ಬೇಸಿಗೆ ಶಿಬಿರಗಳಿಂದ ಮಕ್ಕಳು ಕ್ರಿಯಾಶೀಲ: ಡಾ. ನಂಜಯ್ಯ

KannadaprabhaNewsNetwork |  
Published : Apr 16, 2024, 01:03 AM IST
46 | Kannada Prabha

ಸಾರಾಂಶ

ಹಿಂದೆ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜ- ಅಜ್ಜಿಯರ ಮನೆಗೆ ಹೋಗುತ್ತಿದ್ದರು. ಅಲ್ಲಿ ಬೆಟ್ಟ ಗುಡ್ಡ ಕಣಿವೆ, ಜರಿ ತೊರೆಗಳಲ್ಲಿ ಆಡಿ ಸುಂದರ ಅನುಭವ ತಮ್ಮದಾಗಿಸಿಕೊಳ್ಳುತ್ತಿದ್ದರು. ಈ ಅನುಭವನ್ನು ಮಕ್ಕಳು ಕಳೆದುಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ನಗರ ಪ್ರದೇಶದಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿವೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಶಿಬಿರ ಆಯೋಜಿಸುತ್ತವೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಈ ಶಿಬಿರ ಆಯೋಜಿಸಿರುವುದು ಸಾರ್ಥಕ ಕಾರ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಬೇಸಿಗೆ ಶಿಬಿರಗಳು ಮಕ್ಕಳನ್ನು ಶೈಕ್ಷಣಿಕ ಒತ್ತಡದಿಂದ ಹೊರ ತಂದು ಕ್ರಿಯಾಶೀಲ ಮತ್ತು ಸೃಜನಶೀಲರನ್ನಾಗಿಸುತ್ತವೆ ಎಂದು ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಡಾ.ಎಂ. ನಂಜಯ್ಯ ಹೊಂಗನೂರು ತಿಳಿಸಿದರು.

ಬೆಳಗಿನೊಳಗು ಬಳಗ ಮತ್ತು ಸಂಚಲನ ಮೈಸೂರು ಸಹಯೋಗದಲ್ಲಿ ಆಯೋಜಿಸಿರುವ ಮಹದೇವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 20 ದಿನಗಳ ಕುಣಿಯೋಣು ಬಾರಾ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾಗತೀಕರಣ, ನಗರೀಕರಣದಿಂದ ಮಕ್ಕಳು ದೇಸಿಯತೆಯಿಂದ ವಿಮುಖರಾಗುತ್ತಿದ್ದಾರೆ. ಟಿವಿ, ಮೊಬೈಲ್ ಮತ್ತು ರಿಯಾಲಿಟಿ ಶೋಗಳು ಮಕ್ಕಳನ್ನು ನೆಲದ ಸಂಸ್ಕೃತಿಯಿಂದಲೇ ದೂರ ಮಾಡುತ್ತಿವೆ ಎಂದು ವಿಷಾದಿಸಿದರು.

ಹಿಂದೆ ಮಕ್ಕಳು ಬೇಸಿಗೆ ರಜೆಯಲ್ಲಿ ಅಜ್ಜ- ಅಜ್ಜಿಯರ ಮನೆಗೆ ಹೋಗುತ್ತಿದ್ದರು. ಅಲ್ಲಿ ಬೆಟ್ಟ ಗುಡ್ಡ ಕಣಿವೆ, ಜರಿ ತೊರೆಗಳಲ್ಲಿ ಆಡಿ ಸುಂದರ ಅನುಭವ ತಮ್ಮದಾಗಿಸಿಕೊಳ್ಳುತ್ತಿದ್ದರು. ಈ ಅನುಭವನ್ನು ಮಕ್ಕಳು ಕಳೆದುಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ನಗರ ಪ್ರದೇಶದಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿವೆ. ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಶಿಬಿರ ಆಯೋಜಿಸುತ್ತವೆ. ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಈ ಶಿಬಿರ ಆಯೋಜಿಸಿರುವುದು ಸಾರ್ಥಕ ಕಾರ್ಯ ಎಂದು ಅವರು ಶ್ಲಾಘಿಸಿದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ, ಮಹದೇವಪುರ ಗ್ರಾಪಂ ಉಪಾಧ್ಯಕ್ಷೆ ನಿಂಗಮ್ಮ ಮಹದೇವ, ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್ ಹೆಗ್ಗೂರು, ಶಿಬಿರದ ನಿರ್ದೇಶಕ ದೀಪಕ್ ಮೈಸೂರು, ಸಂಚಾಲಕರಾದ ವಿ. ಅನಿಲ್ ಕುಮಾರ್, ವಿನೋದ್ ಮಹದೇವಪುರ, ವಿ. ಮಧುಕುಮಾರ್, ಭಾವನಾ, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ಪ್ರದೀಪ್, ಕುಸುಮಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಸಮಾನತೆಗೆ ಶ್ರಮಿಸಿದವರು ಸರ್ವಜ್ಞ
ಬಿಎಲ್‌ಡಿಇ ಡೀಮ್ಡ್ ವಿವಿ ಕುಲಪತಿಯಾಗಿ ಡಾ.ಅರುಣ ಅಧಿಕಾರ ಸ್ವೀಕಾರ