ಕೊಲ್ಲೂರಿನ ಬಳಿ ಅಪಘಾತ: ಇಬ್ಬರ ಸಾವು, 8 ಮಂದಿಗೆ ಗಾಯ

KannadaprabhaNewsNetwork |  
Published : May 18, 2026, 03:45 AM IST
17ಕೊಲ್ಲೂರು | Kannada Prabha

ಸಾರಾಂಶ

ಬೈಂದೂರು: ಇಲ್ಲಿನ ಕೊಲ್ಲೂರಿನ ಹೊರವಲಯದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಜೀಪ್ ಹಾಗೂ ಲಾರಿ ಡಿಕ್ಕಿಯಲ್ಲಿ ಇಬ್ಬರು ಮಹಿಳೆಯರು ದಾರುಣವಾಗಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ.

ಬೈಂದೂರು: ಇಲ್ಲಿನ ಕೊಲ್ಲೂರಿನ ಹೊರವಲಯದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಜೀಪ್ ಹಾಗೂ ಲಾರಿ ಡಿಕ್ಕಿಯಲ್ಲಿ ಇಬ್ಬರು ಮಹಿಳೆಯರು ದಾರುಣವಾಗಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ.ಮೃತರು ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ಕೇರಳ ಕೊಟ್ಟಾಯಂ ಜಿಲ್ಲೆಯ ಪಾಲಂ ಮೂಲದ ಜ್ಯೋತಿ (45) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಕೊಟ್ಟಾಯಂ ಜಿಲ್ಲೆಯ ಆರ್ಯ ಅನೂಪ್ (28) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ಉಳಿದ ಪ್ರಯಾಣಿಕರನ್ನು ಕುಂದಾಪುರ ಹಾಗೂ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಯಾತ್ರಾರ್ಥಿಗಳು ಭಾನುವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯ ಹಾಗೂ ಕೊಡಚಾದ್ರಿ ಪ್ರವಾಸಕ್ಕೆಂದು ಕೇರಳದ ಕೊಟ್ಟಾಯಂ ಜಿಲ್ಲೆಯಿಂದ ಆಗಮಿಸಿದ್ದರು. ಬೆಳಗ್ಗೆ ಜೀಪಲ್ಲಿ ಕೊಡಚಾದ್ರಿಗೆ ತೆರಳಿ ಕೊಲ್ಲೂರಿಗೆ ಹಿಂದಿರುಗುತ್ತಿದ್ದಾಗ, ದಳಿ ಎಂಬಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಮಲ್ಪೆಯಿಂದ ಮೀನು ತುಂಬಿಸಿಕೊಂಡು ಶಿವಮೊಗ್ಗ ಕಡೆಗೆ ಪ್ರಯಾಣಿಸುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿವೆ. ದೇವರಾಜ್ ಎಂಬವರು ಚಾಲಕರಾಗಿದ್ದ ಜೀಪಿನಲ್ಲಿ ಮೂವರು ಮಕ್ಕಳು ಸೇರಿ 10 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದ ಭೀಕರತೆ ಇಬ್ಬರು ಮೃತಪಟ್ಟಿದ್ದಾರೆ. ಉಳಿದ 8 ಪ್ರಯಾಣಿಕರಿಗೆ ಗಾಯಗಳಾಗಿದ್ದು, ನಾಲ್ವರನ್ನು ಮಣಿಪಾಲದ ಕೆಎಂಸಿಗೆ ಹಾಗೂ ನಾಲ್ವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಸೇರಿಸಲಾಗಿದೆ.

ಮಾನವೀಯತೆ ತೋರಿದ ಚಾಲಕರು: ದುರಂತ ಸಂಭವಿಸಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕೊಲ್ಲೂರು ಪರಿಸರದ ಜೀಪ್ ಚಾಲಕರು ಹಾಗೂ ಸ್ಥಳೀಯರು ಪೊಲೀಸರೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ತಮ್ಮ ವಾಹನದಲ್ಲಿಯೆ ಕುಂದಾಪುರ ಆಸ್ಪತ್ರೆಗೆ ಕರೆತಂದಿದ್ದಾರೆ. ಚಾಲಕರ ಮಾನವೀಯ ಸ್ಪಂದನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.ಭಾನುವಾರವಾಗಿದ್ದರಿಂದ ಕೊಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ಬೀಗ ಹಾಕಿದ್ದರಿಂದ ಗಾಯಾಳುಗಳಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಳು ದೊರಕಿಲ್ಲ. ಅಂಬ್ಯುಲೆನ್ಸ್ ಲಭ್ಯತೆಯೂ ತಕ್ಷಣವೇ ದೊರಕದೆ ಇದ್ದುದರಿಂದ ಅವರನ್ನು ಖಾಸಗಿ ವಾಹನದಲ್ಲಿಯೇ ಕುಂದಾಪುರಕ್ಕೆ ಕರೆಯಬೇಕಾದ ಅನಿವಾರ್ಯತೆ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಕೊಲ್ಲೂರು ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ಭೇಟಿ ನೀಡಿದ್ದಾರೆ. ಕೊಲ್ಲೂರು ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಾಲು ಶ್ರೀ ಅನಂತಪದ್ಮನಾಭ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ
ಕಾರ್ಕಳ: ಋಣಾನುಬಂಧ ವಧುವರರ ಸಮಾವೇಶ