ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿ ಕಡೆ ನಮ್ಮ ನಡೆ: ಡಿ.ಕೃಷ್ಣೇಗೌಡ

KannadaprabhaNewsNetwork |  
Published : Sep 23, 2026, 02:00 AM IST
20ಕೆಎಂಎನ್ ಡಿ38 | Kannada Prabha

ಸಾರಾಂಶ

ಒಕ್ಕೂಟದಲ್ಲಿ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಚರ್ಚಿಸಿ ಅವುಗಳನ್ನು ತಂದು ನಿಮ್ಮಗಳಿಗೆ ನೀಡುವ ನಿಟ್ಟಿನಲ್ಲಿ ನಾನು ಶ್ರಮಿಸುತ್ತಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಒಕ್ಕೂಟದ 51 ಸಂಘಗಳಿಗೆ ಅಧ್ಯಕ್ಷರ ಮತ್ತು ನಿರ್ದೇಶಕ ಚುನಾವಣೆ ನಡೆಸಲಾಗಿದೆ. ಇನ್ನೂ ಕೇವಲ 17 ಸಂಘಗಳು ಬಾಕಿ ಉಳಿದಿವೆ.

ಕನ್ನಡಪ್ರಭ ವಾರ್ತೆ ಹಲಗೂರು

ನಮ್ಮ ನಡೆ ಹಾಲು ಉತ್ಪಾದಕರ ಸಂಘಗಳ ಅಭಿವೃದ್ಧಿ ಕಡೆ ಎಂಬ ಧ್ಯೇಯದೊಂದಿಗೆ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಶ್ರಮಿಸುತ್ತಿದ್ದೇವೆ ಎಂದು ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ ತಿಳಿಸಿದರು.

ಎನ್.ಕೋಡಿಹಳ್ಳಿ ಡೇರಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮನ್ಮುಲ್ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸೌಲಭ್ಯ ಪಡೆದುಕೊಂಡು ಉತ್ತಮ ಗುಣಮಟ್ಟದ ಹಾಲು ಪೂರೈಸಿದರೆ ಒಕ್ಕೂಟ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಒಕ್ಕೂಟದಲ್ಲಿ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಚರ್ಚಿಸಿ ಅವುಗಳನ್ನು ತಂದು ನಿಮ್ಮಗಳಿಗೆ ನೀಡುವ ನಿಟ್ಟಿನಲ್ಲಿ ನಾನು ಶ್ರಮಿಸುತ್ತಿದ್ದೇನೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಒಕ್ಕೂಟದ 51 ಸಂಘಗಳಿಗೆ ಅಧ್ಯಕ್ಷರ ಮತ್ತು ನಿರ್ದೇಶಕ ಚುನಾವಣೆ ನಡೆಸಲಾಗಿದೆ. ಇನ್ನೂ ಕೇವಲ 17 ಸಂಘಗಳು ಬಾಕಿ ಉಳಿದಿವೆ. ಅದರಲ್ಲಿ ಮೂರು ನ್ಯಾಯಾಲಯದಲ್ಲಿ ಇರುವುದರಿಂದ ಅದನ್ನು ಹೊರತುಪಡಿಸಿ ವಾರ್ಷಿಕ ಸಭೆ ಮುಗಿದ ನಂತರ ಚುನಾವಣೆ ಸಹ ಪೂರ್ಣಗೊಳಿಸುವುದಾಗಿ ತಿಳಿಸಿದರು.

ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾರ್ಗದರ್ಶನದಲ್ಲಿ ನಾನು ಸಂಘಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇದಕ್ಕೆ ನಿಮ್ಮಗಳ ಪೂರ್ಣ ಸಹಕಾರ ಸಲಹೆ ನೀಡಬೇಕು. ಒಕ್ಕೂಟದಿಂದ ವಿಮೆ ಯೋಜನೆ ಹಾಗೂ ಮರಣಾ ನಿಧಿ ಸೇರಿದಂತೆ ಇನ್ನೂ ಇರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ಇದೇ ವೇಳೆ ಹಾಲು ಉತ್ಪಾದಕರ ತಾಲೂಕು ಅಧ್ಯಕ್ಷ ಶಂಕರ್ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಸಂಘದ ಅಧ್ಯಕ್ಷ ರಾಜೇಗೌಡ ಮತ್ತು ಸರ್ವ ಸದಸ್ಯರು ಹಾಗೂ ಕಾರ್ಯದರ್ಶಿ ಪ್ರಕಾಶ್ ಮತ್ತು ಸಿಬ್ಬಂದಿ ಇದ್ದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಮನವಿ

ಹಲಗೂರು:ಗ್ರಾಪಂ ಆವರಣದಲ್ಲಿ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ, ಎಸ್ ಐಆರ್ 2026ನೇ ಸಾಲಿನ ಮತದಾರರ ಹೆಸರು ಹಾಗೂ ತಿದ್ದುಪಡಿಗಳಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಯಿತು.

ಸರ್ಕಾರದ ಯೋಜನೆಯಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿ ಸರಿಪಡಿಸಲು ಸಹಕರಿಸಿ ಮತ್ತು ಇಂದಿನ ಎಸ್ಐಆರ್ ಸಮಯದಲ್ಲಿ ಸಿದ್ಧಪಡಿಸಿದ ಮತದಾರರ ಪಟ್ಟಿಯೊಂದಿಗೆ ಯಾವುದೇ ಹೊಂದಾಣಿಕೆ ಇಲ್ಲದೆ ತಪ್ಪಾಗಿದ್ದರೆ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಉಳಿಸಿಕೊಳ್ಳಲು ಭಾರತ ಚುನಾವಣಾ ಆಯೋಗ ಸೂಚಿಸಿರುವಂತೆ ಮೂಲ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಬಂದು ಅದನ್ನು ತಿದ್ದುಪಡಿಮಾಡಿಸಿಕೊಳ್ಳಬೇಕು. ಮುಂದಿನ ಅಕ್ಟೋಬರ್ 20 ರವರೆಗೆ ಅವಕಾಶವಿದೆ. ಹೋಬಳಿಯ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಶ್ರೀಕಂಠಸ್ವಾಮಿ ಮನವಿ ಮಾಡಿದ್ದಾರೆ.ಈ ವೇಳೆ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಭರತೇಶ್ ಕುಮಾರ್ ಎಸ್.ಎಂ.ಪಿ.ಪ್ರದೀಪ್ ಕುಮಾರ್, ನಾಗಭೂಷಣ ಕೆ.ಬಿ. , ವಿಮಲಾ ಕೆ.ಎಸ್. ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಗಳ ಗೌರವಿಸುವುದು ಉತ್ತಮ ಸಂಸ್ಕೃತಿ: ಕೃಷ್ಣಮೂರ್ತಿ ಭಟ್‌
ಆನಂದಾಶ್ರಮಕ್ಕೆ ಆಹಾರ ಕಿಟ್, ಬಟ್ಟೆ ವಿತರಣೆ