿರುವ ವರದರಾಜ ಚಾರಿಟಬಲ್ ಟ್ರಸ್ಟ್ ವತಿಯಿಂದ ವರದರಾಜ ಶಿಕ್ಷಣ ಸಂಸ್ಥೆಗಳ ಸಮೂಹದಲ್ಲಿ ನಡೆದ ಶಕ್ತಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಕೃತಿ ಸಮಾನಳಾದ ಹೆಣ್ಣು ಸಮಾಜದ ಪ್ರತಿಯೊಬ್ಬರನ್ನೂ ಗೌರವಿಸುವುದರಿಂದಲೇ ತಾನೂ ಗೌರವಿಸಲ್ಪಡುತ್ತಾಳೆ. ಹಾಗಾಗಿ ಯಂತ್ರಗಳ ಸಾಮಾಜಿಕ ಮಾಧ್ಯಮಗಳ ಜೊತೆಗಿನ ಬಾಂಧವ್ಯಕ್ಕಿಂತಲೂ ಮಾನವೀಯ ಬಾಂಧವ್ಯವನ್ನು ಗೌರವಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ತಮ್ಮ ವೃತ್ತಿಪರ ಕ್ಷೇತ್ರದ ಕಡೆಗಿನ ಆಕಾಂಕ್ಷೆಯ ಜೊತೆ-ಜೊತೆಯೇ ತಮ್ಮ ವೈಯಕ್ತಿಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು. ಹೆಣ್ಣು ಶಿಕ್ಷಣವಂತೆಯಾಗಿ, ಉದ್ಯೋಗವಂತೆಯಾದರೂ ಆರೋಗ್ಯವಂತೆಯಾಗುವುದು ಬಹಳ ಮುಖ್ಯವಾಗಿರುತ್ತದೆ. ಆರೋಗ್ಯವಂತ ಹೆಣ್ಣು ತನ್ನ ಹಾಗೂ ತನ್ನ ಕುಟುಂಬದವರ ಆರೋಗ್ಯವನ್ನಷ್ಟೇ ಅಲ್ಲದೆ ಸಮಾಜದ ಆರೋಗ್ಯವನ್ನೂ ಕಾಪಾಡುವ ಗುರುತರ ಜವಾಬ್ದಾರಿ ಹೊಂದಿರುತ್ತಾಳೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ‘ವೈದ್ಯ ಶ್ರೀ’ ಪ್ರಶಸ್ತಿ ಸ್ವೀಕರಿಸಿದ್ದ ಕಸ್ತೂರಬಾ ಆಸ್ಪತ್ರೆಯ ವೈದ್ಯರಾದ ಡಾ. ವಿಶಾಖ.ಎಚ್. ಮಾತನಾಡುತ್ತಾ ಇಂದು ಎಲ್ಲ ರಂಗದಲ್ಲಿ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ-ಪ್ರೋತ್ಸಾಹ ಅಗತ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನನ್ಯ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಸಮಾರಂಭದಲ್ಲಿ ಪ್ರಶಸ್ತಿಗೆ ಭಾಜನರಾದ ಸಾಧಕರನ್ನು ಉಲ್ಲೇಖಿಸಿ, ಮಹಿಳೆಯರ ಸಾಮಾಜಿಕ ಬದ್ಧತೆ ಮತ್ತು ಸಬಲೀಕರಣದ ಮಹತ್ವವನ್ನು ವಿವರಿಸಿದರು.

ಮುಖ್ಯಅತಿಥಿಯಾಗಿ ಆಗಮಿಸಿದ್ದ ವರದರಾಜ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಮುಬಾರಕ್‌ ಮಾತನಾಡಿ, ಪ್ರಸ್ತುತ ಜಗತ್ತಿನ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆಯೇ ಮಿಗಿಲಾಗುತ್ತಿದ್ದು, ಹೆಣ್ಣು ತಾನು ಮಾತೆಯಾಗಿ - ಸಹೋದರಿಯಾಗಿ - ಸತಿಯಾಗಿ - ಬಂಧುವಾಗಿ ಕೌಟುಂಬಿಕ ಶ್ರೇಯದ ಜೊತೆ-ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ, ರಾಜಕೀಯ, ವೈದ್ಯಕೀಯ, ಸಂಶೋಧನೆ, ವಿಜ್ಞಾನ, ತಂತ್ರಜ್ಞಾನಗಳಾಗಿ ಸರ್ವಕ್ಷೇತ್ರಗಳಲ್ಲಿಯೂ ಸಾಧನೆಯ ಉತ್ತುಂಗ ಏರುತ್ತಿದ್ದಾರೆ. ಅಂತಹ ಸಾಧಕ ಮಹಿಳೆಯರನ್ನು ಗೌರವಿಸಿ ಸನ್ಮಾನಿಸುವ ಅರ್ಥಪೂರ್ಣ ಹಾಗೂ ವಿಶಿಷ್ಟ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ಇಂತಹ ಸಾಧಕರನ್ನು ಪ್ರೇರಣೆಯಾಗಿ ಸ್ವೀಕರಿಸಿ ತಾವೂ ಶ್ರೇಷ್ಠ ಸಾಧನೆಗಳನ್ನು ಮಾಡಬೇಕು ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ವರದರಾಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ದುರ್ಗಾದಾಸ್ ಅಸ್ರಣ್ಣ, ವರದರಾಜ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವರುಣ್ ಅಸ್ರಣ್ಣರವರು ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವರದರಾಜ ಕಾಲೇಜಿನ ಉಪ ಆಡಳಿತಾಧಿಕಾರಿ ಪ್ರೊ.ಮೊಹಬೂಬ್ ಅಲೀ, ಪ್ರೊ.ಆಷಿಯಾಭಾನು, ಪ್ರೊ. ವಿದ್ಯಾಶ್ರೀ, ಪ್ರೊ.ಲಕ್ಷ್ಮೀ, ಪ್ರೊ. ಶ್ರೀನಿವಾಸ್, ವಿದ್ಯಾರ್ಥಿನಿಯರಾದ ಕು.ರಂಜಿತ ಮತ್ತು ಕು.ಲಿಖಿತ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಕಸ್ಮಿಕ ಬೆಂಕಿ: 2 ರಾಗಿ ಮೆದೆ ಭಸ್ಮ
ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯ ಗಡಿ ಪರಿಷ್ಕರಿಸಿ