ಮುಂಡರಗಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ, ಬೇಕರಿ ಸಂಪೂರ್ಣ ಭಸ್ಮ

KannadaprabhaNewsNetwork |  
Published : May 04, 2025, 01:34 AM IST
ನ್ಯೂ ಮಹಾಂತೇಶ ಬೇಕರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿ ಸಂಪೂರ್ಣ ಹಾನಿಯಾಗಿದೆ. | Kannada Prabha

ಸಾರಾಂಶ

ಮುಂಡರಗಿ ಪಟ್ಟಣದಲ್ಲಿ ಶನಿವಾರ ಬೆಳಗಿನ ಜಾವ 3.30ರಿಂದ 4.30ರ ವೇಳೆಯಲ್ಲಿ ಭಾರೀ ಗಾಳಿ ಮತ್ತು ಮಳೆ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಗಾಳಿ ರಭಸಕ್ಕೆ ಬಸ್ ನಿಲ್ದಾಣದ ಎದುರಿನಲ್ಲಿರುವ ನ್ಯೂ ಮಹಾಂತೇಶ ಬೇಕರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಬೇಕರಿ ಸಂಪೂರ್ಣ ಹಾನಿಯಾಗಿದೆ.

ಮುಂಡರಗಿ: ಪಟ್ಟಣದಲ್ಲಿ ಶನಿವಾರ ಬೆಳಗಿನ ಜಾವ 3.30ರಿಂದ 4.30ರ ವೇಳೆಯಲ್ಲಿ ಭಾರೀ ಗಾಳಿ ಮತ್ತು ಮಳೆ ಪ್ರಾರಂಭವಾಗಿದ್ದು, ಈ ಸಂದರ್ಭದಲ್ಲಿ ಗಾಳಿ ರಭಸಕ್ಕೆ ಬಸ್ ನಿಲ್ದಾಣದ ಎದುರಿನಲ್ಲಿರುವ ನ್ಯೂ ಮಹಾಂತೇಶ ಬೇಕರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಬೇಕರಿ ಸಂಪೂರ್ಣ ಹಾನಿಯಾಗಿದೆ. ಬೇಕರಿಯಲ್ಲಿದ್ದ ಎಲ್ಲ ಆಹಾರ ಪದಾರ್ಥಗಳು, ತಿಂಡಿ, ತಿನಿಸುಗಳು, ಅಪಾರ ಬೆಲೆ ಬಾಳುವ ಬೇಕರಿ ವಸ್ತುಗಳು ಸೇರಿದಂತೆ ಇತರೆ ಎಲ್ಲ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬೇಕರಿಯ ಮಾಲೀಕ ಚಂದ್ರಪ್ಪ ಈಶ್ವರಪ್ಪ ನಾವಿಯವರು ಸಾಹೇಬ್ರ ನಮ್ಮ ಕುಟುಂಬದ ನಿತ್ಯದ ಜೀವನಕ್ಕೆ ಈ ಬೇಕರಿಯೇ ಆಸರೆಯಾಗಿತ್ತು. ಇದೀಗ ಇದು ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ನನಗೆ ಬಹು ದೊಡ್ಡ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಆದ್ದರಿಂದ ಈ ಬಗ್ಗೆ ಸರ್ಕಾರದಿಂದ ಸೂಕ್ತವಾದ ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ದ ನಾಗೇಶ ಹುಬ್ಬಳ್ಖಿ, ಸದಸ್ಯರಾದ ಪವನ್ ಮೇಟಿ, ಪ್ರಹ್ಲಾದ್ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಸೂಕ್ತವಾದ ಪರಿಹಾಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ