ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಶನಿವಾರಸಂತೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಭಾರಿ ಗಾಳಿ ಮಳೆಯಾಗಿದೆ. ಇದರ ಪರಿಣಾಮ ಶನಿವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಗೋಪಾಲಪುರ ಚರ್ಚ್ ಸಮೀಪ ಹೆದ್ದಾರಿ ಬದಿಯಲ್ಲಿ ಭಾರಿ ಗಾತ್ರದ ಆಲದ ಮರವೊಂದು ಬುಡ ಸಮೇತ ರಸ್ತೆಗೆ ಉರುಳಿಬಿದ್ದಿದೆ.ಅದೃಷ್ಟವಶಾತ್ ಈ ವೇಳೆ ರಸ್ತೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸೇರಿದಂತೆ ಹಲವು ವಾಹನಗಳು ಅವಘಡದಿಂದ ಪಾರಾಗಿವೆ ಎಂದು ಮರ ಬೀಳುತ್ತಿರುವುದನ್ನು ಗಮನಿಸುತ್ತಿದ್ದ ಸ್ಥಳೀಯರು ಹೇಳಿದರು.
ಮರ ಬಿದ್ದ ಪರಿಣಾಮ ವಿದ್ಯುತ್ ಕಂಬವೊಂದು ಮರಿದು ಬಿದ್ದಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ವಿದ್ಯುತ್ ಇಲಾಖೆ ಸಿಬ್ಬಂದಿ, ವಿಪತ್ತು ನಿಗ್ರಹ ಸಿಬ್ಬಂದಿ ಮತ್ತು ಸ್ಥಳೀಯರು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿದರು. ಇದರಿಂದ ಸುಮಾರು ೨ ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡು ಬದಲಿ ರಸ್ತೆ ಮೂಲಕ ವಾಹನಗಳು ಸಂಚರಿಸುತ್ತಿದ್ದವು.(ಪೋಟೋ೧ಎಸ್‌ಎಸ್೧&೨)
ಶನಿವಾರ ಗೋಪಾಲಪುರ ಬಳಿ ರಾಜ್ಯ ಹೆದ್ದಾರಿ ಬದಿ ರಸ್ತೆಗೆ ಉರುಳಿದ ಭಾರಿ ಗಾತ್ರದ ಆಲದ ಮರವನ್ನು ತೆರವುಗೊಳಿಸುತ್ತಿರುವುದು.