ಹಾನಗಲ್ಲ: ತಾಲೂಕಿನ ಎರಡೂವರೆ ಸಾವಿರ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಓದಿಗೆ ಸಹಕಾರಿಯಾಗುವ ನಮ್ಮೂರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ “ಆಸರೆ” ಪುಸ್ತಕವನ್ನು ಸಮಾಜ ಸೇವಕ ಉದ್ಯಮಿ ಸಿದ್ದಲಿಂಗಣ್ಣ ಕಮಡೊಳ್ಳಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಳೆದ ಬಾರಿ ಈ ಪುಸ್ತಕಗಳನ್ನು ತಾಲೂಕಿನ ಎಲ್ಲ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನಿಡಲಾಗಿತ್ತು. ಇದು ನನಗೆ ಅತ್ಯಂತ ಸಂತೋಷವನ್ನು ತಂದ ಸಂದರ್ಭವಾಗಿತ್ತು. ದೇವರು ನನಗೆ ಎಲ್ಲ ಸಂತೋಷ, ಸಂಪತ್ತು, ಸುಖ ನೀಡಿದ್ದಾನೆ. ಬಾಲ್ಯದಲ್ಲಿ ಹಲವು ಅಡಚಣೆಗಳಾಗಿ ಓದನ್ನು ನಿಲ್ಲಿಸಿ ಕಾರ್ಮಿಕನಾದೆ. ಈಗ ನಾನು ಬೆಳೆದಿದ್ದೇನೆ. ಆದರೆ ನನ್ನ ದುಡಿಮೆಯ ಒಂದಷ್ಟು ಭಾಗವನ್ನು ಸಮಾಜ ಸೇವೆ ಹಾಗೂ ಶೈಕ್ಷಣಿಕ ಸೇವೆಗೆ ಮೀಸಲಾಗಿ ಇಡುತ್ತಿದ್ದೇನೆ. ಕಳೆದ ವರ್ಷವೂ ಇದೇ ಆಸರೆ ಪುಸ್ತಕವನ್ನು ತಾಲೂಕಿನ ಎಲ್ಲ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನೀಡಲಾಗಿತ್ತು. ಈ ಬಾರಿ ಮತ್ತೆ ಈ ಪುಸ್ತಕವನ್ನು ನೀಡಲಾಗುತ್ತಿದೆ. ಇದರ ಪ್ರಯೋಜನದಿಂದ ಮಕ್ಕಳಿಗಾಗಿ ಒಳ್ಳೆಯ ಫಲಿತಾಂಶ ಬಂದರೆ ಅದೇ ನನ್ನ ಸಂತೋಷ. ಈಗಾಗಲೇ ಶೈಕ್ಷಣಿಕವಾಗಿ ಬಡ ಮಕ್ಕಳ ಶಿಕ್ಷಣಕ್ಕೆ ಹತ್ತು ಹಲವು ಸಂದರ್ಭದಲ್ಲಿ ಸಹಾಯ ಸಹಕಾರ ನೀಡುತ್ತ ಬಂದಿದ್ದೇನೆ. ಕ್ರೀಡೆ, ಸೈನ್ಯ ತರಬೇತಿ, ಸಾಮಾಜಿಕ ಸೇವೆಗಾಗಿಯೂ ನನ್ನ ಕೈಲಾದ ಸಹಾಯ ನೀಡುತ್ತ ಬಂದಿದ್ದೇನೆ. ನಾನು ಸದಾ ಸಮಾಜ ಸೇವೆಯಲ್ಲಿಯೇ ಆನಂದ ಕಾಣುವವನಾಗಿದ್ದೇನೆ. ಎಲ್ಲರೂ ಸೇರಿ ಉತ್ತಮ ಶಿಕ್ಷಣ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಜೊತೆಯಾಗೋಣ ಎಂಬುದು ನನ್ನ ಇಚ್ಛೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕುಮಾರೇಶ್ವರ ಮತ್ತು ವೀರಭದ್ರೇಶ್ವರ ಸಮಿತಿಯ ಶಾಂತವೀರ ನೆಲೋಗಲ್ಲ, ಜಯಲಿಂಗಪ್ಪ ಹಳಕೊಪ್ಪದ, ಮೌನೇಶ ಬಳ್ಳಾರಿ, ಶಿವಣ್ಣ ಶಿಗ್ಗಾಂವಿ, ಅಮಿತ ನೆಲೋಗಲ್, ಕಲವೀರಪ್ಪ ಶಿಗ್ಗಾಂವಿ, ಪರಸಪ್ಪ ಬ್ಯಾಲಾಳ, ಶಿವಣ್ಣ ತಡಸದ, ವಿಜಯ ಉರಣಕರ ಮೊದಲಾದವರು ಈ ಸಂದರ್ಭದಲ್ಲಿದ್ದರು.