ಭರತ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟನೆಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಹಾಗೂ ಕಾಳವ್ವೆ ತಂಡದಿಂದ ಆಯೋಜಿಸಿದ್ಧ ಭರತ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆತ್ತು ಹೊತ್ತ ತಾಯಿ ಮಕ್ಕಳಿಗೆ ತುತ್ತು ನೀಡಿ, ಆಟ-ತುಂಟಾಟಗಳನ್ನು ಸಹಿಸಿ, ಧಾರ್ಮಿಕತೆ, ಗುರು ಪದ್ಧತಿ, ಮಠ, ಪೂಜೆ ಹಾಗೂ ಸಂಸ್ಕಾರ ಇತ್ಯಾದಿಗಳ ಬಗ್ಗೆ ಮನವರಿಕೆ ಮಾಡುವ ಕರುಣಾಮಯಿ ಮಹಿಳೆ ಮನೆಯಲ್ಲಿ ನಡೆದುಕೊಳ್ಳುವ ವಿಚಾರ ತಿಳಿಸುತ್ತಾಳೆ. ಅವಿಭಕ್ತ ಕುಟುಂಬದ ಸಾಮರಸ್ಯಕ್ಕೆ ಮಹಿಳೆಯೇ ಕಾರಣ ಎಂದರು.
ಪ್ರಸ್ತುತ ಸಮಾಜದಲ್ಲಿ ಮಹಿಳೆ ಇದ್ದಂತೆ ಮನೆ, ಮನೆಯಿದ್ದಂತೆ ಮಠ, ಮಠವಿದ್ದಂತೆ ಸಮಾಜದ ಸಬಲೀಕರಣ ಎನ್ನಬಹುದು. ಅಕ್ಕಮಹಾದೇವಿ ಸಾಂಸರಿಕ ಜೀವನ ತ್ಯಜಿಸಿ ವೈರಾಗ್ಯದತ್ತ ಹೋದವರು. ಸಾಮಾಜಿಕ ಬದಲಾವಣೆಗೆ ಸುಮಾರು 430ಕ್ಕೂ ಹೆಚ್ಚು ವಚನಗಳನ್ನು ರಚಿಸಿದ ಕೀರ್ತಿ ಅಕ್ಕಮಹಾದೇವಿಯದು ಎಂದು ತಿಳಿಸಿದರು.12ನೆ ಶತಮಾನದಲ್ಲಿ ಸಾಹಿತ್ಯ ಪರಂಪರೆಗೆ ಅಮೋಘ ಕೊಡುಗೆ ಸಲ್ಲಿಸಿದ ಅಕ್ಕಮಹಾದೇವಿ ಸಮಕಾಲೀನರಾದ ಕಾಳವ್ವೆ ಮತ್ತು ಆಕೆ ಪತಿ ಉರಿಲಿಂಗಪೆದ್ದಿಯ ಕಾಯಕ ನಿಷ್ಟೆ, ವ್ಯವಸ್ಥೆ, ಸತ್ಯ ಶುದ್ಧತೆ, ಆಸೆ ಭವದ ಬೀಜ, ನಿರಾಸೆ ಸತ್ಯಮುಕ್ತಿ ಮುಂತಾದ ವಚನಗಳನ್ನು ಉದಾಹರಿಸಿದರು.
ಇದೇ ವೇಳೆ ಕವಯತ್ರಿ ರೇಖಾ ಶಾಸ್ತ್ರಿ ಮತ್ತು ಗೌರಮ್ಮ ಬಸವೇಗೌಡರ ಕುಟುಂಬದ ಸುಚಿತ್ರ ಸುದರ್ಶನ್ ಅವರನ್ನು ಸಂಘದ ಮಾಜಿ ಉಪಾಧ್ಯಕ್ಷೆ ದಾಕ್ಷಾಯಣಿ ಸತೀಶ್ಚಂದ್ರ ಸನ್ಮಾನಿಸಿದರು. ಬಳಿಕ ವಿವಿಧ ಆಟೋಟ ಸ್ಫರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಹಾಗೂ ಕಾಳವ್ವೆ ತಂಡದಿಂದ ಆಯೋಜಿಸಿದ್ಧ ಭರತ ಹುಣ್ಣಿಮೆ ಕಾರ್ಯಕ್ರಮವನ್ನು ಕವಯತ್ರಿ ಯು.ಎಂ.ರೇಖಾಶಾಸ್ತ್ರಿ ಉದ್ಘಾಟಿಸಿದರು. ರಮ್ಯಾ, ಕುಸಮಾ, ಆಶಾ, ಪಾರ್ವತಿ ಮತ್ತಿತರರಿದ್ದರು.