ಬೈಕ್ ಲಾರಿ ನಡುವೆ ಅಪಘಾತ: ಮೂವರು ಕಾರ್ಮಿಕರು ಸಾವು

KannadaprabhaNewsNetwork |  
Published : Jun 07, 2025, 05:27 AM IST
ಪೋಟೋ 2 : ಮೃತಪಟ್ಟ ಕಾರ್ಮಿಕ ಧನರಾಜು | Kannada Prabha

ಸಾರಾಂಶ

ನಂದಿಹಳ್ಳಿ ಬಳಿ ಹೋಗುತ್ತಿದ್ದಾಗ ಡಿಸೇಲ್ ಹಾಕಿಸಿಕೊಂಡು ಬಂದ ಕಂಟೇನರ್ ಲಾರಿ ಸಡನ್ ಆಗಿ ರಸ್ತೆಯ ಎಡಭಾಗಕ್ಕೆ ತಿರುಗಿಸಿದಾಗ ಹಿಂದಿನಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ.

ದಾಬಸ್‍ಪೇಟೆ: ಬೈಕ್ ಹಾಗೂ ಲಾರಿ ನಡುವೆ ಅಪಘಾತವಾಗಿ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಎಂಇ ಸೋಲಾರ್ ಕಂಪನಿಯ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಂಕಲಕೊಪ್ಪದ ನಿವಾಸಿ ಧನುಷ್ ಗೌಡ (22), ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಸವಾಪಟ್ಟಣದ ನಿವಾಸಿ ರಾಕೇಶ್ (24) ಹಾಗೂ ಚಳ್ಳಕೆರೆಯ ಸಮೀಪದ ಚಿಕ್ಕಚೆಲ್ಲೂರು ಗ್ರಾಮದ ಧನರಾಜ್ (24) ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕರು. ಜೂ. 6ರಂದು ಬೆಳಗ್ಗೆ 6.30 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ಈ ಮೂವರು ಎಂಇ ಸೋಲಾರ್ ಕಂಪನಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಯ ಕೆಲಸ ಮಾಡಿ ಬೆಳಿಗ್ಗೆ ತುಮಕೂರು ಪಟ್ಟಣದ ಉಪ್ಪಾರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದು ರೂಮಿಗೆ ದಾಬಸ್‍ಪೇಟೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ48ರ ನಂದಿಹಳ್ಳಿ ಬಳಿ ಹೋಗುತ್ತಿದ್ದಾಗ ಡಿಸೇಲ್ ಹಾಕಿಸಿಕೊಂಡು ಬಂದ ಕಂಟೇನರ್ ಲಾರಿ ಸಡನ್ ಆಗಿ ರಸ್ತೆಯ ಎಡಭಾಗಕ್ಕೆ ತಿರುಗಿಸಿದಾಗ ಹಿಂದಿನಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಮೂರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನಾ ಬಗ್ಗೆ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂರು ಶವಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಿದರು.ಘಟನೆ ನಡೆದ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಡಿಷನಲ್ ಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಡಿವೈಎಸ್ಪಿ ಚಂದ್ರಶೇಖರ್, ಕ್ಯಾತ್ಸಂದ್ರ ಸಿಪಿಐ ರಾಮ್‍ಪ್ರಸಾದ್, ಪಿಎಸ್ ಐ ಚೇತನ್‍ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟನಾ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಪೋಟೋ 2 : ಮೃತಪಟ್ಟ ಕಾರ್ಮಿಕ ಧನರಾಜುಪೋಟೋ 3 : ಮೃತಪಟ್ಟ ಕಾರ್ಮಿಕ ಧನುಷ್ಪೋಟೋ 4 : ಮೃತಪಟ್ಟ ಕಾರ್ಮಿಕ ರಾಕೇಶ್

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ