ಸ್ಮಶಾನದಲ್ಲಿ ಸಸಿ ನೆಟ್ಟು ಜನ್ಮದಿನ ಆಚರಿಸಿಕೊಂಡ ಎಸಿ

KannadaprabhaNewsNetwork |  
Published : Jun 23, 2024, 02:13 AM IST
ಸಾವಳಗಿ ಗ್ರಾಮದ ಹಿಂದು ರುದ್ರಭೂಮಿಯಲ್ಲಿ 30ಕ್ಕೂ ಅಧಿಕ್ಕೂ ಸಸಿ ನೆಟ್ಟು ನೀರುಣಿಸಿದರು. | Kannada Prabha

ಸಾರಾಂಶ

ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಬೇಕು ಎಂದು ಜಮಖಂಡಿ ಉಪವಿಭಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಸಾವಳಗಿ

ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಬೇಕು, ಅವುಗಳನ್ನು ಚೆನ್ನಾಗಿ ಬೆಳೆಸಿದಾಗ ದೊಡ್ಡ, ಮರಗಳಾಗಿ ನೆರಳು ಮತ್ತು ಹಣ್ಣು ಕೊಡುವಾಗ ಅದರ ಮಹತ್ವ ಅರ್ಥವಾಗುತ್ತದೆ ಎಂದು ಜಮಖಂಡಿ ಉಪವಿಭಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

ಸಾವಳಗಿ ಗ್ರಾಮದ ಹಿಂದು ರುದ್ರಭೂಮಿಯಲ್ಲಿ ತಮ್ಮ ಹುಟ್ಟುಹಬ್ಬದ ನಿಮಿತ್ತ ಉಮೇಶ ಜಾಧವ ನೇತೃತ್ವ ತಂಡದ ಸಮ್ಮುಖದಲ್ಲಿ 30ಕ್ಕೂ ಅಧಿಕ ಸಸಿಗಳನ್ನು ನೆಟ್ಟು ನೀರುಣಿಸಿ ಮಾತನಾಡಿದರು.

ಪರಿಸರ ಬೆಳೆಸಿ ಪೋಷಣೆ ಮಾಡುವ ಕಾರ್ಯ ಅಷ್ಟೊಂದು ಸುಲಭವಲ್ಲ. ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು. ಪರಿಸರದಿಂದ ಆಮ್ಲಜನಕ ರಕ್ಷಣೆಯ ಮಹತ್ವ ತಿಳಿಸುವುದು ಅವಶ್ಯ. ಗಿಡ ಬೆಳೆಸಿ ಪೋಷಿಸುವ ಮೂಲಕ ನಮ್ಮ ಮುಂದಿನ ಪಿಳಿಗೆಗೆ ಉತ್ತಮ ವಾತಾವರಣ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಉಪತಹಸೀಲ್ದಾರ್‌ ವೈ.ಎಚ್. ದ್ರಾಕ್ಷಿ, ಪಿಡಿಒ ಗಿರೀಶ ಕಡಕೋಳ, ಗ್ರಾಮ ಆಡಳಿತಾಧಿಕಾರಿ ಈಶ್ವರ ಹೊಸಲ್ಕರ, ರಾಮಣ್ಣ ಬಂಡಿವಡ್ಡರ, ಕಿರ್ತಕುಮಾರ ನಾಂದ್ರೇಕರ, ಸಿದ್ಧಾರ್ಥ ತಳಕೇರಿ, ಅಣ್ಣಪ್ಪ ಮೋಹಿತೆ, ನಂದಕುಮಾರ ಕನೇರಿ, ಮಹಾದೇವ ಮಾಳಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ