ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಆಟಿದ ಸೊಗಡ್’ ಕಾರ್ಯಕ್ರಮ

KannadaprabhaNewsNetwork |  
Published : Aug 15, 2025, 01:01 AM IST
ಫೋಟೋ: ೧೩ಪಿಟಿಆರ್-ಆಟಿವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ `ಆಟಿದ ಸೊಗಡ್ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಪುತ್ತೂರು ತಾಲೂಕು ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಟಿದ ಸೊಗಡ್ ಕಾರ್ಯಕ್ರಮ ನಡೆಯಿತು

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಟಿದ ಸೊಗಡ್ ಕಾರ್ಯಕ್ರಮ ನಡೆಯಿತು. ವರಾಹ ಮೆಡಿಕಲ್ ಮತ್ತು ಸ್ಪೆಷಾಲಿಟಿ ಕ್ಲಿನಿಕ್‌ ವೈದ್ಯೆ ಡಾ. ಸ್ವಾತಿ ಆರ್. ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಮಾತನಾಡಿ, ಆಟಿಯ ಸಮಯದಲ್ಲಿ ನಾವು ಸೇವಿಸುವಂತಹ ಆಹಾರಗಳು ಔಷಧೀಯ ಗುಣವುಳ್ಳಂತಹುದು ಎಂಬುದನ್ನು ತಿಳಿಸಿದರು.ಪ್ರಾಂಶುಪಾಲೆ ಡಾ. ರಾಜಲಕ್ಷ್ಮೀ ಎಸ್ ರೈ ಮಾತನಾಡಿ, ಆಟಿ ತಿಂಗಳಲ್ಲಿ ಭೂಮಿ ತಾಯಿ ತುಂಬಾ ಸಂತೋಷದಿಂದಿದ್ದು ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ತಿನ್ನಲಾಗುವಂತಹ ತುಂಬ ತಿನಿಸುಗಳನ್ನು ನೀಡುತ್ತಾಳೆ ಎಂದರು.ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಟ್ರಸ್ಟಿಗಳಾದ ರಶ್ಮಿ ಅಶ್ವಿನ್ ಶೆಟ್ಟಿ, ಸಿ.ಎ ಬ್ಯಾಂಕ್ ಸವಣೂರಿನ ನಿವೃತ್ತ (ಎ.ಇ.ಒ) ಕುಸುಮಾ ಪಿ ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯ ಸವಣೂರಿನ ಅಸಿಸ್ಟೆಂಟ್ ಟೀಚರ್ ಹರ್ಷಿಣಿ ಪಿ. ಹಾಗೂ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಎಂ. ಇದ್ದರು. ಡಾ. ಕಿರಣ ಚಂದ್ರ ರೈ ಸ್ವಾಗತಿಸಿದರು. ಉಪನ್ಯಾಸಕ ಗಿರೀಶ್ ಭಟ್ ವಂದಿಸಿದರು. ಪ್ರಥಮ ಬಿ.ಸಿ.ಎ ವಿದ್ಯಾರ್ಥಿ ಮೋಕ್ಷಿತ್ ಕೊಳಲುವಾದನದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಆಟಿಗೆ ಸಂಬಂಧಪಟ್ಟ ಆಹಾರಮೇಳ ಹಾಗೂ ವಸ್ತುಪ್ರದರ್ಶನ ಏರ್ಪಡಿಸಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ