ಶುದ್ಧ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ದುರ್ಬಳಕೆ!

KannadaprabhaNewsNetwork |  
Published : May 01, 2026, 02:30 AM IST
ಕಲಾದಗಿ | Kannada Prabha

ಸಾರಾಂಶ

ಬಿರು ಬೇಸಿಗೆ ಮಾರ್ಚ ತಿಂಗಳಿಂದಲೇ ಆರಂಭವಾಗಿದ್ದು, ಸಾವಿರಾರು ಜನ ನಿತ್ಯ ಪ್ರಯಾಣಿಸುವ ಕಲಾದಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಶುದ್ಧ ತಂಪಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿ ವತಿಯಿಂದ ಮಾಡಲಾಗಿದ್ದು, ಇದರ ಸದ್ಬಳಕೆ ಬದಲು ದುರ್ಬಳಕೆ ಆಗುತ್ತಿದೆ.

ಚಂದ್ರಶೇಖರ ಶಾರದಾಳ

ಕನ್ನಡಪ್ರಭ ವಾರ್ತೆ ಕಲಾದಗಿಬಿರು ಬೇಸಿಗೆ ಮಾರ್ಚ ತಿಂಗಳಿಂದಲೇ ಆರಂಭವಾಗಿದ್ದು, ಸಾವಿರಾರು ಜನ ನಿತ್ಯ ಪ್ರಯಾಣಿಸುವ ಕಲಾದಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಶುದ್ಧ ತಂಪಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿ ವತಿಯಿಂದ ಮಾಡಲಾಗಿದ್ದು, ಇದರ ಸದ್ಬಳಕೆ ಬದಲು ದುರ್ಬಳಕೆ ಆಗುತ್ತಿದೆ.ಹೌದು, ಹಣ್ಣುಗಳ ನಾಡು ಕಲಾದಗಿಗೆ ನಿತ್ಯ ನೂರಾರು ಪ್ರಯಾಣಿಕ ಸಂಚರಿಸುತ್ತಾರೆ. ರಾಜ್ಯ, ಹೊರ ರಾಜ್ಯದಿಂದಲೂ ಹಣ್ಣುಗಳ ವ್ಯವಹಾರ ವಹಿವಾಟಿಗೆ ಕಲಾದಗಿಗೆ ಆಗಮಿಸುವುದು ಸಾಮಾನ್ಯ. ಆದರೆ, ಗ್ರಾಮದ ಮುಕುಟ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಲಭ್ಯ ಇರಲಿಲ್ಲ. ಕಳೆದ ತಿಂಗಳು ಪತ್ರಿಕೆ ವರದಿ ಮಾಡಿ ಶುದ್ಧ ಕುಡಿಯುವ ನೀರಿನ ಅರವಟಿಗೆ ಪ್ರಾರಂಭವಾಗುವಂತೆ ಮಾಡಿತು. ಬಿಸಿಲ ಬಾಯಾರಿಕೆಗೆ ಬಳಕೆಯಾಗುವ ಬದಲು ಬಾಟಲಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಹಲವೆಡೆ ಆಯಾ ಊರಿನವರು ಜನನಿಬಿಡ ಪ್ರದೇಶದಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮಾದರಿಯಾಗಿ ಪ್ರಶಂಸೆ ಪಾತ್ರರಾಗುತ್ತಾರೆ. ಆದರೆ, ಕಲಾದಗಿ ಬಸ್ ನಿಲ್ದಾಣದಲ್ಲಿ ಕೆಲವರು ಎರಡು ಲೀಟರ್ ಬಾಟಲಿಗಳಲ್ಲಿ ತುಂಬಿಕೊಂಡು ಹೋಗಿ ನೀಡುತ್ತಿರುವ ಆರೋಪ ಕೇಳಿ ಬಂದಿವೆ. ಏ.1 ರಂದು ಗ್ರಾಮದ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಅರವಟಿಗೆಗೆ ಚಾಲನೆ ನೀಡಲಾಗಿದೆ. ಆ ವೇಳೆ ಜನರಿಗೆ ಇದರ ಸದ್ಬಳಕೆ ಮಾಡಬೇಕು. ನೀರನ್ನು ಕುಡಿಯಲು ಮಾತ್ರ ಬಳಸಬೇಕು. ಯಾರೂ ಬಾಟಲಿಗಳಲ್ಲಿ ತುಂಬಿಕೊಂಡು ಹೋಗಬಾರದೆಂದು ಮನವಿ ಮಾಡಲಾಗಿತ್ತು. ಮತೊಮ್ಮೆ ಮನವಿ ಮಾಡಿ ತಿಳುವಳಿಕೆ ನೀಡಲು ಗ್ರಾಪಂ ಸಿಬ್ಬಂದಿಗೆ ಸೂಚನೆ ನೀಡುತ್ತೇವೆ.

-ಕೆ.ಎಚ್.ಮುಲ್ಲಾ,

ಪಿಡಿಒ ಕಲಾದಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿವ ನೀರಿನ ತೊಂದರೆಯಾಗದಂತೆ ಕ್ರಮವಹಿಸಿ: ಶಾಸಕ ವೈದ್ಯ
ರಣಬಿಸಿಲಿಗೆ ಗಣತಿದಾರರು ತೀವ್ರ ಹೈರಾಣು