ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕ ಬೆಂಕಿಯಿಂದ ಮನೆ ಚಾವಣಿ, ಗೋಡೆ, ಬಾಗಿಲು ಹಾನಿಗೊಂಡು ದಿನನಿತ್ಯ ಬಳಕೆ ಪದಾರ್ಥಗಳು, ಬಟ್ಟೆ ಹಾಗೂ ಕೂಡಿ ಇಟ್ಟಿದ್ದ 50 ಸಾವಿರ ನಗದು ಸೇರಿ ಇತರೆ ವಸ್ತುಗಳು ಸಂಪೂರ್ಣ ಸುಟ್ಟುಹೋಗಿರುವ ಬಗ್ಗೆ ಸಂತ್ರಸ್ತರು ಅಳಲುತೋಡಿಕೊಂಡರು.
ಈ ವೇಳೆ ಅವರಿಗೆ ಧೈರ್ಯ ಹೇಳಿದ ಮಾಜಿ ಶಾಸಕರು, ನಿಮ್ಮ ಕುಟುಂಬದ ಜೊತೆ ಇರುತ್ತೇನೆ. ಅಲ್ಲದೇ, ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.ಘಟನೆ ಬಳಿಕ ತಾಲೂಕು ಆಡಳಿತ ಸ್ಥಳಕ್ಕೆ ಆಗಮಿಸಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಯೇ ಎಂದು ಸಂತ್ರಸ್ತರಿಂದ ಮಾಹಿತಿ ಪಡೆದ ಮಾಜಿ ಶಾಸಕರು, ಸ್ಥಳದಲ್ಲೇ ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಕರೆ ಮಾಡಿ ಘಟನೆ ನಡೆದು ಎರಡು ದಿನಗಳು ಕಳೆದಿವೆ. ನೀವಾಗಲೀ ಅಥವಾ ಕಂದಾಯ ನಿರೀಕ್ಷಕರಾಗಲೀ ಭೇಟಿ ನೀಡಿಲ್ಲ. ಸಂತ್ರಸ್ತರು ಕಡು ಬಂದವರಾಗಿದ್ದು ಕೂಡಲೇ ಭೇಟಿ ನೀಡಿ ಸರ್ಕಾರ, ಜಿಲ್ಲಾಡಳಿತದಿಂದ ಪರಿಹಾರ ಕೊಡಿಸುವಂತೆ ತಿಳಿಸಿದರು.
ನಂತರ ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ಸಂಬಂಧ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ, ಯಾವುದೇ ಸರ್ಕಾರವಾಗಲಿ ನ್ಯಾಯಾಲಯದ ಆದೇಶ ಪಾಲಿಸಬೇಕು. ಇದರ ಜೊತೆಗೆ ಸ್ಥಳೀಯ ನಾಲೆಗಳಿಗೆ ನೀರು ಹರಿಸಿ ಕೆರೆ, ಕಟ್ಟೆಗಳನ್ನ ತುಂಬಿಸುವಂತ ಕೆಲಸಗಳು ಸಹ ಆಗಬೇಕಿದೆ ಎಂದರು.
ಕಾಂಗ್ರೆಸ್ ಸರ್ಕಾರ ಈ ಹಿಂದೆ ಹಲವು ಬಾರಿ ಅಧಿಕಾರ ನಡೆಸಿ, ಸಾಕಷ್ಟು ಅನುಭವವಿದೆ, ಹಾಗಾಗಿ ನ್ಯಾಯಾಲಯದ ಆದೇಶ ಹಾಗೂ ಸ್ಥಳಿಯ ರೈತರ ಹಿತಕಾಪಾಡುವಂತೆ ಅವರು ಒತ್ತಾಯಿಸಿದರು.