ತರೀಕೆರೆ ನಾರಿ ಶಕ್ತಿ ಬಳಗದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಮಹಿಳೆಯರ ಸಬಲತೆ ಮತ್ತು ನಾಯಕತ್ವ ಅವರ ಕೈಯಲ್ಲಿ ಇದೆ ಅವರು ತಮ್ಮ ಹಕ್ಕು ಮತ್ತು ನಾಯಕತ್ವವನ್ನು ಅವರೇ ಪಡೆದುಕೊಳ್ಳಬೇಕು ಬೇರೆಯವರು ಕೊಡುವಂತದ್ದಲ್ಲ, ಇಂದು ನಾವೆಲ್ಲ ನೆಮ್ಮದಿಯಾಗಿರಲು ಸುಖ ಸಂಸಾರದ ಮಾರ್ಗ ಸೂಚಿಯಾಗಿದ್ದಾಳೆ ಮಹಿಳೆ ಎಂದು ಅರುಂಧತಿ ಹೆಗಡೆ ತಿಳಿಸಿದರು.
ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸಿನ ಎಲ್‌ಐಸಿ ಬಡಾವಣೆ ಸಮುದಾಯ ಕೇಂದ್ರದಲ್ಲಿ ತಾಲೂಕು ನಾರಿ ಶಕ್ತಿ ಬಳಗದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಜಿಲ್ಲಾ ಮತ್ತು ತಾಲೂಕು ಜನಪದ ಸಾಹಿತ್ಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಹಿಳೆಯರ ಸಬಲತೆ ಮತ್ತು ನಾಯಕತ್ವ ಪಡೆಯುವುದು ಅವರ ಕೈಯಲ್ಲಿ ಇದೆ. ಅವರು ತಮ್ಮ ಹಕ್ಕು ಮತ್ತು ನಾಯಕತ್ವವನ್ನು ಅವರೇ ಪಡೆದುಕೊಳ್ಳಬೇಕಾಗುತ್ತದೆ. ಇವುಗಳನ್ನು ಯಾರು ಕೊಡುವಂತದ್ದಲ್ಲ ಹಾಗಾಗಿ ಮಹಿಳೆಯರು ಸಮಾಜದಲ್ಲಾಗಲಿ ಕುಟುಂಬ ಅಥವಾ ಕೆಲಸ ಮಾಡುವ ಜಾಗದಲ್ಲಿ ಅವರ ಹಕ್ಕುಗಳನ್ನು ಮತ್ತು ನಾಯಕತ್ವವನ್ನು ಅವರೇ ತೆಗೆದು ಕೊಂಡು ಕೆಲಸ ಮಾಡಬೇಕಾಗುತ್ತದೆ ಎಂದರು. ಭಾರತದ ಸಂವಿಧಾನ ಮಹಿಳೆಯರಿಗೆ ಕೊಟ್ಟಿರುವ ಸ್ಥಾನಮಾನ ಮತ್ತು ಸಮಾನತೆ ಬಳಕೆ ಮಾಡಿ ಧೈರ್ಯದಿಂದ ಬದುಕಬೇಕಾಗುತ್ತದೆ ಅಂತ ಸಮಸ್ಯೆಗಳು ಎದುರಾದಾಗ ನಮ್ಮಂತ ನಾರಿ ಶಕ್ತಿ ಬಳಗ ಇಂಥ ವಿಚಾರಗಳ ಕುರಿತು ಹೋರಾಟ ಮಾಡಲು ಸಹ ಸಿದ್ಧವಾಗಿರುತ್ತದೆ ಹಾಗಾಗಿ ಪ್ರತಿ ಮಹಿಳೆ ಧೈರ್ಯವಾಗಿ ಬದುಕಬೇಕು ಎಂದು ಕರೆ ನೀಡಿದರು.ತಾಲೂಕು ಪಂಚಾಯತಿ ನಿವೃತ್ತ ಕಾರ್ಯನಿರ್ವಣಾಧಿಕಾರಿ ವಿಶಾಲಕ್ಷಮ್ಮ ಮಾತನಾಡಿ, ನಮ್ಮ ನಾರಿ ಶಕ್ತಿ ಬಳಗದಿಂದ ಈ ಅಂತಾರಾಷ್ಟ್ರೀಯ ಮಹಿಳೆ ದಿನಾಚರಣೆ ಆಚರಿಸುತ್ತಿರುವುದು ಬಹಳ ಸಂತೋಷ ತಂದಿದೆ. ನಮ್ಮ ನಾರಿ ಶಕ್ತಿ ಬಳಗ ಸಾರ್ವಜನಿಕರು ಮತ್ತು ಸಮಾಜಕ್ಕೆ ಅನುಕೂಲವಾಗುವಂತ ಕಾರ್ಯಕ್ರಮ ನೀಡುತ್ತಾ ಬಂದಿದೆ. ಇದರ ಜೊತೆ ಈ ಬಾರಿ ಜನಪದ ಸಾಹಿತ್ಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.ತಾಪಂ ಮಾಜಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್ ಮಾತನಾಡಿ, ಮಹಿಳೆಯರು ತಮ್ಮಲ್ಲಿರುವ ಅಂತರ್ಗತ ಶಕ್ತಿ ಮತ್ತು ಸಾಸ್ಥ್ಯದ ಮೇಲೆ ನಂಬಿಕೆ ಇಟ್ಟು, ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು. ನಾರಿ ಶಕ್ತಿ ಬಳಗದಿಂದ ಹಿಂದುಳಿದ ಮಹಿಳೆ ಯನ್ನು ಮುಖ್ಯ ವಾಹಿನಿಗೆ ತರುವುದೇ ನಮ್ಮ ನಾರಿ ಶಕ್ತಿ ಬಳಗದ ಉದ್ದೇಶ. ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಉಪಯೋಗಿಸಿ ಬದುಕಿ ಬೆಳೆಯಬೇಕೆಂದು ತಿಳಿಸಿದರು.ನಾರಿ ಶಕ್ತಿ ಬಳಗದ ಸದಸ್ಯೆ ಪುಟ್ಟಮ್ಮ ರಘು ಸ್ವಾಮಿ ಮಾತನಾಡಿ, ಮಹಿಳೆಯರು ತಮ್ಮ ಸ್ವಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟು ನಡೆದಾಗ ಮಾತ್ರ ಅಸಾಧ್ಯವಾದುದನ್ನು ಸಾಧಿಸಬಹುದು ಎಂದರು.ಕನ್ನಡ ಜನಪದ ಸಾಹಿತ್ಯದ ಜಿಲ್ಲಾ ಅಧ್ಯಕ್ಷೆ ವಿಶಾಲಾಕ್ಷಮ್ಮ, ಹೋಬಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾದ ಪುಷ್ಪಾ ಮಧು ಪುಟ್ಟಮ್ಮ ಮತ್ತು ಮಹದೇವಿ ಅವರಿಗೆ ನಾರಿ ಶಕ್ತಿ ಬಳಗದಿಂದ ಸನ್ಮಾನಿಸಲಾಯಿತುಹಾದಿಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ರೇಖಾ ರವಿಶಯ್ಯ, ಸುಧಾ ಶ್ರೀನಿವಾಸ್ , ದೋರನಹಾಳು ಗ್ರಾ. ಪಂ. ಮಾಜಿ ಅಧ್ಯಕ್ಷೆ ಶೀಲ ಕೃಷ್ಣಮೂರ್ತಿ ಊಡೇವಾ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಜಾತಾ, ಕಲ್ಲೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಪುಷ್ಪಾ , ಕೆಂಚಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷೆ ಶ್ವೇತಾ ಮಧು ಹಾಗೂ ಮಹದೇವಿ, ಸುಧಾ, ಶೀಲಾ ಮತ್ತಿತರರು ಉಸ್ಥಿತರಿದ್ದರು.