ಪ್ರವಾಸಕ್ಕೆ ಬಂದಿದ್ದ ಯುವಕ ಹೃದಯಾಘಾತದಿಂದ‌ ಸಾವು

KannadaprabhaNewsNetwork |  
Published : Aug 16, 2026, 02:15 AM IST
 | Kannada Prabha

ಸಾರಾಂಶ

ಕೊಟ್ಟಿಗೆಹಾರ: ಹೃದಯಾಘಾತದಿಂದ 26 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿತಾಣ ದೇವರಮನೆ ಗುಡ್ಡದಲ್ಲಿ ನಡೆದಿದೆ.

ಕೊಟ್ಟಿಗೆಹಾರ: ಹೃದಯಾಘಾತದಿಂದ 26 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿತಾಣ ದೇವರಮನೆ ಗುಡ್ಡದಲ್ಲಿ ನಡೆದಿದೆ.

ಮೃತನನ್ನು ನರೇಶ್ (26)ಎಂದು ಗುರುತಿಸಲಾಗಿದೆ. ನರೇಶ್ ಮೂಲತಃ ಕಲಬುರುಗಿ ಜಿಲ್ಲೆಯವನು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ವೀಕ್ ಎಂಡ್ ಆಗಿರೋದ್ರಿಂದ ಸ್ನೇಹಿತರ ಜೊತೆ ಬೆಂಗಳೂರಿನಿಂದ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡ ಪ್ರವಾಸಿ ತಾಣಕ್ಕೆ ಪ್ರವಾಸ ಬಂದಿದ್ದನು. ದೇವರಮನೆ ಗುಡ್ಡದ ಸೌಂದರ್ಯ ಸವಿದು ಹಿಂದಿರುಗುವಾಗ ರಸ್ತೆ ಮಧ್ಯೆ ತುಂತುರು ಮಳೆ ಹಾಗೂ ಚಳಿ ಎಂದು ಕೋಟ್ ಹಾಕಿಕೊಳ್ಳಲು ಬೈಕ್ ನಿಲ್ಲಿಸಿದ್ದಾನೆ. ಕೋಟ್ ಹಾಕಿಕೊಳ್ಳುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಕುಸಿದು ಬಿದ್ದ ನರೇಶ್ ನನ್ನ ಸ್ಥಳಿಯರು ಹಾಗೂ ಜೊತೆಗಿದ್ದ ಸ್ನೇಹಿತರು ಆಂಬುಲೆನ್ಸ್ ನಲ್ಲಿ ಬಣಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನರೇಶ್ ಸಾವನ್ನಪ್ಪಿದ್ದಾರೆ.

ಜೊತೆಗೆ ಬಂದ ಸ್ನೇಹಿತನ ಸಾವು‌ ಕಂಡು ನರೇಶ್ ಸ್ನೇಹಿತರು ಕಣ್ಣೀರಿಟ್ಟಿದ್ದಾರೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಕೂಟಿ ಖಾಸಗಿ ಬಸ್‌ ಡಿಕ್ಕಿ: ವಿದ್ಯಾರ್ಥಿನಿ ಸಾವು
2027 ರ ಅಂತ್ಯಕ್ಕೆ 2 ರೈಲ್ವೆ ಕಾಮಗಾರಿಗಳು ಪೂರ್ಣ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್