ಕೃಷಿ ಕ್ಷೇತ್ರದ ಪದವೀಧರರಿಗೆ ವಿಫುಲ ಅವಕಾಶ

KannadaprabhaNewsNetwork | Published : Dec 30, 2024 1:05 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ದೇಶದಲ್ಲಿ ಚಾರ್ಟೆಡ್ ಅಕೌಂಟೆಂಟ್ ನಂತರ ಕೃಷಿ ಕ್ಷೇತ್ರದ ಪದವೀಧರರಿಗೆ ಉದ್ಯೋಗಗಳಲ್ಲಿ ವಿಪುಲ ಅವಕಾಶಗಳಿವೆ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಹೇಳಿದರು. ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕೃಷಿ ಮಹಾವಿದ್ಯಾಲಯ ವಿಜಯಪುರ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಸಂಕಲ್ಪ ತಂಡಗಳ ಸಹಯೋಗದಲ್ಲಿ ವ್ಯಕ್ತಿತ್ವ ಮತ್ತು ವೃತ್ತಿಜೀವನ ವಿಕಸನ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ದೇಶದಲ್ಲಿ ಚಾರ್ಟೆಡ್ ಅಕೌಂಟೆಂಟ್ ನಂತರ ಕೃಷಿ ಕ್ಷೇತ್ರದ ಪದವೀಧರರಿಗೆ ಉದ್ಯೋಗಗಳಲ್ಲಿ ವಿಪುಲ ಅವಕಾಶಗಳಿವೆ ಎಂದು ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಹೇಳಿದರು.

ನಗರದ ಹೊರವಲಯದ ಕೃಷಿ ಮಹಾವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕೃಷಿ ಮಹಾವಿದ್ಯಾಲಯ ವಿಜಯಪುರ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಸಂಕಲ್ಪ ತಂಡಗಳ ಸಹಯೋಗದಲ್ಲಿ ವ್ಯಕ್ತಿತ್ವ ಮತ್ತು ವೃತ್ತಿಜೀವನ ವಿಕಸನ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೀವನದಲ್ಲಿ ಪ್ರತಿಯೊಬ್ಬರೂ ಏನಾದರೊಂದು ಸಾಧಿಸುತ್ತೇನೆಂಬ ಸ್ಪಷ್ಟವಾದ ಗುರಿಯನ್ನು ಹೊಂದಿರಬೇಕೆಂದರು. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ಇತಿಹಾಸ, ಭೂಗೋಳಶಾಸ್ತ್ರ, ವಿಜ್ಞಾನ ಮತ್ತು ಸಂವಿಧಾನ ವಿಷಯಗಳ ಪರಿಪೂರ್ಣ ಜ್ಞಾನ ಹೊಂದಿರಬೇಕು. ಇದಕ್ಕಾಗಿ ಪ್ರತಿನಿತ್ಯ ನಡೆಯುವ ಘಟನಾವಳಿಗಳ ಅವಲೋಕನೆಗಾಗಿ ದಿನ ಪತ್ರಿಕೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ವಿಗಾಗಿ ಭೌತಿಕ ಸದೃಢತೆ, ಮಾನಸಿಕ ಸಿದ್ದತೆ, ಭಾವನಾತ್ಮಕ ಸಂಬಂಧ ಮತ್ತು ಆಧ್ಯಾತ್ಮಕ ಉತ್ತುಂಗತೆಯತ್ತ ಗಮನ ಹರಿಸಬೇಕು. ಅಂದಾಗ ಮಾತ್ರ ಯಾವುದೇ ಪರೀಕ್ಷೆಯನ್ನು ಸಲೀಸಾಗಿ ಎದುರಿಸಬಹುದು ಮತ್ತು ಸಾಧನೆ ಮಾಡಬಹುದು ಎಂದು ಅಭಿಪರಾಯ ಪಟ್ಟರು.ಈ ವೇಳೆ ಸಚಿನ್ ಲಾಳಸಂಗ ಮಾತನಾಡಿ, ಕೃಷಿ ವಿದ್ಯಾರ್ಥಿಗಳಿಗೆ ವಿವಿಧ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳಿದ್ದು, ಅವುಗಳ ತಯಾರಿಕೆಗೆ ಹೇಗೆ ಪೂರ್ವಸಿದ್ದತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿದರು.

ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ಕೃಷಿ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ನಾಗರಿಕ ಸೇವಾ ಕ್ಷೇತ್ರಗಳಿಗಾಗಿ ವಿಶೇಷ ಸಿದ್ದತೆ ಮಾಡಿಕೊಳ್ಳಬೇಕು ಎಂದರು.

ಸಲಹೆಗಾರ ಡಾ.ಎಸ್.ಎಸ್.ಕರಭಂಟನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಟಡಿ ಸರ್ಕಲ್ ಮೂಲಕ ವಿದ್ಯಾರ್ಥಿಗಳಿಗಾಗಿ ವಿವಿಧ ಸೇವೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ತರಬೇತಿ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಸ್ಟಡಿ ಸರ್ಕಲ್ ಉಸ್ತುವಾರಿ ನವೀನ ಬಿರಾದಾರ ಮಾತನಾಡಿ, ಇಂತಹ ತರಬೇತಿಗಳಿಂದ ವಿದ್ಯಾರ್ಥಿಗಳ ಬೌದ್ದಿಕ ಸಾಮರ್ಥ್ಯ, ಪರೀಕ್ಷೆ ಎದುರಿಸುವ ಕಲೆ, ಒತ್ತಡ ನಿರ್ವಹಣೆ ಹೆಚ್ಚಾಗುವದು ಅದಕ್ಕಾಗಿ ಸ್ಟಡಿ ಸರ್ಕಲ್‌ನಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗುದು ಎಂದರು.

ಅಧ್ಯಕ್ಷತೆಯನ್ನು ವಿದ್ಯಾಧಿಕಾರಿ ಡಾ.ಅಶೋಕ ಎಸ್. ಸಜ್ಜನ ವಹಿಸಿದ್ದರು. ಡಾ.ಎಸ್.ಬಿ.ಜಗ್ಗಿನವರ, ಡಾ.ಎಸ್.ಹೆಚ್.ಗೋಟ್ಯಾಳ, ಡಾ.ಉಮರ ಪಾರೂಕ ಮೋಮಿನ್ ಮುಂತಾದವರು ಇದ್ದರು. ಸ್ಪೂರ್ತಿ ಹೊಂಬಳಮಠ ನಿರೂಪಿಸಿದರು. ಪುನೀತಕುಮಾರ ಸ್ವಾಗತಿಸಿದರು. ರಘೋತ್ತಮ ವಂದಿಸಿದರು.

Share this article