ಮೂರುಸಾವಿರ ಮಠದ ಅಭಿಷೇಕ ಸೇವೆ ಡಿಜಿಟಲ್‌

KannadaprabhaNewsNetwork |  
Published : Nov 07, 2026, 02:15 AM IST
ಅಭಿಷೇಕ ಸರದಿ, ದಿನಾಂಕ, ಸಮಯ ನಿಗದಿಪಡಿಸಲು ಮೊಬೈಲ್‌ ಆ್ಯಪ್‌ ಲೋಕಾರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಜಗದ್ಗುರು ಮೂರುಸಾವಿರ ಮಠದ ನಿರಂತರ ಅಭಿಷೇಕ ಸೇವೆಯನ್ನು ಇದೀಗ ಡಿಜಿಟಲ್​ ಮಾಡಲಾಗಿದ್ದು, ಇದರ ನಿರ್ವಹಣೆಗೆ ಮೊಬೈಲ್​ ಆ್ಯಪ್​ ಬಿಡುಗಡೆ ಮಾಡಲಾಗಿದೆ.

ಹುಬ್ಬಳ್ಳಿ:

ಇಲ್ಲಿಯ ಜಗದ್ಗುರು ಮೂರುಸಾವಿರ ಮಠದ ನಿರಂತರ ಅಭಿಷೇಕ ಸೇವೆಯನ್ನು ಇದೀಗ ಡಿಜಿಟಲ್​ ಮಾಡಲಾಗಿದ್ದು, ಇದರ ನಿರ್ವಹಣೆಗೆ ಮೊಬೈಲ್​ ಆ್ಯಪ್​ ಬಿಡುಗಡೆ ಮಾಡಲಾಗಿದೆ.ಭಕ್ತರು ಆ್ಯಪ್​ ಮೂಲಕ ತಮ್ಮ ಅಭಿಷೇಕ ಸರದಿ, ದಿನಾಂಕ ಹಾಗೂ ಸಮಯವನ್ನು ಮನೆಯಲ್ಲಿ ಕುಳಿತು ನಿರ್ವಹಣೆ ಮಾಡಬಹುದಾಗಿದೆ. ಮಾತ್ರವಲ್ಲ, ವರ್ಷದ ಯಾವ ದಿನ ನಿಮ್ಮ ಸಂಕಲ್ಪದ ಪೂಜೆ, ಅಭಿಷೇಕ ಇದೆ ಎಂಬುದನ್ನು ಆ್ಯಪ್​ ನೆನಪು ಮಾಡಿಕೊಡಲಿದೆ.ಶ್ರೀಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀಮಹಾಲಕ್ಷ್ಮೀ ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರು ಆಪ್​ ಲೋಕಾರ್ಪಣೆ ಮಾಡಿ, ಶ್ರೀಮಠದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಿತ್ಯವೂ ಅನ್ನ ಪ್ರಸಾದವೂ ಆಗುತ್ತಿದೆ. ವರ್ಷವಿಡಿ ನಡೆಯುವ ಪೂಜೆ, ಅಭಿಷೇಕ ಮುಂತಾದ ಸೇವಾ ಕಾರ್ಯಗಳನ್ನು ನಿರ್ವಹಣೆ ಮಾಡಲು ಆಪ್​ ಹೊರತಂದಿರುವುದು ಭಕ್ತರಿಗೆ ಅನುಕೂಲವಾಗಲಿದೆ ಎಂದರು.ಶ್ರೀಮಠದ ಪೂಜಾ ಸಮಿತಿ ಹಾಗೂ ಪ್ರಸಾದ ಸಮಿತಿ ಸೇರಿ ಆ್ಯಪ್‌ ತರುವ ಆಲೋಚನೆ ಮಾಡಿ ಯಶಸ್ವಿಯಾಗಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತವೆ. ಅನೇಕ ಭಕ್ತರು ಹೊರಗಿನಿಂದ ಬರುತ್ತಾರೆ. ಪರಂಪರೆ ಬೆಳೆದಿದೆ. ಬರುವ ಭಕ್ತರಿಗಾಗಿ ಬಹಳ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. ಕೆಲ ವರ್ಷಗಳಿಂದ ಪ್ರಸಾದ ಸೇವೆಯನ್ನು ಅಮರೇಶ ಹಿಪ್ಪರಗಿ ಅವರು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ಲಾಘಿಸಿದರು.ಪ್ರಸಾದ ಸಮಿತಿಯ ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡಶೆಟ್ಟರ್​, ಎಸ್​.ಎಸ್​. ಕಮಡೊಳ್ಳಿಶೆಟ್ಟರ್​ ಇತರರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ನೂರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.

ಆ್ಯಪ್‌ ​ಬಿಡುಗಡೆಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ನರರೋಗ ತಜ್ಞ ಡಾ. ವಿಜಯಮಹಾಂತೇಶ ಪೂಜಾರ ಮಾತನಾಡಿ, ಶ್ರೀಮಠದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ನಮಗೆ ಬಹಳ ಖುಷಿ ಇದೆ. ಆಧುನಿಕ ತಂತ್ರಜ್ಞಾನ ಬೆಳೆದಂತೆ ಭಕ್ತರಿಗೂ ಅವರಿದ್ದಲ್ಲಿಯೇ ಮಾಹಿತಿ ನೀಡಬೇಕೆಂಬ ಆಶಯದೊಂದಿಗೆ ಹೊರತಂದ ಆ್ಯಪ್​ಗೆ ನಮ್ಮಿಂದಾದ ನೆರವು ನೀಡಿದ್ದೇವೆ. ಶ್ರೀಮಠದ ಹೊಸ ಹೆಜ್ಜೆ ಇದಾಗಿದೆ ಎಂದರು.ಇನ್ ​ಡಾಟಾ ಎಐ ಸಂಸ್ಥೆಯ ಮೃತ್ಯುಂಜಯ ಹಿರೇಮಠ ಆ್ಯಪ್​ ಅಭಿವೃದ್ಧಿ ಪಡಿಸಿದ್ದಾರೆ. ಈ ವೇಳೆ ವ್ಯಾಪಾರಸ್ಥ ವಿಶ್ವನಾಥ ಕಮತಗಿ, ರಾಜೇಶ ತೋಳನ್ನವರ, ರಾಜು ಗಿಣಿಮಾವ, ಶಾಂತಣ್ಣ ಹಾವೇರಿಶೆಟ್ಟರ್‌, ವಿಶ್ವನಾಥ ಹೊರಕೇರಿ, ರೇವಣಸಿದ್ದಯ್ಯ ಸಾಲಿಮಠ, ಚನ್ನಯ್ಯ ಎಮ್ಮೆಟ್ಟಿ ಹಿರೇಮಠ, ರಾಜೇಂದ್ರ ಇಂಡಿ, ಡಾ. ಚಂದ್ರಪ್ರಭಾ ಪೂಜಾರ, ರೇಖಾ ಆಪ್ಟೆ, ರತ್ನಾ ಬಸಾಪುರ, ಆಶಾ ಪತ್ತಾರ, ರೂಪಾ ಅಂಗಡಿ, ಸಾಧನಾ ಪೂಜಾರ, ಜ್ಯೋತಿ ಉಪ್ಪಾರ, ಶ್ವೇತಾ ಜೈನ್​, ಹೇಮಾ ಸೋಮವಾರ, ಅರುಣಾಚಲ ಯಲಗಚ್ಚಿ, ಚಂದ್ರು ನವಲಗುಂದ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ