ಮಹಿಳೆ ಆರೋಗ್ಯದಲ್ಲಿದೆ ಸಮಾಜದ ಆರೋಗ್ಯ

KannadaprabhaNewsNetwork |  
Published : Sep 24, 2024, 01:46 AM IST
ಮಹಿಳೆ ಆರೋಗ್ಯದಲ್ಲಿದೆ ಸಮಾಜದ ಆರೋಗ್ಯ | Kannada Prabha

ಸಾರಾಂಶ

ಮಹಿಳೆ ಕುಟುಂಬದ ಆರೋಗ್ಯದ ಜೊತೆಗೆ ತನ್ನ ದೇಹದಲ್ಲಾಗುವ ಬದಲಾವಣೆಗಳು ಹಾಗೂ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್.ಪರಮೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಮಹಿಳೆ ಕುಟುಂಬದ ಆರೋಗ್ಯದ ಜೊತೆಗೆ ತನ್ನ ದೇಹದಲ್ಲಾಗುವ ಬದಲಾವಣೆಗಳು ಹಾಗೂ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್.ಪರಮೇಶ್‌ ತಿಳಿಸಿದರು.ಅವರು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬ್ರೆಸ್ಟ್‌ ಹಾಗೂ ಬ್ರೆಸ್ಟ್‌ ಫೀಡಿಂಗ್‌ ಕಮಿಟಿ, ಆನ್ಕೋ ಕಮಿಟಿ, ಕೆಎಸ್‌ಒಜಿಎ, ಟಿಎಸ್‌ಒಜಿ ಹಾಗೂ ತುಮಕೂರು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸೊಸೈಟಿ ವತಿಯಿಂದ ನಡೆದ ಬ್ರೆಸ್ಟ್‌ಕಾನ್‌ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನಾರೋಗ್ಯಕರ ಅಭ್ಯಾಸಗಳು ಹಾಗೂ ಜೀವನಶೈಲಿಯಿಂದ ಮಹಿಳೆಯರಲ್ಲಿ ಸ್ತನಗಳ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತಿದ್ದು ಮಹಿಳೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಇಡೀ ಸಮಾಜದ ಆರೋಗ್ಯ ಸುಧಾರಿಸುತ್ತದೆ ಎಂದು ಕರೆನೀಡಿದರು.ಎಸ್‌ಎಫ್‌ಬಿಸಿ ಅಧ್ಯಕ್ಷೆ ಡಾ.ಚಾರುಲತಾ ಬಪಾಯಿ ಮಾತನಾಡಿ ಗಟ್ಟಿಯಾದ ಸ್ತನಗಳು, ಸ್ತನಗಳ ತೊಟ್ಟುಗಳಲ್ಲಿ ಸ್ರವಿಸುವಿಕೆ, ಅಸಮತೂಕ ಮುಂತಾದ ಲಕ್ಷಣಗಳು ಕಂಡು ಬಂದಾಗ ಮಹಿಳೆ ಕೂಡಲೇ ಹತ್ತಿರದ ಸ್ತ್ರೀರೋಗ ತಜ್ಞರನ್ನ ಭೇಟಿ ಮಾಡುವುದು ಒಳಿತು. ಸ್ತನಗಳಲ್ಲಿ ಗಂಟು ಕಂಡು ಬಂದು ತೀವ್ರ ನೋವಿದ್ದರೂ ಕೂಡ ಆತಂಕಕಾರಿಯಾಗಿದ್ದು ಕ್ಯಾನ್ಸರ್‌ ತರುವ ಅಪಾಯವನ್ನೂ ಹೆಚ್ಚಿಸುವ ಸಾಧ್ಯತೆಯಿದೆ ಎಂದರು.ಡಾ.ಲಿಲಿತಾ, ಡಾ.ಸುಪ್ರಾ, ಡಾ.ರವಿಶಂಕರ್‌, ಡಾ.ಆನಂದ್‌, ಡಾ.ಭಾರತಿ ರಾಜಶೇಖರ್ ಬ್ರೆಸ್ಟ್‌ ಸಮಸ್ಯೆಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ‌ಕೆಎಸ್‌ಓಜಿಎ ಭಾವಿ ಅಧ್ಯಕ್ಷ ಡಾ.ದರ್ಗಾದಾಸ್‌ ಅಸ್ರನ್ನ, ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞರಾದ ಡಾ.ರೇಖಾ ಗುರುಮೂರ್ತಿ, ಡಾ.ರಚನಾ, ಡಾ.ಹೇಮಾ, ಸೇರಿದಂತೆ ಸಿದ್ಧಗಂಗಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!