ಮಾಹೆ ಟೀಚ್‌ಸ್ಪೂನ್‌ ಎಡ್‌ಟೆಕ್‌ ನಡುವೆ ಶೈಕ್ಷಣಿಕ- ಔದ್ಯಮಿಕ ಒಡಂಬಡಿಕೆ

KannadaprabhaNewsNetwork |  
Published : Jul 11, 2024, 01:33 AM IST
ಮಾಹೆ10 | Kannada Prabha

ಸಾರಾಂಶ

ಮಾಹೆ - ಟೀಚ್‌ ಸ್ಪೂನ್‌ ಸಂಸ್ಥೆಗಳ ನಡುವೆ ಶೈಕ್ಷಣಿಕ - ಔದ್ಯಮಿಕ ಕ್ಷೇತ್ರಗಳ ಸಹಭಾಗಿತ್ವಕ್ಕೆ ಮಹತ್ವದ ಒಡಂಬಡಿಕೆ ಆಗಿದೆ. ಮಾಹೆ ಕುಲ ಸಚಿವರು ಮತ್ತು ಟೀಚ್‌ಸ್ಪೂನ್‌ ಸ್ಥಾಪಕಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ಪ್ರೈ. ಲಿ. ಸಂಸ್ಥೆಗಳು ಶೈಕ್ಷಣಿಕ- ಔದ್ಯಮಿಕ ಕ್ಷೇತ್ರಗಳ ಸಹಭಾಗಿತ್ವಕ್ಕೆ ಮಹತ್ತ್ವದ ಒಡಂಬಡಿಕೆಗೆ ಸಹಿ ಮಾಡಿವೆ.

ಈ ಜಂಟಿ ಸಹಯೋಗವು ಡಿಜಿಟಲ್‌ ಕಲಿಕೆಗೆ ಅವಕಾಶ ನೀಡುವ ಉಪಕ್ರಮಗಳು, ಶಿಕ್ಷಣ ವಿಷಯಕ ಕಾರ್ಯಾಗಾರ ಮತ್ತು ಅಂತರ್ಜಾಲಗೋಷ್ಠಿ (ವೆಬಿನಾರ್‌) ಗಳ ಆಯೋಜನೆ ಮತ್ತು ಜಂಟಿ ಸಂಶೋಧನಾತ್ಮಕ ಚಟುವಟಿಕೆಗಳ ಉತ್ತೇಜನೆ ಮುಂತಾದವುಗಳತ್ತ ಗಮನ ಹರಿಸಲಿದೆ.

ಈ ಒಪ್ಪಂದ ಪತ್ರಕ್ಕೆ ಮಾಹೆಯ ಕುಲಸಚಿವ ಡಾ. ಗಿರಿಧರ್‌ ಪಿ. ಕಿಣಿ ಮತ್ತು ಟೀಚ್‌ಸ್ಪೂನ್‌ ಎಡ್‌ಟೆಕ್‌ ನ ಸ್ಥಾಪಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಲಕ್‌ ಭಂಡಾರಿ ಅವರು ಸಹಿಹಾಕಿದರು.

ಟೀಚ್‌ಸ್ಪೂನ್‌ ಎಡ್‌ಟೆಕ್‌ ಸಂಸ್ಥೆಯು ಶಿಕ್ಷಣ ಮತ್ತು ಕಲಿಕೆಗೆ ಸಂಬಂಧಿಸಿದ ನವೋದ್ಯಮವಾಗಿದ್ದು ಇದರ ಸ್ಥಾಪಕರಾದ ಡಾ. ಪಲಕ್‌ ಭಂಡಾರಿ ಅವರು ಮಂಗಳೂರಿನ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸಾಯನ್ಸಸ್‌ನ ಹಳೆವಿದ್ಯಾರ್ಥಿಯಾಗಿದ್ದಾರೆ.

ಡಾ. ಗಿರಿಧರ ಕಿಣಿಯವರು, ‘ಮಾಹೆ ಮತ್ತು ಟೀಸ್ಪೂನ್‌ ಎಡ್‌ಟೆಕ್‌ ಪ್ರೈ ಲಿ. ನಡುವಿನ ಈ ಸಹಭಾಗಿತ್ವವು ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳುವ ಮಹತ್ವದ ಪ್ರಯತ್ನವಾಗಿದೆ. ಈ ಒಪ್ಪಂದದ ಮುಖ್ಯ ಆಶಯವು ಡಿಜಿಟಲ್‌ ಕಲಿಕೆಯನ್ನು ವೃದ್ಧಿಪಡಿಸುವುದಾಗಿದೆ. ಈ ಮೂಲಕ ಮಾಹೆಯಲ್ಲಿರುವ ವಿವಿಧ ಕ್ಷೇತ್ರಗಳ ತಜ್ಞರು ತಮ್ಮ ಜ್ಞಾನವನ್ನು ಸಹಭಾಗಿಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ ಮತ್ತು ಸಮಷ್ಟಿ ಪ್ರಗತಿಯ ಮನೋಭಾವವನ್ನು ಬೆಳೆಸಿಕೊಳ್ಳಬಹುದಾಗಿದೆ’ ಎಂದರು.

ಮಂಗಳೂರಿನ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸಾಯನ್ಸಸ್‌ ನ ಡೀನ್‌ ಡಾ. ಅಶಿತಾ ಉಪ್ಪೂರ್‌ ಅವರು ದಂತ ವೈದ್ಯಕೀಯ ಶಿಕ್ಷಣದಲ್ಲಿ ಪ್ರಸ್ತುತ ಒಡಂಬಡಿಕೆಯು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಲಿದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದರು.

ಡಾ. ಪಲಕ್‌ ಭಂಡಾರಿ ಅವರು ಮಾಹೆಯೊಂದಿಗೆ ತಮ್ಮ ಸಂಸ್ಥೆ ಸಹಭಾಗಿತ್ವ ಹೊಂದಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಡಿಜಿಟಲ್‌ ಕಲಿಕೆಯನ್ನು ಬೆಳೆಸುವುದು ಮತ್ತು ಉತ್ತೇಜಿಸುವ ಪ್ರಯತ್ನದಲ್ಲಿ ಎರಡೂ ಸಂಸ್ಥೆಗಳು ಕೈಜೋಡಿಸಲಿವೆ. ಅತ್ಯುತ್ತಮ ಗುಣಮಟ್ಟದ ಕಾರ್ಯಾಗಾರ ಮತ್ತು ವಿಜಾರಗೋಷ್ಠಿಗಳನ್ನು ಆಯೋಜಿಸಿ ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್‌ ಶಿಕ್ಷಣ ಕ್ಷೇತ್ರಕ್ಕೆ ಮಹತ್ತ್ವದ ಕೊಡುಗೆಗಳನ್ನು ನೀಡಲಿವೆ ಎಂದರು.

ಮಾಹೆಯ ಸಾಂಸ್ಥೀಯ ಸಂಬಂಧಗಳ ವಿಭಾಗದ ನಿರ್ದೇಶಕ ಡಾ. ಹರೀಶ್‌ ಕುಮಾರ್‌ ಎಸ್‌. ಅತಿಥಿಗಳನ್ನು ಸ್ವಾಗತಿಸಿದರು. ಟೀಚ್‌ ಸ್ಪೂನ್‌ ಸಾಮಗ್ರಿ ಸಿದ್ಧತಾ ವಿಭಾಗ ಮುಖ್ಯಸ್ಥರಾದ ಡಾ. ಚಾಂದಿನಿ ಪಿಂಟೊ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ