ಮಹಿಳೆ ಎಂದರೆ ಶಕ್ತಿ, ಧೈರ್ಯ, ಪ್ರೀತಿ, ಕಾಳಜಿ: ಡಾ. ಸವಿತಾ

KannadaprabhaNewsNetwork |  
Published : Mar 10, 2025, 12:15 AM IST
09 ಎಚ್‍ಆರರ್ 02 & 2ಎ ನಗರದ ಮಾರುತಿ ಗಾಮೆರ್ಂಟ್ಸ್  ವತಿಯಿಂದ  ಆಯೋಜಿಸಿದ್ದ  ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ  ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ. ಸವಿತಾ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಹಿಳೆ ಇಲ್ಲದ ವಿಶ್ವವನ್ನು ಊಹಿಸಲು ಸಾಧ್ಯವೇ ಖಂಡಿತ ಇಲ್ಲ. ಮಹಿಳೆ ಎಂದರೆ ಶಕ್ತಿ, ಧೈರ್ಯ, ಪ್ರೀತಿ, ಕಾಳಜಿ, ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳಾ ಪಾತ್ರ ಮುಖ್ಯವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ.ಸವಿತಾ ಹೇಳಿದ್ದಾರೆ.

- ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಡಾ.ಸವಿತಾ - - -

ಕನ್ನಡಪ್ರಭ ವಾರ್ತೆ ಹರಿಹರ

ಮಹಿಳೆ ಇಲ್ಲದ ವಿಶ್ವವನ್ನು ಊಹಿಸಲು ಸಾಧ್ಯವೇ ಖಂಡಿತ ಇಲ್ಲ. ಮಹಿಳೆ ಎಂದರೆ ಶಕ್ತಿ, ಧೈರ್ಯ, ಪ್ರೀತಿ, ಕಾಳಜಿ, ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳಾ ಪಾತ್ರ ಮುಖ್ಯವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ.ಸವಿತಾ ಹೇಳಿದರು.

ನಗರದ ಶಿವಮೊಗ್ಗ ರಸ್ತೆಯ ಮಾರುತಿ ಗಾರ್ಮೆಂಟ್ಸ್‌ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆ ಅಮ್ಮನಾಗಿ, ಸೋದರಿಯಾಗಿ, ಮಡದಿಯಾಗಿ, ಅಜ್ಜಿಯಾಗಿ, ಸ್ನೇಹಿತೆಯಾಗಿ, ಶಿಕ್ಷಕಿಯಾಗಿ, ಮಾರ್ಗದರ್ಶಕಿಯಾಗಿ ಹೀಗೆ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ ಎಂದರು.

ಮಗು ಜನಿಸಿದ ನಂತರ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ದೇಹದ ಗಾತ್ರಕ್ಕೆ ತಕ್ಕಂತೆ ವಿವಿಧ ನೋವುಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮೂಲಕಾರಣ ಪ್ರಸ್ತುತದ ಆಹಾರ ಪದ್ಧತಿ. ಸರ್ಕಾರ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಲಾಭ ಪಡೆದು, ಸ್ವಾವಲಂಬಿ ಜೀವನ ನಡೆಸುವುದು ಮುಖ್ಯ ಎಂದರು.

ನಗರ ಠಾಣೆಯ ಪಿಎಸ್‍ಐ ಶ್ರೀಪತಿ ಗಿನ್ನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಮುಂದೆ ಇದ್ದಾರೆ ನಮ್ಮ ದೇಶದ ರಾಷ್ಟ್ರಪತಿ ಸಹ ಬುಡಕಟ್ಟು ಮಹಿಳೆಯಾಗಿದ್ದರೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅರ್ಹತೆ ಇರುವ ಮಹಿಳೆಯರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆ ಗಳನ್ನು ಜಾರಿಗೆ ತಂದಿವೆ. ಇದರ ಸದುಪಯೋಗ ಪಡೆದು ಉನ್ನತ ಸ್ಥಾನಕ್ಕೆ ಏರಬೇಕು ಎಂದು ಹೇಳಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ರುದ್ರೇಗೌಡ ಮಾತನಾಡಿ, ಹೆಣ್ಣು ಸಂಸಾರದ ಕಣ್ಣಷ್ಟೆ ಅಲ್ಲ ಜಗತ್ತಿನ ಅದ್ಭುತವಾದ ಶಕ್ತಿಯಾಗಿದ್ದಾಳೆ. ಇಡೀ ಜಗತ್ತಿನಲ್ಲಿ ಪೂಜೆ ಮಾಡಲು ಅರ್ಹ ವ್ಯಕ್ತಿ ಎಂದರೆ ಅದು ಕೇವಲ ತಾಯಿ ಮಾತ್ರ. ಕಾನೂನಿನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಹಲವಾರು ಸೌಲಭ್ಯಗಳಿದ್ದು, ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಮಾರುತಿ ಗಾರ್ಮೆಂಟ್ಸ್‌ ಮಾಲೀಕರಾದ ಸಂಪತ್ ಕುಮಾರ್, ಸಂಪತ್, ಜಗದಂಬಾ ಸಂಪತ್, ಮ್ಯಾನೇಜರ್ ಮಹೇಂದ್ರಾ, ವ್ಯವಸ್ಥಾಪಕ ದಯಾನಂದ, ಪಿಎಸ್‍ಐ ವಿಜಯಕುಮಾರ, ಎಕ್ಕೆಗೊಂದಿ ಎಚ್.ಡಿ. ರುದ್ರಗೌಡ, ವಿರೇಶ ಅಜ್ಜಣ್ಣ, ಕೋಮಲ, ರಾಜೇಶ್ವರಿ, ಜಿ.ಕೆ. ಪಂಚಾಕ್ಷರಿ ಸೇರಿದಂತೆ ಇತರರು ಇದ್ದರು.

- - - -09ಎಚ್‍ಆರರ್ 02 & 2ಎ:

ಹರಿಹರ ನಗರದ ಮಾರುತಿ ಗಾರ್ಮೆಂಟ್ಸ್‌ ವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮಕ್ಕೆ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ. ಸವಿತಾ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ