ಸಂಸಾರದಲ್ಲಿನ ಸುಖ ದುಃಖ ಸಮನಾಗಿ ಸ್ವೀಕರಿಸಿ

KannadaprabhaNewsNetwork |  
Published : Apr 13, 2024, 01:09 AM IST
ಸಮೀಪದ ಗೊಜನೂರ ಗ್ರಾಮದಲ್ಲಿ ಶಿರಹಟ್ಟಿಯ ಫಕ್ಕೀರ ಸಿದ್ದರಾಮ ಸ್ವಾಮಿಗಳ ಧರ್ಮಸಭೆ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಂಸಾರದಲ್ಲಿ ಬರುವ ಸುಖಕ್ಕೆ ಹಿಗ್ಗದೆ ಕಷ್ಟಗಳಿಗೆ ಕುಗ್ಗದೆ ಮುಂದೆ ಸಾಗುವ ಗುಣ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ

ಲಕ್ಷ್ಮೇಶ್ವರ: ಮಕ್ಕಳಿಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯ ಹಾಗೂ ನಮ್ಮ ಪರಂಪರೆ ತಿಳಿಸಿ ಕೊಡುವ ಕಾರ್ಯ ಮಾಡಬೇಕು ಎಂದು ಶಿರಹಟ್ಟಿಯ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮಿಗಳು ಹೇಳಿದರು.

ಸಮೀಪದ ಗೊಜನೂರ ಗ್ರಾಮದಲ್ಲಿ ಮಹಾಂತಪ್ಪ ಸೊರಟೂರ ಅವರ ನಿವಾಸದಲ್ಲಿ ಗುರುವಾರ ರಾತ್ರಿ ನಡೆದ ಧರ್ಮ ಸಭೆ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಸಾರದಲ್ಲಿ ಬರುವ ಸುಖಕ್ಕೆ ಹಿಗ್ಗದೆ ಕಷ್ಟಗಳಿಗೆ ಕುಗ್ಗದೆ ಮುಂದೆ ಸಾಗುವ ಗುಣ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಮಕ್ಕಳಿಗೆ ಮಾನವೀಯ ಗುಣಗಳು ಜತೆಯಲ್ಲಿ ಹಿರಿಯರಿಗೆ ಹಾಗೂ ಗುರುಗಳಿಗೆ ಗೌರವ ಕೊಡುವ ಸಂಪ್ರದಾಯ ಹಾಕಿ ಕೊಡಬೇಕು.ಸಂಸಾರದಲ್ಲಿ ಬರುವ ತಾಪತ್ರಯ ದಾಟಿ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಕಾರ್ಯ ಅಗತ್ಯವಾಗಿದೆ. ಧರ್ಮವನ್ನು ನಾವು ರಕ್ಷಣೆ ಮಾಡಿದಲ್ಲಿ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಹಿಂದೂ ಪರಂಪರೆ ಹಾಗೂ ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿಕೊಂಡು ಹೋಗುವುದು ಅಗತ್ಯವಾಗಿದೆ. ಮಕ್ಕಳು ತಮ್ಮ ತಂದೆ ತಾಯಿಗಳ ಪಾಲನೆ ಪೋಷಣೆ ಮಾಡಿ ಅವರ ಮನಸ್ಸು ನೋಯದಂತ ನೋಡಿಕೊಳ್ಳಬೇಕು ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡುವ ಕಾರ್ಯ ಸಮಾಜದಲ್ಲಿನ ಪೋಷಕರು ಮಾಡುವ ಮೂಲಕ ಅವರು ಭವಿಷ್ಯವು ಉತ್ತಮವಾಗುವಂತೆ ನೋಡಿಕೊಂಡು ಹೋಗುವ ಕಾರ್ಯವಾಗಬೇಕು ಎಂದು ಹೇಳಿದರು.

ಈ ವೇಳೆ ಮಹಾಂತಪ್ಪ ಸೊರಟೂರ, ಭರತ ಬೊಮ್ಮಾಯಿ, ಸುನೀಲ ಮಹಾಂತಶೆಟ್ಟರ, ಸಿ.ಪಿ.ಮಾಡಳ್ಳಿ, ರಮೇಶ ದನದಮನಿ, ಚಂದ್ರಗೌಡ ಪಾಟೀಲ, ಕುಬೇರ ಸೊರಟೂರ, ಬಸವರಾಜ ದನದಮನಿ, ಚನವೀರಯ್ಯ ಹಿರೇಮಠ, ಶೇಖರಪ್ಪ ಸೊರಟೂರ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು