- ಸತತ 15 ವರ್ಷದಿಂದ ಟವರ್ ಮೇಲೆ ರಾಷ್ಟ ದ್ವಜ ಹಾರಿಸುತ್ತಿರುವ ಜೋಯ್ ಬ್ರೋ
ಶುಕ್ಕವಾರ ಬೆಳಿಗ್ಗೆ 8 ಗಂಟೆಗೆ ಟವರ್ ಹತ್ತಿ ರಾಷ್ಟ ದ್ವಜ ಹಾರಿಸಿದ್ದಾನೆ. ಸಂಜೆ 6 ಗಂಟೆಗೆ ರಾಷ್ಟ್ರ ದ್ವಜವನ್ನು ಇಳಿಸಿದ್ದಾನೆ. ಕಳೆದ 15 ವರ್ಷದಿಂದಲೂ ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಹಿರೇಬಿಸು ಜೋಯ್ ಬ್ರೋ ಟವರ್ ಮೇಲೆ ಹತ್ತಿ ದ್ವಜ ಹಾರಿಸಿ ಸಂಭ್ರಮಪಡುತ್ತಿದ್ದಾನೆ. ರಾಷ್ಟ ದ್ವಜ ಹಾರಿಸುವ ಹಾಗೂ ಇಳಿಸುವ ಕಾರ್ಯಕ್ರಮದಲ್ಲಿ ಶೆಟ್ಟಿಕೊಪ್ಪದ ನಾಗರಿಕರು ಆಗಮಿಸಿ ಇನ್ನಷ್ಟು ಮೆರುಗು ತರುತ್ತಾರೆ.
- ಬಾಕ್ಸ್ -ಗುಲಾಮಗಿರಿಯಿಂದ ಮುಕ್ತಿ ಪಡೆದ ಸಂಕೇತವಾಗಿ ರಾಷ್ಟ್ರ ಧ್ವಜವನ್ನು ಪ್ರತಿ ವರ್ಷ 200 ಅಡಿ ಎತ್ತರದ ಟವರ್ ಮೇಲೆ ಹಾರಿಸುತ್ತಿದ್ದೇನೆ. ಪ್ರತಿಯೊಬ್ಬರೂ ತಲೆ ಎತ್ತಿ ರಾಷ್ಟ್ರ ಧ್ವಜವನ್ನು ನೋಡಿ ಗೌರವಿಸಬೇಕು ಎಂಬುದೇ ನನ್ನ ಉದ್ದೇಶ. ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಗ್ರಾಮ ಪಂಚಾಯಿತಿಯವರು ಸಹಕಾರ ನೀಡಿದ್ದಾರೆ ಎಂದು ಟವರ್ ಮೇಲೆ ರಾಷ್ಟ ಧ್ವಜ ಹಾರಿಸಿದ ಯುವಕ ಹಿರೇಬಿಸು ಜೋಯ್ ಬ್ರೋ ಕನ್ನಡಪ್ರಭಕ್ಕೆ ತಿಳಿಸಿದ್ದಾನೆ.