ಖಾಸಗಿ ಕಾಲೇಜು ವಿರುದ್ಧ ಎಬಿವಿಪಿ ಪ್ರತಿಭಟನೆ

KannadaprabhaNewsNetwork |  
Published : Sep 24, 2024, 01:45 AM IST
ಎಬಿವಿಪಿ ಪ್ರತಿಭಟನೆ | Kannada Prabha

ಸಾರಾಂಶ

ಖಾಸಗಿ ಕಾಲೇಜುವೊಂದರಲ್ಲಿ ಮುಸ್ಲಿಂ ಧರ್ಮಗುರುಗಳಿಂದ ಕುರಾನ್ ಪಠಣ ಸಂದರ್ಭದಲ್ಲಿ ಹಿಂದೂ ವಿರೋಧಿಯಾಗಿ ಪ್ರವಚನ ಮಾಡಲಾಗಿದೆ ಎಂದು ಆರೋಪಿಸಿ ಕಾಲೇಜು ಎದುರು ಎಬಿವಿಪಿ ಹಾಗೂ ಹಿಂದೂಪರ ಸಂಘಟನೆಗಳು ಸೇರಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದಲ್ಲದೇ ಕ್ರಮಕೈಗೊಳ್ಳಲು ಎರಡು ದಿನದ ಗಡುವು ನೀಡಿದರು. ಕಾಲೇಜಿನ ಮುಖ್ಯಸ್ಥರು ಪ್ರತಿಭಟನಾ ಸ್ಥಳಕ್ಕೆ ಬಂದು ವಿಚಾರಿಸಿ ಮಾತನಾಡುತ್ತಾ, ಘಟನೆಗೆ ಕಾರಣರಾದ ಅಧ್ಯಾಪಕರನ್ನು ಕಾಲೇಜಿಗೆ ಕರೆಯಿಸಿ ವಿಚಾರಿಸಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಪ್ರತಿಷ್ಠಿತ ಖಾಸಗಿ ಕಾಲೇಜುವೊಂದರಲ್ಲಿ ಮುಸ್ಲಿಂ ಧರ್ಮಗುರುಗಳಿಂದ ಕುರಾನ್ ಪಠಣ ಸಂದರ್ಭದಲ್ಲಿ ಹಿಂದೂ ವಿರೋಧಿಯಾಗಿ ಪ್ರವಚನ ಮಾಡಲಾಗಿದೆ ಎಂದು ಆರೋಪಿಸಿ ಕಾಲೇಜು ಎದುರು ಎಬಿವಿಪಿ ಹಾಗೂ ಹಿಂದೂಪರ ಸಂಘಟನೆಗಳು ಸೇರಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದಲ್ಲದೇ ಕ್ರಮಕೈಗೊಳ್ಳಲು ಎರಡು ದಿನದ ಗಡುವು ನೀಡಿದರು.

ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡ ಶ್ರೀನಿವಾಸ್ ಸಾವರ್ಕರ್ ಮಾತನಾಡಿ, ನಗರದಲ್ಲಿರುವ ಮಾಸ್ಟರ್ ಪಿಯು ಕಾಲೇಜಿನಲ್ಲಿ ಕೆಲ ದಿನಗಳ ಹಿಂದೆ ಹಿಂದೂ ರಾಷ್ಟ್ರ ವಿರೋಧಿ ಸಂಘಟನೆಗೆ ಸೇರಿದ ವ್ಯಕ್ತಿಯಿಂದ ಹಿಂದೂ ವಿರೋಧಿ ನೀತಿಯಾಗಿ ಪ್ರವಚನ ನಡೆಸಲಾಗಿದೆ. ಇದಕ್ಕೆ ಕಾಲೇಜಿನ ಅಧ್ಯಾಪಕರು ಹಾಗೂ ಆಡಳಿತ ಮಂಡಳಿ ಸಹಕರಿಸಿದೆ. ಆದ್ದರಿಂದ ಅಧ್ಯಾಪಕನ ವಿರುದ್ಧ ಸೂಕ್ತ ಹಿಂದೂ ವಿರೋಧಿ ಪ್ರವಚನಕ್ಕೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು.ಹಿಂದೂಗಳ ಧಾರ್ಮಿಕ ಆಚರಣೆಗಳಾದ ಯುಗಾದಿ, ಶಿವರಾತ್ರಿ ಹಬ್ಬ, ಬಸವ ಜಯಂತಿ, ಗಣೇಶ ಹಬ್ಬ ಸೇರಿದಂತೆ ಅನೇಕ ಕಾರ್ಯ ಕ್ರಮಗಳಿಗೆ ಅಡಳಿತ ಮಂಡಳಿ ರಜೆ ನೀಡುವುದಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒಪ್ಪಿಗೆ ನೀಡುವುದಿಲ್ಲ. ಆದರೆ ಕಾಲೇಜಿನ ಸೆಲ್ಲರ್‌ನಲ್ಲಿ ನಮಾಜ್ ಮಾಡಲು ಅವಕಾಶ ಸೇರಿದಂತೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡುತ್ತೀರಿ ಎಂದು ಗಂಭೀರವಾಗಿ ಆರೋಪಿಸಿದರು.

ಕಾಲೇಜಿನ ಮುಖ್ಯಸ್ಥರು ಪ್ರತಿಭಟನಾ ಸ್ಥಳಕ್ಕೆ ಬಂದು ವಿಚಾರಿಸಿ ಮಾತನಾಡುತ್ತಾ, ಘಟನೆಗೆ ಕಾರಣರಾದ ಅಧ್ಯಾಪಕರನ್ನು ಕಾಲೇಜಿಗೆ ಕರೆಯಿಸಿ ವಿಚಾರಿಸಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳೆದ 12 ವರ್ಷದಿಂದ ನಮ್ಮ ಕಾಲೇಜನ್ನು ಯಾವುದೇ ಸಮುದಾಯಕ್ಕೆ ನೋವುಂಟು ಮಾಡದಂತೆ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಕೆಲ ದಿನದ ಹಿಂದೆ ಲೋಪವಾಗಿದ್ದು, ಕಾಲೇಜು ಆಡಳಿತ ಮಂಡಳಿ ಯಾವುದೇ ಧರ್ಮದ ವಿರುದ್ಧ ಕೆಲಸ ಮಾಡುವುದಿಲ್ಲ.

ಯಾವುದೇ ವಿದ್ಯಾರ್ಥಿಗಳಿಗೆ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ರಜೆ ಸೇರಿದಂತೆ ಇತರೆ ಸೌಲಭ್ಯವನ್ನು ನೀಡಿದ್ದೇವೆ. ಇದರಲ್ಲಿ ಯಾರದೇ ತಪ್ಪು ಆಗಿದ್ದರೂ ಅವರ ವಿರುದ್ಧ ನಾವು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರು ಪ್ರತಿಭಟನಾಕಾರರಿಗೆ ಭರವಸೆ ಕೊಟ್ಟರು. ಮುನ್ನೆಚ್ಚರಿಕ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ವೇಣುಗೋಪಾಲ್, ಎಬಿವಿಪಿಯ ದರ್ಶನ್, ರಕ್ಷಿತ್ ಭಾರಧ್ವಜ್, ವಿಶಾಲ್ ಅಗರ್‌ವಾಲ್, ರವಿಸೋಮು ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ