ಕನ್ನಡಪ್ರಭ ವಾರ್ತೆ ಮಂಡ್ಯ
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಹುಟ್ಟುಹಬ್ಬ ಪ್ರಯುಕ್ತ ವಯೋವೃದ್ಧರಿಗೆ ಪೌಷ್ಟಿಕಾಹಾರ ಮತ್ತು ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಕ್ಷ ಕಟ್ಟುವ ಮತ್ತು ಕಾರ್ಯಕರ್ತರನ್ನು ಸಂಘಟಿಸಿ, ರಾಜಕೀಯ ಭವಿಷ್ಯ ನೀಡುವ ನಾಯಕರು ಬೆಳೆಯಬೇಕು, ಬಿಜೆಪಿ ಹೈಕಮಾಂಡ್ ತೀರ್ಮಾನವನ್ನು ತಿರಸ್ಕರಿಸುವ ಗುಣ ಸರಿಯಲ್ಲ. ಪಕ್ಷದಲ್ಲಿ ಒಡಕು ತರುವ ನಾಯಕರ ಮನಸ್ಸು ಬದಲಿಸುವ ಅಗತ್ಯವಿದೆ ಎಂದರು.ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ನಾರಾಯಣ್ ಅವರು ಮಾಜಿ ಪ್ರಧಾನಮಂತ್ರಿ ವಾಜಪೇಯಿ ಅವರ ಜನ್ಮದಿನ ಪ್ರಯುಕ್ತ ಕೆಂಪೇಗೌಡ ಒಕ್ಕಲಿಗರ ವೇದಿಕೆಯಡಿ ಅದ್ಧೂರಿ ಕಾರ್ಯಕ್ರಮ ಮಾಡಿದ್ದರು, ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ, ಮಾಜಿಮುಖ್ಯಮಂತ್ರಿ ಯಡಿಯೂರಪ್ಪ, ಸಂತೋಷ್ ಜಿ ಅವರನ್ನು ಒಂದೇ ವೇದಿಕೆ ಕರತಂದು ಸಂಘಟಿಸಿ, ಕಾರ್ಯಕರ್ತರಿಗೆ ಹೊಸಶಕ್ತಿ ತಂದರು ಎಂದು ಸ್ಮರಿಸಿದರು.
ಇಂತಹ ಸಂಘಟನೆಯಿಂದ ಪಕ್ಷ ಗಟ್ಟಿಯಾಗಿ ಬೆಳೆಯುತ್ತವೆ, ಕಾರ್ಯಕರ್ತರಿಗೆ ಹೊಸ ಉಮ್ಮಸ್ಸು, ಹುರುಪು ಬರುತ್ತದೆ. ಹೊಸ ಹೊಸ ಆಲೋಚನೆಗಳು ಪಕ್ಷ ಬೆಳೆವಣಿಗೆಗೆ ಪ್ರೇರಣಿಯಾಗುತ್ತದೆ. ಯಾವುದೇ ಹಂತದಲ್ಲೂ ಹಿನ್ನಡೆ ಅನುಭವಿಸುವುದು ಕುಡಿಮೆಯಾಗುತ್ತದೆ ಎಂದು ನುಡಿದರು.