)
ಕನ್ನಡಪ್ರಭ ವಾರ್ತೆ ಬೆಂಗಳೂರು
ಪತ್ನಿಗೆ 8 ಲಕ್ಷ ರು. ಪರಿಹಾರ, ಮಗುವಿನ ನಿರ್ವಹಣೆಗೆ ಮಾಸಿಕ 15 ಸಾವಿರ ರು.ಮತ್ತು ಶೈಕ್ಷಣಿಕ ವೆಚ್ಚಕ್ಕಾಗಿ ವಾರ್ಷಿಕ 1.6 ಲಕ್ಷ ರು. ಪಾವತಿಸುವಂತೆ ನಗರದ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮೋಹನ್ ಪ್ರಭು ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಚಾರಣೆ ವೇಳೆ ಪತಿ, ತಮ್ಮ ಪತ್ನಿ ಉದ್ಯೋಗದಲ್ಲಿದ್ದಾರೆ ಎಂದು ವಾದಿಸಲು ಆಕೆಯ ಕೆಲವು ಫೋಟೋಗಳು, ಲಿಂಕ್ಡಿನ್ ಪ್ರೊಫೈಲ್ ಮತ್ತು ಫೇಸ್‌ಬುಕ್ ಪ್ರೊಫೈಲ್ ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೆ, ಹೆಂಡತಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಆಕೆಗೆ ಆರ್ಥಿಕ ನೆರವಿನ ಅಗತ್ಯವಿಲ್ಲ ಎಂಬ ವಾದಿಸಿದ್ದರು.ಈ ವಾದ ತಿರಸ್ಕರಿಸಿದ ನ್ಯಾಯಾಲಯ, ಲಿಂಕ್ಡಿನ್ ಪ್ರೊಫೈಲ್ ಮತ್ತು ಫೇಸ್‌ಬುಕ್ ಪ್ರೊಫೈಲ್ ಫೋಟೋಗಳನ್ನು ಆಧರಿಸಿ ಮಹಿಳೆ ಸ್ವಂತ ಜೀವನ ನಿರ್ವಹಣೆ ಹಾಗೂ ಮಗುವಿನ ಪೋಷಣೆಗೆ ಸಾಕಷ್ಟು ಆದಾಯ ಹೊಂದಿದ್ದಾಳೆ ಎಂದು ನಿರ್ಧರಿಸಲಾಗದು. ಮಹಿಳೆ ಯಾವುದಾದರೂ ಉದ್ಯೋಗಕ್ಕೆ ಸೇರಿದ್ದಾರೆ ಎಂದು ಊಹಿಸಿದರೂ ಅದರಿಂದ ಆಕೆ ತನ್ನನ್ನು ಹಾಗೂ ಮಗುವನ್ನು ಪೋಷಿಸಲು ಸಾಕಷ್ಟು ಆದಾಯ ಹೊಂದಿದ್ದಾರೆ ಎಂದು ತೀರ್ಮಾನಿಸಲಾಗದು ಎಂದು ಅಭಿಪ್ರಾಯಪಟ್ಟಿತು.
ಪ್ರಕರಣದ ವಿವರ
ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಮಗುವಿನ ನಿರ್ವಹಣೆಗಾಗಿ ಮಾಸಿಕ 15 ಸಾವಿರು, ಶೈಕ್ಷಣಿಕ ವೆಚ್ಚಕ್ಕಾಗಿ ವಾರ್ಷಿಕ 1.6 ಲಕ್ಷ ಹಾಗೂ ಪತ್ನಿಗೆ ಎಂಟು ಲಕ್ಷ ರು. ಪರಿಹಾರ ನೀಡುವಂತೆ ಪತಿಗೆ 2025ರ ಏಪ್ರಿಲ್‌ನಲ್ಲಿ ಆದೇಶಿಸಿತ್ತು. ಆದರೆ, ಮಹಿಳೆಯ ಶೈಕ್ಷಣಿಕ ಅರ್ಹತೆ ಮತ್ತು ಉದ್ಯೋಗ ಪಡೆಯುವ ಸಾಮರ್ಥ್ಯವನ್ನು ಪರಿಗಣಿಸಿ, ಆಕೆಗೆ ಪ್ರತ್ಯೇಕ ಜೀವನಾಂಶ ನೀಡಲು ನಿರಾಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಮತ್ತು ಪತ್ನಿ ಇಬ್ಬರು ಸೆಷನ್ಸ್ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಮೇಲ್ಮನವಿ ಸಲ್ಲಿಸಿದ್ದರು.