ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಜಿ.ಎಸ್.ಬಿ. ಯುವಕ ಮಂಡಳಿ ಆಶ್ರಯದಲ್ಲಿ ವಸಂತ ಮಾಸದ ಕೊನೆಯ ವಸಂತಪೂಜೆ ಮೇ 16ರಂದು ವೈಭವದಿಂದ ನೆರವೇರಿತು. ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ವೈಭವದ ವಸಂತ ಪೂಜೆ
ಉಡುಪಿ: ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಜಿ.ಎಸ್.ಬಿ. ಯುವಕ ಮಂಡಳಿ ಆಶ್ರಯದಲ್ಲಿ ವಸಂತ ಮಾಸದ ಕೊನೆಯ ವಸಂತಪೂಜೆ ಮೇ 16ರಂದು ವೈಭವದಿಂದ ನೆರವೇರಿತು.
ಈ ಸಂದರ್ಭ ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಅಲಂಕೃತ ಲಾಲಕಿ (ಪಲ್ಲಕ್ಕಿ)ಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಗೆ ಪಂಚ ಮಂಗಳ ವಾದ್ಯಗಳೊಂದಿಗೆ ಉತ್ಸವ ನಡೆಸಲಾಯಿತು. ನಂತರ ದೇವಳದ ವಸಂತ ಮಂಟಪದ ರಜತ ಪೀಠದಲ್ಲಿ ಶ್ರೀ ದೇವರಿಗೆ ಪೂಜೆ ಭಜನೆ, ವೇದಮಂತ್ರ ಪಠಣ, ಭರತನಾಟ್ಯ ಸಹಿತ ಅಷ್ಟಾವಧಾನ ಸೇವೆ, ಮಹಾಪೂಜೆ ಬಳಿಕ ವಿವಿಧ ಬಗೆಯ ಪ್ರಸಾದ ವಿತರಣೆ ನಡೆಯಿತು.
ದೇವಳದ ಪ್ರಧಾನ ಅರ್ಚಕ ದಯಾನಂದ ಭಟ್, ದೀಪಕ್ ಭಟ್, ಗಿರೀಶ್ ಭಟ್, ಪ್ರಭಾಕರ್ ಭಟ್, ಜಿ.ಎಸ್.ಬಿ. ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ, ಹಿರಿಯರಾದ ನರಹರಿ ಪೈ, ಪಾಂಡುರಂಗ ಪೈ, ಕಾರ್ತಿಕ್ ನಾಯಕ್, ಭಾಸ್ಕರ ಶೆಣೈ, ವಿಠಲ್ ನಾಯಕ್, ವಿಶಾಲ್ ಶೆಣೈ, ಅಜಯ ಕಾಮತ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಭಜನಾ ಮಂಡಳಿಯ ಸದಸ್ಯರು, ಜಿ.ಎಸ್.ಬಿ. ಯುವಕ / ಮಹಿಳಾ ಮಂಡಳಿಯ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.