ಎಂಜನಿಯರಿಂಗ್‌ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶ

KannadaprabhaNewsNetwork |  
Published : Apr 28, 2025, 12:52 AM ISTUpdated : Apr 28, 2025, 12:26 PM IST
27ಎಚ್‌ಪಿಟಿ2- ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ “ಅಟೋಡೆಸ್ಕ್ ಫ್ಯೂಶನ್-360” ಎಂಬ ಕಾರ್ಯಾಗಾರವನ್ನುಧಾರವಾಡದ ಗ್ಲೋಬಲ್ ಇನ್ಫೋಟೆಕ್‌ನ ತಾಂತ್ರಿಕ ನಿರ್ದೇಶಕ ಅನಿಲ್ ಘಾಸ್ತೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರತಿಯೊಬ್ಬ ಕೋರ್ ಎಂಜಿನಿಯರ್‌ಗೆ ಮೂವತ್ತು ಉದ್ಯೋಗಾವಕಾಶಗಳು ಕಾದಿವೆ. ಆದರೆ ವಿದ್ಯಾರ್ಥಿಗಳು ತಮ್ಮ ಎಂಜಿನಿಯರಿಂಗ್‌ನ ಮೂಲಭೂತ ಅಂಶ ತಿಳಿದಿರಬೇಕು. ಕೈಗಾರಿಕಾ ಕ್ಷೇತ್ರದಲ್ಲಿ ಕೋರ್ ಎಂಜಿನಿಯರ್‌ಗಳ ಐದು ಪಟ್ಟು ಉದ್ಯೋಗಗಳ ಬೇಡಿಕೆ ಇದೆ.

ಹೊಸಪೇಟೆ: ಪ್ರತಿಯೊಬ್ಬ ಕೋರ್ ಎಂಜಿನಿಯರ್‌ಗೆ ಮೂವತ್ತು ಉದ್ಯೋಗಾವಕಾಶಗಳು ಕಾದಿವೆ. ಆದರೆ ವಿದ್ಯಾರ್ಥಿಗಳು ತಮ್ಮ ಎಂಜಿನಿಯರಿಂಗ್‌ನ ಮೂಲಭೂತ ಅಂಶ ತಿಳಿದಿರಬೇಕು. ಕೈಗಾರಿಕಾ ಕ್ಷೇತ್ರದಲ್ಲಿ ಕೋರ್ ಎಂಜಿನಿಯರ್‌ಗಳ ಐದು ಪಟ್ಟು ಉದ್ಯೋಗಗಳ ಬೇಡಿಕೆ ಇದೆ.  

ಒಂದುವರೆ ಲಕ್ಷ ಉದ್ಯೋಗಾವಕಾಶಗಳು ಮೆಕ್ಯಾನಿಕಲ್,ಎಲೆಕ್ಟ್ರಿಕಲ್ ಮತ್ತು ಸಿವಿಲ್ ವಿಭಾಗದವರಿಗೆ ಬಿಲ್ಡಿಂಗ್ ಇನ್ಫಾರ್ಮೇಷನ್ ಮಾಡೆಲ್ಲಿಂಗ್‌ನ (ಬಿಐಎಂ) ಕೈಗಾರಿಕಾ ಕ್ಷೇತ್ರದಲ್ಲಿ ಕಾದು ಕುಳಿತಿವೆ ಎಂದು ಧಾರವಾಡದ ಗ್ಲೋಬಲ್ ಇನ್ಫೋಟೆಕ್‌ನ ತಾಂತ್ರಿಕ ನಿರ್ದೇಶಕ ಅನಿಲ್ ಘಾಸ್ತೆ ಹೇಳಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ (ಪಿಡಿಐಟಿ)ದಲ್ಲಿ ಯಾಂತ್ರಿಕ ವಿಭಾಗದಿಂದ ಐಕ್ಯೂಎಸಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಟೋಡೆಸ್ಕ್ ಫ್ಯೂಶನ್-360 ಎಂಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೇವಲ ಸಾಫ್ಟವೇರ್‌ಗಳನ್ನು ಕಲಿತರೆ ಅವರು ಸೈಜ ಎಂಜಿನಿಯರ್‌ಗಳಲ್ಲ,ಎಂಜಿನಿಯರಿಂಗ್‌ನ ಮೂಲಭೂತ ಅಂಶ ತಿಳಿದು ಆ ವಿಭಾಗದಲ್ಲಿ ಸಂಬಂಧಿಸಿದ ಸಾಫ್ಟವೇರ್ ಕಲಿಕೆ ಹಾಗೂ ಪ್ರೋಗ್ರಾಮ್ಮಿಂಗ್ ಕೌಶಲ್ಯಗಳು ಉದ್ಯೋಗಾವಕಾಶಗಳಿಗೆ ನಾಂದಿಯಾಗಲಿವೆ ಎಂದರು.

ಈ ಐದು ದಿನದ ಕಾರ್ಯಾಗಾರದಲ್ಲಿ ಶಿಕ್ಷಕರ ಬೋಧನಾ ಕಲಿಕೆಗೆ ಅನುಕೂಲವಾಗುವ ಅಟೋಕ್ಯಾಡ್ ಮಾಡೆಲ್ಲಿಂಗ್, ಪ್ರಾಜೆಕ್ಟ್ ಮ್ಯಾನುಫ್ಯಾಕ್ಚರಿಂಗ್, ಕಂಪ್ಯೂಟರ್ ಎಂಜಿನಿಯರಿಂಗ್ ಡ್ರಾಯಿಂಗ್ ಮತ್ತು ಡಿಸೈನ್ ಹಾಗೂ ಮುಂತಾದ ಟೂಲ್ಸ್‌ಗಳ ಬಗ್ಗೆ ತರಬೇತಿ ನೀಡಲಾಗುವುದು ಹಾಗೂ ಈ ಅಟೋಡೆಸ್ಕ್ ಫ್ಯೂಶನ್-360 ಸಾಫ್ಟವೇರ್ ವಿದ್ಯಾರ್ಥಿಗಳಿಗೆ, ಶಿಕ್ಷಣ ತಜ್ಞರಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಉಚಿತವಾಗಿ ಬಳಸಲು ನೀಡಲಾಗಿದೆ ಎಂದು ಹೇಳಿದರು.

ಪಿಡಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಂ.ರೋಹಿತ್ ಮಾತನಾಡಿ, ಕೈಗಾರಿಕಾ ಕ್ಷೇತ್ರಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರಿ ಮಾಡಬೇಕು. ಜ್ಞಾನ ಮತ್ತು ಕೌಶಲ್ಯ ನವೀಕರಿಸಲು ಈ ಕಾರ್ಯಾಗಾರವು ಸಹಕಾರಿಯಾಗಲಿದೆ. ಅಧ್ಯಾಪಕರ ಅಭಿವೃದ್ಧಿಗಾಗಿ ಇಂತಹ ಅಮೂಲ್ಯ ಕಾರ್ಯಕ್ರಮ ಆಯೋಜಿಸಿದ ತಂಡವನ್ನು ಶ್ಲಾಘಿಸಿದರು.

ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಬಿ.ಎಚ್. ಮಂಜುನಾಥ್ ಮಾತನಾಡಿ, ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರದ ನಡುವಿನ ಅಂತರ ಸರಿದೂಗಿಸಲು ಇಂತಹ ಕಾರ್ಯಾಗಾರಗಳು ಅತ್ಯಮೂಲ್ಯ ಎಂದು ಹೇಳಿದರು.

ಪಿಡಿಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್, ಉಪಪ್ರಾಂಶುಪಾಲ ಡಾ. ಪಾರ್ವತಿ ಕಡ್ಲಿ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಬಿ.ಎಚ್.ಮಂಜುನಾಥ್, ಐಕ್ಯೂಎಸಿಯ ಸಂಚಾಲಕ ಡಾ.ಶಿವಕೇಶವ್ ಕುಮಾರ್, ಡೀನ್ ಡಾ.ಮಂಜುಳಾ ಎಸ್.ಡಿ.,ಕಾರ್ಯಕ್ರಮದ ಸಂಚಾಲಕ ಡಾ. ನವೀನ್ ಆರ್.ಗಣೇಶ್, ಸಂಚಾಲಕ ಡಾ. ಕೆ.ಜಿ.ಪ್ರಕಾಶ್ ಮತ್ತಿತರರಿದ್ದರು. ಪ್ರೊ. ಚಂದ್ರಕುಮಾರ್ ಚಕ್ರಸಾಲಿ, ಪ್ರೊ. ಪೂರ್ಣಿಮಾ, ಕಾರ್ಯಕ್ರಮದ ಸಂಚಾಲಕ ಡಾ. ಕೆ.ಜಿ. ಪ್ರಕಾಶ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ