ಚಂದ್ರು ಆರೋಗ್ಯ ಸುಧಾರಣೆಗಾಗಿ ಆರತಿಉಕ್ಕಡ ಮಾರಮ್ಮ ದೇವಿಗೆ ಪೂಜೆ ಸಲ್ಲಿಕೆ

KannadaprabhaNewsNetwork |  
Published : Sep 17, 2025, 01:05 AM IST
16ಕೆಎಂಎನ್ ಡಿ24 | Kannada Prabha

ಸಾರಾಂಶ

ಕಳೆದ 25 ವರ್ಷಗಳಿಂದ ದೇಗುಲದ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಭಿವೃದ್ಧಿಗೆ ಕಾರಣರಾದ ಚಂದ್ರು ಅವರು ಇತ್ತೀಚೆಗೆ ಹೃದಯಘಾತಕ್ಕೊಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರಿಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಆವರ ಆರೋಗ್ಯ ಸುಧಾರಿಸಲು ದೇವಿ ಮೋರೆ ಹೋದ ದೇವಾಲಯದ ಬಳಿ ತಡೆ-ಕಟ್ಟೆ ಹೊಡೆಯುವರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅನಾರೋಗ್ಯದಿಂದ ಬಳಲುತ್ತಿರುವ ತಾಲೂಕಿನ ಪ್ರಸಿದ್ಧ ಆರತಿ ಉಕ್ಕಡ ಮಾರಮ್ಮ ಸಮಿತಿ ಅಧ್ಯಕ್ಷ ಚಂದ್ರು ಅವರ ಆರೋಗ್ಯ ಸುಧಾರಣೆಗಾಗಿ ಅಭಿಮಾನಿಗಳು, ದೇವಾಲಯದ ಸಿಬ್ಬಂದಿ ವರ್ಗ ದೇವಿಗೆ ವಿಶೇಷ ಪೂಜೆ ಸಲ್ಲಿಸಿ 101 ಈಡುಗಾಯಿ ಹೊಡೆದು ಪ್ರಾರ್ಥಿನೆ ಸಲ್ಲಿಸಿದರು.

ಕಳೆದ 25 ವರ್ಷಗಳಿಂದ ದೇಗುಲದ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅಭಿವೃದ್ಧಿಗೆ ಕಾರಣರಾದ ಚಂದ್ರು ಅವರು ಇತ್ತೀಚೆಗೆ ಹೃದಯಘಾತಕ್ಕೊಳಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರಿಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು, ಆವರ ಆರೋಗ್ಯ ಸುಧಾರಿಸಲು ದೇವಿ ಮೋರೆ ಹೋದ ದೇವಾಲಯದ ಬಳಿ ತಡೆ-ಕಟ್ಟೆ ಹೊಡೆಯುವರು.

ಆಟೋ ಸಂಘದ ಸದಸ್ಯರು, ಇತರೆ ವ್ಯಾಪಾರಿಗಳು ಸೇರಿ ಅಭಿಮಾನಿಗಳು ಆರತಿ ಉಕ್ಕಡ ಮಾರಮ್ಮ ದೇವಿ ಬಳಿ ಹೋಮ ಹವನ ನಡೆಸಿ, ದೇವಿಗೆ ಅಭಿಷೇಕ ಪೂಜಾಧಿಗಳ ನಡೆಸಿ ಚಂದ್ರ ಅವರ ಆರೋಗ್ಯ ಸುಧಾರಿಸಲು ಪ್ರಾರ್ಥಿಸಿದರು. ನಂತರ ದೇಗುಲದ ಮುಂಭಾಗ 101 ಈಡುಗಾಯಿ ಹೊಡೆದು ಹರಿಕೆ ತೀರಿಸಿದರು. ಬಂದ ಭಕ್ತರು ಹಾಗೂ ಅಭಿಮಾನಿಗಳಿಗೆ ಪ್ರಸಾದ ವಿತರಿಸಿದರು.

ಈ ವೇಳೆ ಕರವೇ ಗೌರವಾಧ್ಯಕ್ಷ ಕ್ಯಾತನಹಳ್ಳಿ ವೆಂಕಟೇಶ್ ಪಟೇಲ್, ಆಟೋ ಸಂಘದ ಗೌರವಾದ್ಯಕ್ಷ ಸುರೇಶ್, ಸೇರಿದಂತೆ ದೇವಾಲಯ ಬಳಿ ಅಂಗಡಿ ವ್ಯಾಪಾರಿಗಳು, ಇತರ ಪೂಜಾ ಸಿಬ್ಬಂದಿ ಅಭಿಮಾನಿಗಳು ಉಪಸ್ಥಿತರಿದ್ದರು.

ಪೂರ್ಣಕುಂಭ ಮೆರವಣಿಗೆಯೊಂದಿಗೆ ಲಕ್ಷ್ಮೀದೇವಿ ಹಬ್ಬ ಆಚರಣೆ

ಕಿಕ್ಕೇರಿ: ಕೇಶವ ಶೆಟ್ಟಿ ದೇವರಮನೆ ವಠಾರದವರು ಶ್ರದ್ಧಾಭಕ್ತಿಯಿಂದ ಲಕ್ಷ್ಮೀದೇವಿ ಹಬ್ಬವನ್ನು ಆಚರಿಸಿದರು.

ವಾರ್ಷಿಕ ಪೂಜೆ ಅಂಗವಾಗಿ ಹಸಿರು ಚಪ್ಪರ, ತಳಿರು ತೋರಣ ಕಟ್ಟಲಾಯಿತು. ದೇವಿ ಗದ್ದುಗೆ ನಿರ್ಮಿಸಿ ವಿವಿಧ ಪರಿಮಳ ಪುಷ್ಪಗಳಿಂದ ಅಲಂಕರಿಸಲಾಯಿತು. ಧೂಪ, ದೀಪಗಳಿಂದ ಆರತಿ ಬೆಳಗಿ ದೇವಿಗೆ ಬಲಿ ಅರ್ಪಿಸಲಾಯಿತು. ಹಲವು ಭಕ್ತರುದೇವಿಗೆ ಬಾಗಿನ, ಸೀರೆಯನ್ನು ಅರ್ಪಿಸಿದರು. ಅಂತಿಮವಾಗಿ ಹಲವು ಭಕ್ತರುದೇವಿಗೆ ಅರ್ಪಿಸಿದ ಬಾಗಿನ ಸೀರೆಯನ್ನು ಭಕ್ತಿಯಿಂದ ಸ್ವೀಕರಿಸಿದರು.

ಪೂಜೆಗೆ ಮುನ್ನ ಅಮಾನಿಕೆರೆಯಲ್ಲಿ ಗಂಗೆಯನ್ನು ಕಳಸದಲ್ಲಿ ತುಂಬಿಕೊಂಡು ದೇವಿ ಅವಾಹನೆ ಮಾಡಲಾಯಿತು. ಅರಿಷಿಣ, ಕುಂಕುಮ, ಹೂವುಗಳಿಂದ ಕಳಸ ಅಲಂಕರಿಸಿ ಪೂಜಿಸಲಾಯಿತು. ಗಂಗಾಜಲದ ಕಳಸವನ್ನು ಹೊಂಬಾಳೆಯೊಂದಿಗೆ ಕಿಶೋರಿಯರ ತಲೆಮೇಲೆ ಹೊರಿಸಿ ದೇವಿ ಅವಾಹನೆ ಮಾಡಲಾಯಿತು. ಮಂಗಳವಾದ್ಯದೊಂದಿಗೆ ದೇವಿಯ ಕಳಶವನ್ನು ಹೊತ್ತು ಮೂಲ ಗದ್ದುಗೆ ಸ್ಥಳಕ್ಕೆ ಸಾಗಲಾಯಿತು.

ಗದ್ದುಗೆಯಲ್ಲಿ ಕಳಸವನ್ನು ಪ್ರತಿಷ್ಠಾಪಿಸಿ ಸಾಮೂಹಿಕವಾಗಿ ಪೂಜಿಸಲಾಯಿತು. ದೇವಿಗೆ ವಿವಿಧ ಭಕ್ಷ ಭೋಜನ, ಕಜ್ಜಾಯ ಮತ್ತಿತರ ಸಿಹಿ ಅಡುಗೆಯ ನೈವೇದ್ಯ ಸಮರ್ಪಿಸಲಾಯಿತು. ಭಕ್ತರು ಸರತಿಯಲ್ಲಿ ನಿಂತುದೇವಿಯನ್ನು ಪೂಜಿಸಿ ಪ್ರಸಾದ ಸ್ವೀಕರಿಸಿದರು. ದೇವಿಗೆ ಬಲಿ ಅರ್ಪಿಸಿದ ಊಟವನ್ನು ನೈವೇದ್ಯವಾಗಿ ನೀಡಲಾಯಿತು. ದೇವಿ ಗುಡಿಯನ್ನು ಭಕ್ತರ ಸಹಕಾರದಲ್ಲಿ ನೂತನವಾಗಿ ನಿರ್ಮಿಸಲು ಚರ್ಚಿಸಲಾಯಿತು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌