ಬಳ್ಳಾರಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಶೇ.6ರಷ್ಟು ಹೆಚ್ಚಿಸಿರುವ ರಾಜ್ಯ ಸರ್ಕಾರದ ಅಧಿಸೂಚನೆ ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಉಪನ್ಯಾಸಕ ಶ್ರೀನಿವಾಸಮೂರ್ತಿ, ತಳವಾರ ದುರುಗಪ್ಪ, ರಾಜ್ಯ ಸಂಘಟನಾ ಸಂಚಾಲಕ ಎಸ್. ವಿಘ್ನೇಶ್, ರಾಜ್ಯ ಸಮಿತಿ ಸದಸ್ಯ ಕೊಡ್ಲೆ ಮಲ್ಲಿಕಾರ್ಜುನ, ಜಿಲ್ಲಾ ಸಂಚಾಲಕ ಜಿ. ಗೋವರ್ಧನ, ಜಿಲ್ಲಾ ಸಂಘಟನಾ ಸಂಚಾಲಕ ಫೋಟೊರಾಜ, ನಟರಾಜ, ವೀರಭದ್ರಪ್ಪ, ಗಂಗಾಧರ, ಬಾಪೂಜಿನಗರ ವೆಂಕಟೇಶ್, ಪೆದ್ದ ಎರ್ರಿಸ್ವಾಮಿ, ಮುರಳಿಮೋಹನ, ಆರ್.ಎಚ್. ವೆಂಕಟೇಶ್, ಸೋಮಪ್ಪ ಕೊಳಗಲ್ಲು, ಮಾರ್ಕೆಟ್ ರಾಜ, ಗುರುದೇವ, ಕುಡಿತಿನಿ ವೆಂಕಟೇಶ್, ಲೆನಿನ್, ಅತಾವುಲ್ಲಾ, ಮಲ್ಲೇಶ್ವರಿ, ರುದ್ರಪ್ಪ, ಎರಿಸ್ವಾಮಿ ಕೊಳಗಲ್ಲು, ತಾಲೂಕು ಸಂಚಾಲಕ ಗುಂಡಪ್ಪ, ಹೊನ್ನೇಶ್ ಬಿ. ಗೋನಾಳ್, ಶೇಖರ್, ಅರುಣ್ ಕುಮಾರ್ ಮುಂಡ್ರಿಗಿ, ಪದಾಧಿಕಾರಿಗಳಾದ ತಾಯಣ್ಣ, ಪ್ರಹ್ಲಾದ್, ನಾಗರಾಜ್, ಅಂಜಿ, ರವಿ ಗೊಲ್ಲಲಿಂಗಮ್ಮನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರ ಕೇಂದ್ರ ಸ್ಥಾನಿಕ ಅಧಿಕಾರಿಗಳು ಸ್ವೀಕರಿಸಿದರು.