ಹೊಸಪೇಟೆ: ನಾವೆಲ್ಲರೂ ಅಹಂಕಾರ ತ್ಯಜಿಸಿ, ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ನೆಮ್ಮದಿ ಕಾಣಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಮುಂದಿನ ದಿನದಲ್ಲಿ ಹಸಾಂಬ ಶಾರದಾಶ್ರಮದಲ್ಲಿ ಶಾಲೆ ತೆರೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಎಲ್ಲಾ ಸಹಕಾರವನ್ನು ತಾವು ಮಾಡುವುದಾಗಿ ಭರವಸೆ ನೀಡಿದ ಅವರು, ಆಶ್ರಮಕ್ಕೆ ವೈಯಕ್ತಿಕ ಐದು ಲಕ್ಷ ರು. ದೇಣಿಗೆ ಘೋಷಿಸಿದರು.
ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಪಾಠ ಕಲಿಸಬೇಕಿದೆ. ಅವರಿಗೆ ಕಷ್ಟಗಳನ್ನು ಸಹಿಸುವ ಟ್ರೇನಿಂಗ್ ನೀಡಬೇಕಿದೆ. ಅವರು ದೊಡ್ಡ ಗುರಿಗಳನ್ನು ಇಟ್ಟುಕೊಳ್ಳುವ ರೀತಿಯಲ್ಲಿ ಅವರಿಗೆ ತರಬೇತಿ ನೀಡುವುದು ಅಗತ್ಯ ಇದೆ. ಈ ನಿಟ್ಟಿನಲ್ಲಿ ಈ ಜಾಗದಲ್ಲಿ ತಲೆ ಎತ್ತಲಿರುವ ಹಸಾಂಬ ಶಾರದಾಶ್ರಮ ಬಹುದೊಡ್ಡ ಆಶ್ರಮವಾಗಿ ಬೆಳೆಯಲಿದೆ. ಈ ಆಶ್ರಮವನ್ನು ಬೆಳೆಸುವ ಮಹಾತ್ಕಾರ್ಯ ಈ ಭಾಗದ ಜನರ ಮೇಲಿದೆ ಎಂದರು.ಕಿರ್ಲೋಸ್ಕರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರವಿ ಗುಮಾಸ್ತೆ ಮಾತನಾಡಿದರು.
ಗದಗ-ವಿಜಯಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ, ನಿರ್ಭಯಾನಂದ ಸ್ವಾಮಿಜಿ ಅವರ ನೇತೃತ್ವದಲ್ಲಿ ನಿವೇಶನದ ಪೂಜೆ ಅಂಗವಾಗಿ ಗುರುವಾರ ಭೂ ವರಾಹ ಹೋಮ ಕಾರ್ಯ ನೆರವೇರಿಸುವ ಮೂಲಕ ಜಾಗಕ್ಕೆ ಶಾಂತಿ ಕೋರಲಾಯಿತು.