ಗದಗ: ಸ್ತ್ರೀ ಎಲ್ಲ ಕಾಲಘಟ್ಟಗಳಲ್ಲಿ ಸಂವೇದನಾಶೀಲಳಾಗಿದ್ದು, ಸಮಾಜ ಕಟ್ಟುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾಳೆ ಎಂದು ಮುಂಡರಗಿ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಹೇಳಿದರು.
ಇಂದಿನ ಆಧುನಿಕ ಕಾಲಘಟ್ಟದಲ್ಲಿಯೂ ಸ್ತ್ರೀ ಸಂವೇದನೆಯ ಹಲವಾರು ಆಯಾಮಗಳನ್ನು ಕಾಣಲಾಗುತ್ತದೆ. ಹಿಂದಿನಿಂದಲೂ ಮಹಿಳೆಯನ್ನು ದ್ವಿತೀಯ ದರ್ಜೆ ಎಂದು ನೋಡುತ್ತಾ ಬಂದ ಕಾಲಘಟ್ಟದಿಂದ ಇಂದು ಎಲೆಮರೆಕಾಯಿಯಂತೆ ಅದೆಷ್ಟೋ ಸಂಕಿರಣತೆಗಳನ್ನು ಸ್ತ್ರೀ ತನ್ನಲ್ಲೆ ಒದಿಗಿಟ್ಟುಕೊಂಡಿರುವುದು ಕೂಡ ಅಷ್ಟೇ ಸತ್ಯ ಎಂದರು.
ನಿವೃತ್ತ ಪ್ರಾಧ್ಯಾಪಕ ಎಂ.ಎನ್. ಕಾಮನಹಳ್ಳಿ, ಮಕ್ಕಳ ಸಾಹಿತಿ ಡಾ. ರಾಜೇಂದ್ರ ಗಡಾದ ಮಾತನಾಡಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿದಾನಿಗಳಾದ ರತ್ನಾ ಬದಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಲೋಚನಾ ಐಹೊಳೆ ವಿಷಯ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಬಿ. ಗೌಡರ್, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅಸುಂಡಿ ಆಗಮಿಸಿದ್ದರು. ವಚನ ಚಿಂತವನ್ನು ಅಶೋಕ ಬರಗುಂಡಿ ನಡೆಸಿದರು. ಎಸ್.ಎಂ. ಮರಿಗೌಡರ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪನ್ಯಾಸಕ ಶಕುಂತಲಾ ಸಿಂಧೂರಿ ಪರಿಚಯಿಸಿದರು.
ಡಾ. ಗಿರಿಜಾ ಹಸಬಿ ಸ್ವಾಗತಿಸಿದರು. ಪುಷ್ಪಾ ಭಂಡಾರಿ ಹಾಗೂ ವಾರದ ಸಂಗಡಿಗರು ವಚನ ಗಾಯನ ನೆರವೇರಿಸಿದರು. ಅನ್ನಪೂರ್ಣಾ ವರವಿ, ಶಾಂತಾ ಮುಂದಿನಮನಿ, ಗೌರಕ್ಕ ಬಡಿಗಣ್ಣವರ, ಬೂದಪ್ಪ ಅಂಗಡಿ, ವಿ.ಕೆ. ಕರಿಗೌಡರ ಉಪಸ್ಥಿತರಿದ್ದರು.