50 ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರ ಗೌರವ

KannadaprabhaNewsNetwork |  
Published : Jan 20, 2026, 03:00 AM IST
ಜವನೆ‌ರ್ ಬೆದ್ರದಿಂದ ಎರಡನೇ ಹಂತದ 50 ಮಂದಿ ಮಹಿಳಾ ಸಾಧಕಿಯರಿಗೆ ಅಬ್ಬಕ್ಕ ಪ್ರೇರಣಾ ಪತ್ರದ ಗೌರವ | Kannada Prabha

ಸಾರಾಂಶ

ಭಾನುವಾರ ಮೂಡುಬಿದಿರೆಯ ಅರಮನೆ ಬಾಗಿಲು ರಸ್ತೆಯ ಚೌಟರ ಅರಮನೆ ಮುಂಭಾಗದಲ್ಲಿರುವ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ರಾಣಿ ಅಬ್ಬಕ್ಕಳ ೫೦೦ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಚೌಟರ ಅರಮನೆಯ ಕುಲದೀಪ ಎಂ. ಸಾಧಕಿಯರನ್ನು ಗೌರವಿಸಿದರು.

ಮೂಡುಬಿದಿರೆ: ರಾಣಿ ಅಬ್ಬಕ್ಕಳ 500ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಜವನೆರ್ ಬೆದ್ರ ಫೌಂಡೇಶನ್ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 50 ಮಂದಿ ಮಹಿಳೆಯರನ್ನು ಗೌರವಿಸಲಾಯಿತು.

ಭಾನುವಾರ ಮೂಡುಬಿದಿರೆಯ ಅರಮನೆ ಬಾಗಿಲು ರಸ್ತೆಯ ಚೌಟರ ಅರಮನೆ ಮುಂಭಾಗದಲ್ಲಿರುವ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೌಟರ ಅರಮನೆಯ ಕುಲದೀಪ ಎಂ. ಸಾಧಕಿಯರನ್ನು ಗೌರವಿಸಿದರು.

ಜವನೆರ್ ಬೆದ್ರ ಸಂಘಟನೆಯು ಒಟ್ಟು 500 ಮಂದಿ ಮಹಿಳೆಯರಿಗೆ ಚೌಟರಾಣಿ ಅಬ್ಬಕ್ಕ ಪ್ರೇರಣಾ ಪತ್ರ ನೀಡಿ ಗೌರವಿಸಲು ತೀರ್ಮಾನಿಸಿದ್ದು, ಅದರಂತೆ ಡಿಸೆಂಬ‌ರ್ ತಿಂಗಳಲ್ಲಿ ಮೊದಲ ಹಂತದಲ್ಲಿ 50 ಮಂದಿಯನ್ನು ಗೌರವಿಸಲಾಗಿತ್ತು. ಈ ತಿಂಗಳಲ್ಲಿ ಎರಡನೇ ಹಂತದಲ್ಲಿ 50 ಮಂದಿಗೆ ಅಬ್ಬಕ್ಕ ಪ್ರೇರಣಾ ಪತ್ರವನ್ನು ನೀಡಲಾಯಿತು. ಗೌರವಕ್ಕೆ ಪಾತ್ರರಾದ ಸಾಧಕಿಯರು:

ಪ್ರತಿಭಾ ಕೆ.ಶೆಣೈ, ಪದ್ಮಶ್ರೀ ಭಟ್ (ಸಮಾಜ ಸೇವೆ), ಮೋಹಿನಿ ಶೆಟ್ಟಿ, ಶ್ರೀಮತಿ ಜೈನ್‌ (ಪಶುಪಾಲನೆ), ಶೋಭಾ ಸುರೇಶ್, ಮಾನಸ ಪ್ರವೀಣ್‌ ಭಟ್ (ಸಾಹಿತ್ಯ), ಮೋಹಿನಿ ನಾಯಕ್‌, ತಿಲಕ ಕುಮಾ‌ರ್ ಗೌಡ (ಕೃಷಿ), ಸ್ವಪ್ನ ಕೋಟ್ಯಾನ್, ಬಾಲಿಕ ಜೈನ್ (ಕಲೆ, ರಂಗಭೂಮಿ), ಉಷಾ ಕಿರಣ್, ಜೀವಿತಾ ಶಂಕ‌ರ್, ಅಪೂರ್ವ ಶರ್ಮ (ನೃತ್ಯ), ಸುಜ್ಞಾ ಎನ್. ಕೋಟ್ಯಾನ್ (ಸಂಗೀತ), ಡಾ. ರೇಷ್ಮಾ ಪೈ, ಡಾ. ಪರ್ವೀನ್ ಜಾವೇದ್ ಶೇಖ್ (ವೈದ್ಯಕೀಯ) ಹರಿಣಾಕ್ಷಿ ಜಿ. ಶೆಟ್ಟಿ, ಲಕ್ಷಿಂ (ನರ್ಸಿಂಗ್), ಪ್ರಪುಲ್ಲ ಎಂ. ಶೆಟ್ಟಿ, ಸವಿತಾ ಎನ್. (ಯೋಗ) ಜಾಸ್ಮಿನ್ ಮರಿಯ, ವಿಕ್ರೀತ (ಕ್ರೀಡಾ) ಶಿಲ್ಪ ಎಸ್., ಕಮಲಾ ಪೂಜಾರ್ತಿ (ಪರಿಸರ), ಡೆಲ್ಲಾ ನಜ್ರತ್, ಅನುಷಾ ಪ್ರಜ್ವಲ್ ಆಚಾರ್ಯ(ಸ್ವ ಉದ್ಯಮ), ಶುಭ ಸಹನ, ಮಲ್ಲಿಕಾ ಯು.ಎನ್. (ಕಾನೂನು) ಸುಜಾತ, ಮೋಹಿನಿ ಎಂ. ಶೆಟ್ಟಿ (ಬ್ಯಾಂಕಿಗ್) ಯುಜಿನಾ ಪಿಂಟೋ, ರಂಜಿಕ ರೈ (ಶಿಕ್ಷಣ), ಸಂಗೀತ ಪ್ರಭು (ಸಂಘಟನೆ) ಡಾ. ಮಧುಮಾಲ ಕೆ. (ಮನೋ ಸ್ವಾಸ್ಥಂ ಪ್ರೇರಕಿ), ದೀಪ್ತಿ ಬಾಲಕೃಷ್ಣ, ರಶ್ಮಿತ ಪ್ರಸಾದ್‌ (ಯಕ್ಷಗಾನ), ಚಂದ್ರಾವತಿ, ರಾಜೀವಿ ಕುಲಾಲ್ (ನಾಟಿ ವೈದ್ಯಕೀಯ) ಸುಲೋಚನಾ ಎಸ್. ಕಡಂದಲೆ, ರೋಹಿಣಿ (ಕಾರ್ಮಿಕ), ಶೋಭಾ ವಿಠಲ, ಶ್ಯಾಮಲಾ ಸುರೇಶ್ (ಧಾರ್ಮಿಕ), ಲಿಖಿತ ಪ್ರಜ್ವಲ್ (ಮಾಧ್ಯಮ), ಮಲ್ಲಿಕಾ (ನಿರೂಪಣೆ) ಯಶೋಧ ಎಂ., ಸುಮನಾ ಆಚಾರ್ಯ (ರಕ್ಷಣೆ), ಶ್ವೇತಾ ಗಣೇಶ್, ಪಾರವ್ವ ದಾಸರ್‌ (ಸ್ವಚ್ಛತೆ), ಸುನೀತಾ ಶೆಟ್ಟಿ, ಸುಜಾತ ಗಿರೀಶ್ (ಆಶಾ ಕಾರ್‍ಯಕರ್ತೆ).

ಈ ಸಂದರ್ಭ ಸಂಘಟನೆಯ ಸ್ಥಾಪಕ ಅಮ‌ರ್ ಕೋಟೆ, ಉದ್ಯಮಿ ಜಾವೇದ್ ಶೇಖ್, ಯುವವಾಹಿನಿಯ ಮಾಜಿ ಅಧ್ಯಕ್ಷ ಶಂಕ‌ರ್ ಕೋಟ್ಯಾನ್, ಡಾ. ನಾರಾಯಣ ಪೈ, ಜವನೆರ್‌ ಬೆದ್ರ ಫೌಂಡೇಶನ್‌ನ ಕಾರ್‍ಯದರ್ಶಿ ದಿನೇಶ್ ನಾಯ್ಕ, ಉಪಾಧ್ಯಕ್ಷ ನಾರಾಯಣ ಪಡುಮಲೆ, ಅಬ್ಬಕ್ಕ ಬ್ರಿಗೇಡ್‌ ಸಂಚಾಲಕಿ ಸಹನಾ ನಾಯಕ್, ಕಾರ್‍ಯಕ್ರಮದ ಸಂಯೋಜಕಿ ಸುನೀತಾ ಉದಯ್, ಪ್ರಮುಖರಾದ ಗಣೇಶ್ ಪೈ, ಮನು ಎಸ್. ಒಂಟಿಕಟ್ಟೆ, ಶಮಿತ್ ರಾವ್, ಸುಮಂತ್ ಶೆಟ್ಟಿ, ಪ್ರತೀಶ್‌, ಅಕ್ಷಯ್, ವಿದ್ಯಾ, ಸೌಮ್ಯ, ಶಾಂತ, ಶಕುಂತಳಾ ಮತ್ತಿತರರಿದ್ದರು. ಸಂದೀಪ್ ಕೆಲ್ಲಪುತ್ತಿಗೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಬ್ಬಿ ಸಮುದ್ರದ ಮಲ್ತಿ ದ್ವೀಪದಲ್ಲಿ ಮಕರ ಸಂಕ್ರಮಣ ಪೂಜೆ
ಪುತ್ತೂರು: ಬೀರಮಲೆ ಪ್ರಜ್ಞಾ ಆಶ್ರಮವಾಸಿಗಳಿಗೆ ವಸ್ತ್ರ ವಿತರಣೆ