ಹುಬ್ಬಳ್ಳಿ:
ಪ್ರಶಸ್ತಿ ಸ್ವೀಕರಿಸಿದ ಅಭಿನವ ಸಿದ್ಧಾರೂಢ ಶ್ರೀಗಳು, ಲಿಂ. ಮೂಜಗಂ ಶ್ರೀಗಳು ಸದಾಕಾಲ ಸ್ಮರಣೀಯರಾದವರು. ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿವರು. ಕೆಲವರು ಬದುಕಿಯೂ ಸತ್ತ ಹಾಗೆ ಇರುತ್ತಾರೆ. ಮತ್ತೆ ಕೆಲವರು ಮಣ್ಣಾದರೂ ನಮ್ಮ ಮಧ್ಯೆಯೇ ಇದ್ದಾರೆ ಎನ್ನುವಂತೆ ಬದುಕಿ ಹೋಗಿರುತ್ತಾರೆ. ಮೂಜಗಂ ಅವರು ನಮ್ಮ ನಡುವೆ ಇಲ್ಲದಿದ್ದರೂ, ಅವರು ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ ರೀತಿ ಇಂದಿಗೂ ನಮ್ಮ ಕಣ್ಮುಂದೆ ಇದೆ ಎಂದರು.ಭಾರತದ 30 ಭಾಷೆಗಳಿಗೆ ವಚನಗಳು ಅನುವಾದವಾಗಿದ್ದು, ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ, ಚರ್ಚೆಗಳು ನಡೆಯುತ್ತಿವೆ. ವಚನಗಳ ಅನುವಾದ ಯೋಜನೆ, ವಿಚಾರ ಸಂಕಿರಣ, ಕಾರ್ಯಾಗಾರಗಳು ಸಹ ನಡೆಯುತ್ತಿವೆ. ಜಗತ್ತಿನ 50 ದೇಶಗಳ ವಿದ್ವಾಂಸರು ತಮ್ಮ ಭಾಷೆಗಳಲ್ಲಿ ಅನುವಾದ ಕಾರ್ಯ ಆರಂಭಿಸಿದ್ದು, ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀ ಮಾತನಾಡಿ, ಅಮೆರಿಕದ ಕೀರ್ತಿ ಭವನದ ವೈಶಿಷ್ಟ್ಯತೆ ಎಂದರೆ ವ್ಯಕ್ತಿ ಮೃತಪಟ್ಟ 50 ವರ್ಷದ ನಂತರ ಅವರನ್ನು ಸ್ಮರಿಸಿದರೆ ಮಾತ್ರ ಅಲ್ಲಿ ಭಾವಚಿತ್ರ ಅಳವಡಿಸಲಾಗುತ್ತಿದೆ. ಆ ಸಾಲಿನಲ್ಲಿ ಮೂಜಗಂ ಸೇರುತ್ತಾರೆ. ಸಮಾಜದ ದೊಡ್ಡ ವ್ಯಕ್ತಿ ಮೂಜಗಂ ಆಗಿದ್ದರು. ಅವರಿಂದ ಸಹಾಯ, ಸಹಕಾರ ಪಡೆದವರು ಅವರನ್ನು ಮರೆತಿರುವುದು ದುರದೃಷ್ಟಕರ ಎಂದರು.
ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀ ಮಾತನಾಡಿ, ಬೆಳ್ಳಿಯ ತಾರೆಯಾಗಿ ಬದುಕಿದ ಮೂಜಗಂ ಅವರು ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದರು. ಜನಸಾಮಾನ್ಯರ ಹಂತಕ್ಕೆ ಇಳಿದು ಜೀವನ ಸಾಗಿಸಿದರು. ಸ್ವಾಮಿ ಎಂದರೆ ಜನರ ಸೇವಕ ಎಂದು ಹಾನಗಲ್ ಕುಮಾರಸ್ವಾಮಿ ಹೇಳುತ್ತಿದ್ದರು. ಅದನ್ನು ಮೂಜಗಂ ಪಾಲಿಸಿಕೊಂಡು ಬಂದಿದ್ದರು ಎಂದು ಹೇಳಿದರು. ವಿಪ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿದರು. ಮೂರು ಸಾವಿರ ಮಠದ ಜ. ಗುರುಸಿದ್ಧ ರಾಜಯೋಗಿಂದ್ರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎರಡೆತ್ತಿನಮಠದ ಸಿದ್ಧಲಿಂಗ ಶ್ರೀ, ರುದ್ರಾಕ್ಷಿ ಮಠದ ಬಸವಲಿಂಗ ಶ್ರೀ, ವಿರಕ್ತಮಠದ ಶಿವಬಸವ ಶ್ರೀ, ಅಭಿನವ ರೇವಣಸಿದ್ಧೇಶ್ವರ ಶ್ರೀ, ಚರಲಿಂಗ ಶ್ರೀ, ಎಸ್.ಆರ್. ಕೆಂಚಣ್ಣನವರ, ಅಮರೇಶ ಹಿಪ್ಪರಗಿ, ಎನ್.ವೈ. ಮಟ್ಟಿಹಾಳ, ಚನ್ನಬಸಪ್ಪ ಧಾರವಾಡಶೆಟ್ಟರ ಹಾಗೂ ಪಾಲಿಕೆ ಸದಸ್ಯೆ ಸುನಿತಾ ಬರಬುರೆ ಸೇರಿ ಹಲವರಿದ್ದರು.