ವಿಶ್ವಜ್ಞಾನಿ ಅಂಬೇಡ್ಕರ್‌ ಬದುಕನ್ನು ಆದರ್ಶವಾಗಿ ಸ್ವೀಕರಿಸಿ: ಇನ್ಸ್‌ಪೆಕ್ಟರ್‌ ರೇವತಿ

KannadaprabhaNewsNetwork |  
Published : Apr 16, 2025, 12:35 AM IST
15ಕೆಎಂಎನ್ ಡಿ22 | Kannada Prabha

ಸಾರಾಂಶ

ಶೋಷಿತ ವರ್ಗದಲ್ಲಿ ಹುಟ್ಟಿ ಬಡತನವನ್ನು ಸವಾಲಾಗಿ ಸ್ವೀಕರಿಸಿ ಜಯಶೀಲರಾದ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಧಮನಿತರ ಧ್ವನಿಗೆ ಶಕ್ತಿಯಾಗಿದೆ. ಹುಟ್ಟಿನಿಂದ ಸಾಯುವವರಿಗೆ ನೆಮ್ಮದಿಯಿಂದ ಬದುಕಲು ರೂಪಿಸಿದ ಕಾನೂನು ಬ್ರಹ್ಮಾಸ್ತ್ರವಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ವಿಶ್ವಜ್ಞಾನಿ ಡಾ.ಅಂಬೇಡ್ಕರ್‌ ಬದುಕಿನ ಸಾರವನ್ನು ತಿಳಿದು ಸಂವಿಧಾನವನ್ನು ಅರಿತರೆ ಸುಖ, ನೆಮ್ಮದಿ ಸಿಗಲಿದೆ ಎಂದು ಇನ್ಸ್‌ಪೆಕ್ಟರ್‌ ರೇವತಿ ಹೇಳಿದರು.

ಪಟ್ಟಣದ ಆರಕ್ಷಕ ಠಾಣೆಯಲ್ಲಿ ನಡೆದ ಡಾ.ಅಂಬೇಡ್ಕರ್‌ 134ನೇ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್ ನಾಡಿನ ಮಹಾಬೆಳಕು. ಇವರ ಭೀಮ ಹೆಜ್ಜೆ ಪ್ರಜಾಪ್ರಭುತ್ವದ ಬಲುದೊಡ್ಡ ಪ್ರಗತಿಯ ಕಿರಣವಾಗಿದೆ ಎಂದರು.

ಶೋಷಿತ ವರ್ಗದಲ್ಲಿ ಹುಟ್ಟಿ ಬಡತನವನ್ನು ಸವಾಲಾಗಿ ಸ್ವೀಕರಿಸಿ ಜಯಶೀಲರಾದ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಧಮನಿತರ ಧ್ವನಿಗೆ ಶಕ್ತಿಯಾಗಿದೆ. ಹುಟ್ಟಿನಿಂದ ಸಾಯುವವರಿಗೆ ನೆಮ್ಮದಿಯಿಂದ ಬದುಕಲು ರೂಪಿಸಿದ ಕಾನೂನು ಬ್ರಹ್ಮಾಸ್ತ್ರವಾಗಿದೆ ಎಂದರು.

ಮಹಿಳೆಯರು ಮತದಾನ ಮಾಡಲು ಪ್ರಮುಖ ಕಾರಣಕರ್ತರು ಬಾಬಾ ಅವರು. ಶಿಕ್ಷಣ ಮಾನವನ ಸರ್ವಾಂಗೀಣ ವಿಕಸನಕ್ಕೆ ದಾರಿ ಎಂದು ಸಾರಿದ್ದರು. ಅಂಬೇಡ್ಕರ್ ಅವರ ತತ್ವ ಸಿದ್ಧಾಂತ, ಆದರ್ಶ, ಚಿಂತನೆ, ಸಧೃಢ ಭಾರತ ನಿರ್ಮಾಣಕ್ಕೆ ಬಲುದೊಡ್ಡ ಕೊಡುಗೆಯಾಗಿದೆ ಎಂದರು.

ಇದೇ ವೇಳೆ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಲಾಯಿತು. ಎಎಸ್‌ಐ ರಮೇಶ್, ಶಿವಲಿಂಗೇಗೌಡ, ಸಿಬ್ಬಂದಿಗಳಾದ ಸುಪ್ರೀತ್, ಪ್ರಶಾಂತ್, ಸುನೀಲ್‌ ಕುಮಾರ್, ಲೋಕೇಶ್, ಕೃಷ್ಣ, ಜಯರಾಮ, ಪ್ರಸನ್ನ, ಲಕ್ಷ್ಮೀಪುರ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರೇಗೌಡ ಇದ್ದರು.

ಗಿಡ ನೆಟ್ಟು ಅಂಬೇಡ್ಕರ್‌ ಜನ್ಮದಿನಾಚರಣೆ

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ನಗರ ಘಟಕದ ವತಿಯಿಂದ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ ಹಾಗೂ ಅಂಬೇಡ್ಕರ್‌ ಜನ್ಮದಿನದ ಅಂಗವಾಗಿ ನಗರದ ತಮಿಳುಕಾಲೋನಿಯಲ್ಲಿರುವ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ, ಗಿಡ ನೆಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ, ನಗರ ಘಟಕದ ಅಧ್ಯಕ್ಷ ವಸಂತಕುಮಾರ್‌, ಪ್ರಧಾನಕಾರ್ಯದರ್ಶಿ ಪಪ್ರಸನ್ನ, ಸುನೀಲ್‌ಕುಮಾರ್‌, ಶಿವು, ಜಗನ್ನಾಥ್‌, ಸಂಜಯ್‌ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ