ಮಹಿಳಾ ಅಧಿಕಾರಿಗೆ ನಿಂದನೆ: ಈಡಿಗ ಸಮುದಾಯ ಖಂಡನೆ

KannadaprabhaNewsNetwork |  
Published : Feb 14, 2025, 12:31 AM IST
ಪೋಟೋ: 13ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿಯ ಈಡಿಗ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಶಿವಮೊಗ್ಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಜನಾರ್ಧನ್ ಅವರು ಕರ್ತವ್ಯ ನಿರತರಾಗಿದ್ದಾಗ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದನ್ನು ಈಡಿಗ ಬಿಲ್ಲವ ನಾಮದಾರಿ ಸಮಾಜ ಸಂಪೂರ್ಣವಾಗಿ ಖಂಡಿಸುತ್ತದೆ ಎಂದು ಕಲಬುರಗಿಯ ಈಡಿಗ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಶಿವಮೊಗ್ಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಜನಾರ್ಧನ್ ಅವರು ಕರ್ತವ್ಯ ನಿರತರಾಗಿದ್ದಾಗ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದನ್ನು ಈಡಿಗ ಬಿಲ್ಲವ ನಾಮದಾರಿ ಸಮಾಜ ಸಂಪೂರ್ಣವಾಗಿ ಖಂಡಿಸುತ್ತದೆ ಎಂದು ಕಲಬುರಗಿಯ ಈಡಿಗ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗದ ಮಹಿಳಾ ಅಧಿಕಾರಿಗೆ ನಮ್ಮ ಸಮಾಜ ನೈತಿಕ ಸ್ಥೈರ್ಯ ತುಂಬಬೇಕಾಗಿದೆ. ಅವರ ಮನೆಗೆ ತೆರಳಿ ಒಂದು ಗಂಟೆ ಕಾಲ ಮಾತನಾಡಿ ಧೈರ್ಯ ತುಂಬಿದ್ದೇವೆ. ಹಿಂದುಳಿದ ವರ್ಗದ ಪರವಾಗಿದ್ದೇವೆ, ಸಂವಿಧಾನ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದೇವೆ ಎನ್ನುವ ಕಾಂಗ್ರೆಸ್ ಸರ್ಕಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಪಮಾನ ಆದಾಗ ಆರೋಪಿಗಳನ್ನು ಬಂಧಿಸಲು ತೋರಿಸಿದ ಆಸಕ್ತಿಯುನ್ನು ಈ ಪ್ರಕರಣದಲ್ಲಿ ಯಾಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದರು.ಮಹಿಳಾ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ. ಅವರು ಭಯಭೀತರಾಗಿದ್ದಾರೆ. ಕೂಡಲೇ ಅವ್ಯಾಚ್ಯ ನಿಂದನೆ ಮಾಡಿದ ವ್ಯಕ್ತಿಯನ್ನು ಬಂಧಿಸಬೇಕು. ಭದ್ರಾವತಿ ಭಾರತದ ಒಂದು ಭಾಗವಾಗಿದೆ. ಅದು ಕೂಡ ಸಂವಿಧಾನಕ್ಕೆ ಒಳಪಟ್ಟಿದೆ. ಆದರೂ ಮಹಿಳೆಯರಿಗೆ ನಿಂದನೆ ಮಾಡಿದ ವ್ಯಕ್ತಿಯ ಬಂಧನವಾಗಿಲ್ಲ. ಪೊಲೀಸರು ಸೊಮೊಟೋ ಕೇಸ್ ದಾಖಲಿಸಿ ಬಂಧಿಸಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಈಡಿಗ ಅಧಿಕಾರಿಗಳನ್ನು ದಮನಿಸುವ ಕೆಲಸ ಈ ಸರ್ಕಾರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಆ ಮಹಿಳಾ ಅಧಿಕಾರಿಗೆ ಬೆದರಿಕೆ ಅಥವಾ ಕಿರಿ ಕಿರಿ ಮಾಡಿದರೆ ಸಮಾಜ ಸುಮ್ಮನಿರುವುದಿಲ್ಲ. ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ಬೆದರಿಕೆ ಹಾಕಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿದ್ದರೆ ಭದ್ರಾವತಿ ಚಲೋ ಅಭಿಯಾನ ಹಮ್ಮಿಕೊಳ್ಳುತ್ತೇವೆ. ಆರೋಪಿತನ ತಪ್ಪಿಲ್ಲದಿದ್ದರೆ ಧ್ವನಿ ಮುದ್ರಿತ ಸ್ಯಾಂಪಲ್ ಅನ್ನು ಎಫ್‌ಎಸ್‌ಎಲ್‌ಗೆ ಕಳಿಸಿ ತನಿಖೆ ಮಾಡಲಿ. ಕೂಡಲೇ ಸಿಎಂ, ಡಿಸಿಎಂ ಮತ್ತು ಸೋನಿಯಾ ಗಾಂಧಿ ಅವರು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಕೇವಲ ಎರಡು ಮುಂದುವರೆದ ವರ್ಗದ ಜನರಿಗೆ ಮಾತ್ರ ನ್ಯಾಯ ಸಿಗುತ್ತಿದೆ. ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ತಕ್ಕ ಶಾಸ್ತಿ ಅನುಭವಿಸುತ್ತದೆ ಎಂದ ಅವರು,

ಬಳಿಕ ಅವರು ಜಿಲ್ಲಾ ರಕ್ಷಣಾಧಿಕಾರಿಗಳಿಗೂ ಮನವಿ ನೀಡಿ ತಪ್ಪಿತಸ್ಥ ಪ್ರಮುಖ ಆರೋಪಿ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ವೆಂಕಟೇಶಮೂರ್ತಿ, ಪುಷ್ಪಲತಾ ಮೂರ್ತಿ, ಗೀತಾಂಜಲಿ ದತ್ತಾತ್ರೇಯ, ಪ್ರೀತಾ ಪೂಜಾರಿ, ಮಂಜುನಾಥ್, ಯೋಗೇಂದ್ರ, ಲಲಿತಾ ಹೊನ್ನಪ್ಪ, ಮಂಜುಳಾ ರಾಘವ, ವಾಸಪ್ಪ ಮಾಸ್ತಿಕಟ್ಟೆ, ಸಚಿನ್ ನಾಯಕ್, ದೇವರಾಜ್ ನಾಯಕ್, ಪ್ರಶಾಂತ್ ನಾಯಕ್ ಮತ್ತಿತರರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ