- ದೊಣೆಹಳ್ಳಿಯಲ್ಲಿ ದಾಸೋಹ ಸಂಸ್ಕೃತಿ ಉತ್ಸವ । ವೈದಿಕ ಎಂಬುದು ಭಯದ ಧರ್ಮ: ಹೇಳಿಕೆ
ಕನ್ನಡಪ್ರಭ ವಾರ್ತೆ ಜಗಳೂರು
ವೈದಿಕ ಎಂಬುದು ಭಯದ ಧರ್ಮ. ಭಯ ಹುಟ್ಟಿಸುವ ದುಷ್ಟಶಕ್ತಿಗಳಿಂದ ಮನುಷ್ಯನಿಗೆ ಯಾವುದೇ ಪರಿಣಾಮ ಬೀರಲ್ಲ. ನಿಜವಾದ ಬಸವತತ್ವ ಅನುಯಾಯಿಗಲು ತಮ್ಮ ಜಗಲಿ ಸ್ವಚ್ಛಗೊಳಿಸಿಕೊಳ್ಳಬೇಕು. ಆ ಮೂಲಕ ವೈದಿಕ ಧರ್ಮವನ್ನು ದೂರವಿಟ್ಟು ಬಸವತತ್ವ ಪ್ರತಿಪಾದಿಸಬೇಕು ಎಂದು ವಿಜಾಪುರದ ಶರಣ ತತ್ವ ಚಿಂತಕ ಜೆ.ಎಸ್.ಪಾಟೀಲ ಹೇಳಿದರು.ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಶನಿವಾರ 3 ದಿನಗಳ ಕಾಲ ಹಮ್ಮಿಕೊಂಡಿರುವ ದಾಸೋಹ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ''''ಕಲ್ಯಾಣ ನಾಡು ಕಟ್ಟುವಲ್ಲಿ ಶರಣ ತತ್ವಗಳ ಚಿಂತನೆಗಳು'''' ವಿಷಯದ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡಿದರು.
ಶಾಸಕ ಬಿ.ದೇವೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಕಾಯಕದಲ್ಲಿ ದೇವರನ್ನು ಕಾಣಬೇಕಿದೆ. ಮನುಷ್ಯನು ಮಾನವೀಯತೆ ಅಳವಡಿಸಿಕೊಂಡರೆ ಬಸವತತ್ವ ಸಾರ್ಥಕವಾಗುತ್ತದೆ. ಭಕ್ತಿ, ಧ್ಯಾನ, ಕರ್ಮದ ಮೂಲಕ ಜೀವನ ಸಾಗಿಸಿದರೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾನಾಮಡಗು ದಾಸೋಹ ಮಠದ ಐಮಡಿ ಶರಣಾರ್ಯರು, ಡಾ.ಸಂಗೇನಹಳ್ಳಿ ಅಶೋಕ ಕುಮಾರ್, ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ನಂದೀಶ್, ಶರಣ ಸಾಹಿತ್ಯ ಪರಿಷತ್ತು ರಾಜ್ಯ ಉಪಾಧ್ಯಕ್ಷ ವೀರೇಶ್, ಬಸವ ಬಳಗ ಅಧ್ಯಕ್ಷ ನರೇಶಪ್ಪ, ಸರ್ವಮಂಗಳಮ್ಮ, ಶೈಲಜಾ ಬಾನು, ಮಂದಾಕಿನಿ, ಹುಚ್ಚಪ್ಪ, ರಾಘವೇಂದ್ರ, ಡಾ.ಹಲಸಂಗಿ ಇದ್ದರು.
(ಕೋಟ್) 3ನೇ ವರ್ಷದ ದಾಸೋಹ ಸಂಸ್ಕೃತಿ ಉತ್ಸವದೊಂದಿಗೆ ಬಸವ ಬದ್ಧತೆಯ ಬೀಜಗಳನ್ನು ಭಿತ್ತಲಾಗುತ್ತಿದೆ. ಮಧ್ಯ ಕರ್ನಾಟಕ ಭಾಗದಲ್ಲಿ ಸಾಂಸ್ಕೃತಿಕ ಬಸವ ಕೇಂದ್ರವನ್ನಾಗಿಸಲು ಸಂಕಲ್ಪಗೈಯಲಾಗಿದೆ. ೧೨ನೇ ಶತಮಾನದಲ್ಲಿ ಹಚ್ಚಿದ ಸಮತಾ ಜ್ಯೋತಿಯು ನಂದಿಹೋಗದಂತೆ ಕಾಪಾಡುವ ಹೊಣೆಗಾರಿಕೆ ನಮ್ಮದಾಗಿದೆ.
- - -
ಜಗಳೂರು ತಾಲೂಕಿನ ದೊಣೆಹಳ್ಳಿಯ ಬಸವೇಶ್ವರ ದಾಸೋಹ ಮಠದಲ್ಲಿ ೩ನೇ ವರ್ಷದ ದಾಸೋಹ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿದರು.