ಬೈಕ್-ಚಕ್ಕಡಿ ನಡುವೆ ಅಪಘಾತ; ಓರ್ವ ಸಾವು, ಮತ್ತೊಬ್ಬ ಗಂಭೀರ

KannadaprabhaNewsNetwork |  
Published : Nov 12, 2026, 02:15 AM IST
11 ರೋಣ 1. ಬೈಕ್ ಸವಾರ ಬಲಿ ತಗೆದುಕೊಂಡ   ಚಕ್ಕಡಿ ಓಡಿಸುವ ಹುಚ್ಚಾಟದ ಸ್ಪರ್ಧೆ.  | Kannada Prabha

ಸಾರಾಂಶ

ಚಕ್ಕಡಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹೊಸಳ್ಳಿ ಸಮೀಪ ಮಂಗಳವಾರ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ರೋಣ

ಚಕ್ಕಡಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹೊಸಳ್ಳಿ ಸಮೀಪ ಮಂಗಳವಾರ ಸಂಭವಿಸಿದೆ.

ಇಟಗಿ ಕಡೆಯಿಂದ ರೋಣಕ್ಕೆ ತೆರಳುತ್ತಿದ್ದ ಚಕ್ಕಡಿಯ ನೊಗಕ್ಕೆ ಒಂದು ಕಡೆ ಎತ್ತು, ಮತ್ತೊಂದು ಕಡೆ ಕುದುರೆ ಕಟ್ಟೆ ಸ್ಪರ್ಧೆಗೆ ಇಳಿದಂತೆ ಅತೀ ವೇಗವಾಗಿ ಚಕ್ಕಡಿ ಓಡಿಸಿಕೊಂಡು ಬರುತ್ತಿದ್ದು, ರೋಣ ಮಾರ್ಗವಾಗಿ ಇಟಗಿ ಜಾತ್ರೆಗೆ ಹೋಗುತ್ತಿದ್ದ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದೆ.

ಈ ವೇಳೆ ಬೈಕ್‌ ಸವಾರ ತಾಲೂಕಿನ ಸಂದಿಗವಾಡ ಗ್ರಾಮದ ದೇವಿಂದ್ರಗೌಡ ಪಾಟೀಲ(25) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಹಿಂಬದಿ ಸವಾರ ಸಂದಿಗವಾಡ ಗ್ರಾಮದ ಕುಬೇರಪ್ಪ ಕೊಪ್ಪದ ಗಂಭೀರವಾಗಿ ಗಾಯಗೊಂಡಿದ್ದು, ರೋಣ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಅಪಘಾತ ಸಂಭವಿಸುತ್ತಿದಂತೆ ಚಕ್ಕಡಿ ಸವಾರಿ ಮಾಡುತ್ತಿದ್ದವರು ಚಕ್ಕಡಿ, ಎತ್ತು ಬಿಟ್ಟು ಪರಾರಿಯಾಗಿದ್ದಾರೆ. ಪರಾರಿಯಾಗಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ. ಈ ಕುರಿತು ನರೇಗಲ್ಲ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹುಚ್ಚಾಟಕ್ಕೆ ಬ್ರೆಕ್ ಯಾವಾಗ?:

ಇತ್ತೀಚಿನ ದಿನಗಳಲ್ಲಿ ಮಖ್ಯ ರಸ್ತೆಗಳಲ್ಲೆ ಚಕ್ಕಡಿ ಓಡಿಸುವ ಕ್ರೇಜ್ ಹೆಚ್ಚುತ್ತಿದ್ದು, ಇದರಿಂದ ಅಪಘಾತಗಳು ವಿಪರೀತವಾಗಿವೆ. ಇಂತಹ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಪೊಲಿಸ್ ಇಲಾಖೆ ಮುಂದಾಗಬೇಕು. ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅನಧಿಕೃತ ಚಕ್ಕಡಿ ಓಟದ ಸ್ಪರ್ಧೆ ನಿರಂತರವಾಗಿ, ಯಾವುದೇ ಭಯವಿಲ್ಲದೇ ನಡೆಯುತ್ತಿವೆ. ಇಲ್ಲಿ ಸಂಪೂರ್ಣವಾಗಿ ಸಂಚಾರಿ ನಿಯಮಗಳು ಉಲ್ಲಂಘನೆಯಾಗಿ, ಅಪಘಾತಗಳು ಹೆಚ್ಚುತ್ತಿವೆ.

ಚಕ್ಕಡಿಯ ನೊಗಕ್ಕೆ ಎತ್ತು, ಕುದುರೆ ಕಟ್ಟಿ ಓಡಿಸುತ್ತಿದ್ದಾರೆ. ಪ್ರಾಣಿಗಳಿಗೂ ವಿಪರೀತ ಹಿಂಸೆ ನೀಡಲಾಗುತ್ತದೆ‌. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಇಂತಹ ಹುಚ್ಚಾಟಕ್ಕೆ ಬ್ರೆಕ್ ಹಾಕಲು ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಇಂತಹ ಕಾನೂನುಬಾಹಿರ ಕ್ರೇಜ್‌ಗೆ ಕಡಿವಾಣ ಹಾಕುವಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು. ಚಕ್ಕಡಿ ಓಡಿಸುವ ಅನಧಿಕೃತ ಸ್ಪರ್ಧೆಗಳು, ಅದರಲ್ಲೂ ಮುಖ್ಯ ರಸ್ತೆಯಲ್ಲಿ ಸಂಚಾರ ನಿಯಮ‌ ಉಲ್ಲಂಘಿಸಿ ಚಕ್ಕಡಿ ಓಡಿಸಿದಲ್ಲಿ ಅಂತವರ ಮೇಲೆ‌ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.

ಮಿಥುನ ಎಚ್.ಎನ್. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌