ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ನಿಲುಗಡೆ ಮಾಡಿರುವ ವಾಹನಗಳ ಮಾಲಿಕರು ತೆರವು ಮಾಡದಿದ್ದರೆ ಅಂತಹ ವಶಕ್ಕೆ ಪಡೆದು ಹರಾಜು ಹಾಕಲಾಗುವುದು ಎಂದು ಜಿಬಿಎ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣ ಬೈರೇಗೌಡರ ಸೂಚನೆ
ಬೆಂಗಳೂರು : ಸಾರ್ವಜನಿಕ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ನಿಲುಗಡೆ ಮಾಡಿರುವ ವಾಹನಗಳ ಮಾಲಿಕರು ತೆರವು ಮಾಡದಿದ್ದರೆ ಅಂತಹ ವಶಕ್ಕೆ ಪಡೆದು ಹರಾಜು ಹಾಕಲಾಗುವುದು ಎಂದು ಜಿಬಿಎ ಎಚ್ಚರಿಕೆ ನೀಡಿದೆ.
ಕೃಷ್ಣ ಬೈರೇಗೌಡರ ಸೂಚನೆ ಬಿಡಾಡಿ ವಾಹನಗಳ ತೆರವು
ಬೆಂಗಳೂರು ನಗರಾಭಿವೃದ್ದಿ ಸಚಿವ ಕೃಷ್ಣ ಬೈರೇಗೌಡರ ಸೂಚನೆ ಬಿಡಾಡಿ ವಾಹನಗಳ ತೆರವು ಅಭಿಯಾನ ಆರಂಭಿಸಲಾಗಿದೆ. ಇಂತಹ ವಾಹನಗಳಿಗೆ ನೋಟಿಸ್ ಅಂಟಿಸಿ ಎಚ್ಚರಿಕೆ ನೀಡಲಾಗಿತ್ತು. ಆದರೂ ಕೆಲವರು ಇನ್ನೂ ವಾಹನಗಳ ಬಿಡಿಸಿಕೊಳ್ಳುವುದಾಗಲಿ ಅಥವಾ ವಾಹನಗಳ ಮಾಲಿಕತ್ವವನ್ನು ತಿಳಿಸುವುದಾಗಲಿ ಮಾಡಿಲ್ಲ. ನೋಟಿಸ್ ನೀಡಿದ 15 ದಿನಗಳ ನಂತರ ವಾಹನಗಳ ಮಾಲಿಕರು ಬರದಿದ್ದಲ್ಲಿ ಅವುಗಳನ್ನು ಹರಾಜು ಹಾಕಲಾಗುವುದು ಎಂದು ಜಿಬಿಎ ಎಚ್ಚರಿಕೆ ನೀಡದೆ.
ಒಟ್ಟು 6544 ವಾಹನಗಳನ್ನು ನಗರದಲ್ಲಿ ಗುರುತಿಸಲಾಗಿದೆ
ಒಟ್ಟು 6544 ವಾಹನಗಳನ್ನು ನಗರದಲ್ಲಿ ಗುರುತಿಸಲಾಗಿದೆ. ಈ ಪೈಕಿ ಸಾರ್ವಜನಿಕರೇ ಸುಮಾರು 4108 ವಾಹನಗಳ ಮಾಹಿತಿ ನೀಡಿದ್ದಾರೆ. ಪೊಲೀಸರು 2436 ವಾಹನಗಳನ್ನು ವರದಿ ನೀಡಿದ್ದಾರೆ. ಈಗಾಗಲೆ ಜಿಬಿಎ ಅಧಿಕಾರಿಗಳು 1780 ವಾಹನಗಳಿಗೆ ನೋಟಿಸ್ ಅಂಟಿಸಿದ್ದಾರೆ. ನೋಟಿಸ್ ಅಂಟಿಸಿದ 7 ದಿನಗಳ ಒಳಗಾಗಿ ಅಂತಹ ವಾಹನಗಳನ್ನು ಮಾಲಿಕರೇ ವಾಹನಗಳನ್ನು ತಮ್ಮ ಜಾಗಗಳಲ್ಲಿ ನಿಲುಗಡೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ವಾಹನಗಳ ಟೋಯಿಂಗ್ ಮಾಡಲಾಗುವುದು. ಈ ಸಮಯದಲ್ಲಿಯೂ ವಾಹನಗಳ ಮಾಲಿಕರು 600 ರು. ನೋ ಪಾರ್ಕಿಂಗ್ ಶುಲ್ಕ ದಂಡ, ಒಂದು ಸಾವಿರ ಟೋಯಿಂಗ್ ಶುಲ್ಕ ಪಾವತಿಸಿ ವಾಹನ ಬಿಡಿಸಿಕೊಳ್ಳಲು ಅವಕಾಶವಿದೆ. ಇದಾದ ನಂತರವೂ ವಾಹನ ಬಿಡಿಸಿಕೊಳ್ಳದಿದ್ದರೆ ಅಂತಹ ವಾಹನಗಳನ್ನು ಹರಾಜು ಹಾಕಲಾಗುವುದು ಎಂದು ಜಿಬಿಎ ತಿಳಿಸಿದೆ.
ಈಗಾಗಲೆ 352 ವಾಹನಗಳನ್ನು ಟೋಯಿಂಗ್ ಮೂಲಕ ಜಿಬಿಎ ಗುರುತಿಸಿದ ಸ್ಥಳಗಳಲ್ಲಿ ಇರಿಸಲಾಗಿದೆ. ಪ್ರತಿದಿನ 50 ರಿಂದ 100 ವಾಹನಗಳಿಗೆ ಸ್ಟಿಕ್ಕರಿಂಗ್ ಮಾಡಲಾಗುತ್ತಿದ್ದು, ಟೋಯಿಂಗ್ ಮಾಡಿದ ವಾಹನಗಳಿಗೆ 15 ದಿನದ ಶುಲ್ಕ ಪಾವತಿಗೆ ಗಡುವು ನೀಡಲಾಗಿದೆ. ಇವುಗಳ ಮಾಲಿಕರು ಬಂದು ವಾಹನಗಳನ್ನು ಬಿಡಿಸಿಕೊಳ್ಳದಿದ್ದಲ್ಲಿ ಹರಾಜು ಹಾಕಲಾಗುತ್ತದೆ. ದ್ವಿಚಕ್ರ ವಾಹನಕ್ಕೆ ನೋ ಪಾರ್ಕಿಂಗ್ ಶುಲ್ಕ ₹500, ಟೋಯಿಂಗ್ ಚಾರ್ಜ್ ₹650 ಶುಲ್ಕ, ನಾಲ್ಕು ಚಕ್ರದ ವಾಹನಗಳಿಗೆ ₹1000 ಟೋಯಿಂಗ್ ಶುಲ್ಕ, ಟೋಯಿಂಗ್ ಮಾಡಿದ ವಾಹನಗಳಿಗೆ ವೀಲ್ ಕ್ಯಾಪ್ ಅಳವಡಿಸಿ ನಿಗದಿತ ಸ್ಥಳದಲ್ಲಿ ನಿಲ್ಲಿಸಲಾಗಿದೆ.
