- ಕೋಡಿಯಾಲ ಪುಣ್ಯಕೋಟಿ ಮಠದ ಬಾಲಯೋಗಿ ಶ್ರೀ । ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ ಹರಿಹರ
ಪಂದ್ಯಾವಳಿಯಲ್ಲಿ ಸೋಲು ಗೆಲುವನ್ನು, ಹಗಲು-ರಾತ್ರಿಯನ್ನು ಹೇಗೆ ಅನುಭವಿಸುತ್ತೇವೆಯೋ ಹಾಗೆಯೇ ಸ್ವೀಕರಿಸಬೇಕೆಂದು ಕೋಡಿಯಾಲ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ನುಡಿದರು.ಸಂತು ಕಮ್ಯೂನಿಕೇಶನ್ ಹಾಗೂ ಸ್ನೇಹಜೀವಿ ಗೆಳೆಯರ ಬಳಗದ ಆಶ್ರಯದಲ್ಲಿ, ನಗರದ ಗಾಂಧಿ ಮೈದಾನದಲ್ಲಿ ಶುಕ್ರವಾರದಿಂದ 3 ದಿನಗಳ ಕಾಲ ನಡೆಯಲಿರುವ, ರಾಜ್ಯಮಟ್ಟದ 16 ತಂಡಗಳ ಲೀಗ್ ಕಮ್ ನಾಕೌಟ್ ಮಾದರಿಯ ರೌಂಡ್ ಆರ್ಮ್ ಕ್ರಿಕೆಟ್ ಟೂರ್ನಿಮೆಂಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅವರು ಆಶೀರ್ವಚನ ನೀಡಿದರು.
ಮಾನವನ ಬದುಕಿನಲ್ಲಿ ಕ್ರೀಡೆ ಅತ್ಯಂತ ಅವಶ್ಯಕವಾಗಿದೆ. ದೈಹಿಕ, ಮಾನಸಿಕ ಸದೃಢತೆಗೆ ಅವರವರ ಆಸಕ್ತಿಗೆ ತಕ್ಕಂತಹ ಆಟಗಳನ್ನು ಜನರು ಆಡುತ್ತಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ಕ್ರಿಕೆಟ್ ಬಹು ಜನಪ್ರಿಯತೆ ಪಡೆದಿದೆ. ಅಬಾಲವೃದ್ಧರು ಕ್ರಿಕೆಟ್ ಆಡಲು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.ಮುಖ್ಯ ಅತಿಥಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಗೋವಿಂದ ರೆಡ್ಡಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ ಹನಗವಾಡಿ, ಚಂದ್ರಶೇಖರ ಪೂಜಾರ, ತಪೋವನದ ಡಾ.ಶಶಿಕುಮಾರ ಮೆಹರ್ವಾಡೆ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಅಡಕಿ ಕುಮಾರ್, ಪ್ರವೀಣ ಪವಾರ್, ಮಹಿಳಾ ವೈದ್ಯೆ ಡಾ.ಸವಿತಾ, ಬಿಲ್ಡರ್ಸ್ ಶರತ್ ಶೇಖರ್ ಬಿ.ಸಿ., ಮಾಜಿ ಪ್ರಧಾನರಾದ ಅಮರಾವತಿ ಪರಮೇಶ್ವರಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜೀತ್ ಸಾವಂತ್, ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಮಾತನಾಡಿ, ಕ್ರೀಡಾಪಟುಗಳಿಗೆ ಶುಭ ಕೋರಿದರು.
ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶೇಖರಗೌಡರ, ಚಿದಾನಂದ ಕಂಚಿಕೇರಿ, ಬೆಳ್ಳೂಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಗೀತಾ ಬೆಳ್ಳೂಡಿ, ಮಮತಾ ಬೆಲ್ಲದ, ಶಾಂತಕುಮಾರಿ, ಕ್ರಿಕೆಟ್ ಟೂರ್ನಮೆಂಟ್ ಸಂಘಟಕರಾದ ಸಂತೋಷ ಗುಡಿಮನಿ, ಸಂಜೀವ ಗೌಡ, ಲೋಕಿಕೆರೆ ಅಣ್ಣಪ್ಪ, ಶಿವಕುಮಾರ, ವೈ.ವಿಜಯಕುಮಾರ ಬಿಳಸನೂರು, ಕುಮಾರ ಬಿ.ಎಸ್., ವಿನಾಯಕ ಕೆ.ಎಂ., ಸಂತೋಷಗೌಡ ವಿಶೇಷ ಬಹುಮಾನ, ಪ್ರತಿ ಪಂದ್ಯಕ್ಕೂ ಮ್ಯಾನ್ ಆಫ್ ದಿ ಮ್ಯಾಚ್ ಟ್ರೋಫಿ, ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಸೇರಿದಂತೆ ಎಲ್ಲ ಟ್ರೋಫಿಗಳನ್ನು ಪ್ರದರ್ಶಿಸಿದರು.ಶುಕ್ರವಾರ ಆರಂಭದ ದಿನದಂದು ಸ್ನೇಹಜೀವಿ ಹರಿಹರ, ಜನಪ್ರಿಯ ದಾವಣಗೆರೆ, ಎಚ್.ಕೆ.ಡಿ.ಸಿ., ಎಂಗ್‌ಇಲಾಯಿ, ಕಂಚಿಕೇರಿಯ ಚೌಡೇಶ್ವರಿ ಕ್ರಿಕೆಟರ್ಸ್, ಬ್ರಿಗೇಡ್ ದಾವಣಗೆರೆ ಕ್ರಿಕೆಟ್ ಆಡಿದರು.
- - --30ಎಚ್.ಆರ್.ಆರ್02A:
ಹರಿಹರದ ಗಾಂಧಿ ಮೈದಾನದಲ್ಲಿ ಶುಕ್ರವಾರದಿಂದ ಕ್ರಿಕೆಟ್ ಟೂರ್ನಮೆಂರ್ಟ್‌ಗೆ ಚಾಲನೆ ನೀಡಲಾಯಿತು.