ಜೆಇಇ ಮೈನ್ ಪರೀಕ್ಷೆ: ಜ್ಞಾನಸುಧಾ ಪಿಯು ಕಾಲೇಜಿಗೆ 99 ಕ್ಕಿಂತ ಅಧಿಕ ಪರ್ಸಂಟೈಲ್

KannadaprabhaNewsNetwork | Published : Apr 26, 2024 12:50 AM

ಸಾರಾಂಶ

ಜೆಇಇ ಮೈನ್ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪಿಯು ಕಾಲೇಜಿನ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್‌ ಗಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ರಾಷ್ಟ್ರ ಮಟ್ಟದಲ್ಲಿ ನಡೆಯುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪಿಯು ಕಾಲೇಜಿನ 8 ವಿದ್ಯಾರ್ಥಿಗಳು 99 ಗಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಬಿಪಿನ್ ಜೈನ್. ಬಿ.ಎಂ 99. 8252192 ಪರ್ಸಂಟೈಲ್, ಪ್ರಿಯಾಂಶ್ ಎಸ್.ಯು 99. 7914848 ಪರ್ಸಂಟೈಲ್, ಚಿರಂತನ ಜೆ.ಎ 99.7560565 ಪರ್ಸಂಟೈಲ್, ನಿಮೇಶ್ ಆರ್ ಆಚಾರ್ಯ 99. 5745755 ಪರ್ಸಂಟೈಲ್, ರಿಷಿತ್ ವೇಣು ಬಿಳಿಮಗ 99. 4436757 ಪರ್ಸಂಟೈಲ್, ಕ್ಷಿರಾಜ್ ಎಸ್ ಆಚಾರ್ಯ 99. 2863832 ಪರ್ಸಂಟೈಲ್, ಶ್ರೀದಾ ಕಾಮತ್ 99.170 1862 ಪರ್ಸಂಟೈಲ್, ಪ್ರತೀಕ್ ಅಶೋಕ್ ಆಚಾರ್ಯ 99.07550707 ಪರ್ಸಂಟೈಲ್ ಗಳಿಸಿದ ಸಾಧಕರಾಗಿದ್ದಾರೆ.

ಜೊತೆಗೆ ಕ್ಷಮಾ ಜಯ ಚಂದ್ 98.9824858 ಪರ್ಸಂಟೈಲ್, ಎಂ.ಕೆ. ಮದನ್ ಗೌಡ 98.8580397 ಪರ್ಸಂಟೈಲ್, ಚಿನ್ಮಯ್ ದೇಶ್‌ಪಾಂಡೆ 98.8319757 ಪರ್ಸಂಟೈಲ್, ದೇವಾಂಶ್ ದೀಪಕ್ ಬಿ. 98.5450353 ಪರ್ಸಂಟೈಲ್, ಗಜೇಂದ್ರ ಜಿ. 98.5094686 ಪರ್ಸಂಟೈಲ್, ರಾಯನ್ ಡಿ’ಸೋಜ 98.4799483 ಪರ್ಸಂಟೈಲ್, ಸಮ್ಮಿತ್ ಕೃಷ್ಣ ಯು 98.468 3186 ಪರ್ಸಂಟೈಲ್, ಪ್ರಥಮ್ ಕುಮಾರ್ ಶೆಟ್ಟಿ 98. 3920595 ಪರ್ಸಂಟೈಲ್, ಅದಿತ್ ಎನ್ ಪೂಜಾರಿ 98.3844313 ಪರ್ಸಂಟೈಲ್, ಪ್ರಣಮ್ ಪ್ರಭು 98.3203365 ಪರ್ಸಂಟೈಲ್ (ಫಿಸಿಕ್ಸ್ನಲ್ಲಿ 100 ಪರ್ಸಂಟೈಲ್), ಖುಷಿ.ಎಸ್.ಹೆಗ್ಡೆ 98. 2207923 ಪರ್ಸಂಟೈಲ್, ಕೃಷ್ ಎಸ್.ಕೆ. 98. 1738516 ಪರ್ಸಂಟೈಲ್, ಚಂದನ್ ಡಿ. ಪ್ರಭು 98. 1738516 ಪರ್ಸಂಟೈಲ್, ನಿಧಿ ಕಿರಣ್ ಎನ್ 98. 149 8366 ಪರ್ಸಂಟೈಲ್, ಆಕಾಂಕ್ಷ್ ಎನ್ ಮಲ್ಯ 98.1377726 ಪರ್ಸಂಟೈಲ್ ಮತ್ತು ಸಾತ್ವಿಕ್ ಜಿ.ಜೆ. 98. 1290041 ಪರ್ಸಂಟೈಲ್ ಮತ್ತು ಪ್ರಶಸ್ತಿ ಎಸ್ ಶೆಟ್ಟಿ 98. 0278899 ಪರ್ಸಂಟೈಲ್ ಗಳಿಸಿರುತ್ತಾರೆ.

ಜ್ಞಾನಸುಧಾದ ಒಟ್ಟು 25 ವಿದ್ಯಾರ್ಥಿಗಳು 98 ಕ್ಕಿಂತ ಅಧಿಕ ಪರ್ಸಂಟೈಲ್, 48 ವಿದ್ಯಾರ್ಥಿಗಳು 97 ಕ್ಕಿಂತ ಅಧಿಕ ಪರ್ಸಂಟೈಲ್, 73 ವಿದ್ಯಾರ್ಥಿಗಳು 96 ಕ್ಕಿಂತ ಅಧಿಕ ಪರ್ಸಂಟೈಲ್, 100 ವಿದ್ಯಾರ್ಥಿಗಳು 95 ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ 201 ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. ಒಟ್ಟು 236 ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುತ್ತಾರೆ.

ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯಾ ಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಶ್ಲಾಘಿಸಿ ಎಲ್ಲರನ್ನು ಅಭಿನಂದಿಸಿದ್ದಾರೆ.

Share this article