-ಮಸ್ಕಿ ಪಟ್ಟಣದ ಸಂತೆ ಬಜಾರಿನ ನಿವಾಸಿ ಮಹಿಳೆ ಆಟೋದಲ್ಲೇ ಹೆರಿಗೆ
ಕನಡಪ್ರಭ ವಾರ್ತೆ ಮಸ್ಕಿ: ಸಂತೆ ಬಜಾರ್ ನಿವಾಸಿಯೊಬ್ಬರು ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ತೆರಳಲು ಆಟೋ ಹತ್ತಿದ್ದಾರೆ. ಹೆರಿಗೆ ನೋವು ತೀವ್ರಗೊಂಡು ಆಟೋದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಕುಟುಂಬಸ್ಥರು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹೆರಿಗೆ ನೋವು ಹೆಚ್ಚಾಗಿದೆ. ಅಟೋ ಚಾಲಕ ರಸ್ತೆ ಪಕ್ಕದಲ್ಲಿ ಆಟೋ ನಿಲ್ಲಿಸಿ ಹೆರಿಗೆ ಆಗಲು ಅನುವು ಮಡಿಕೊಟ್ಟಿದ್ದಾನೆ. ಅಕ್ಕಪಕ್ಕದ ಮನೆಯವರು ಆಟೋ ಸುತ್ತ ಪರದೆ ಕಟ್ಟಿ ಹೆರಿಗೆ ಸುಗಮವಾಗಲು ಸಹಕರಿಸಿದ್ದಾರೆ. ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿಷಯ ತಿಳಿದ ಆಶಾ ಕಾರ್ಯಕರ್ತೆಯರು ಹೆರಿಗೆಯಾದ ಸ್ಥಳಕ್ಕೆ ಆಗಮಿಸಿ ತಾಯಿ ಮತ್ತು ಮಗುವನ್ನು ಸರ್ಕಾರಿ ಆಸಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.------------------
ಫೋಟೋ: 3-ಎಂಎಸ್ಕೆ-02:ಮಸ್ಕಿ ಪಟ್ಟಣದ ಸಂತೆ ಬಜಾರಿನ ನಿವಾಸಿ ಮಹಿಳೆಯೊಬ್ಬರು ಆಟೋದಲ್ಲಿ ಹೆರಿಗೆ ನಡೆಯುತ್ತಿರುವುದು. ಸುತ್ತಮುತ್ತಲಿನ ಮಹಿಳೆಯರು ಆಟೋ ಸುತ್ತ ಪರದೆ ಕಟ್ಟಿ ಹೆರಿಗೆ ಸುಗಮವಾಗಲು ಸಹಕರಿಸಿದ್ದಾರೆ.
------------------