ಕೊಬ್ಬರಿ ಶೆಡ್ ಗೆ ಆಕಸ್ಮಿಕ ಬೆಂಕಿ: ₹30 ಲಕ್ಷ ನಷ್ಟ

KannadaprabhaNewsNetwork |  
Published : Jan 01, 2026, 02:45 AM IST
31ಕೆಕೆಡಿಯು2. | Kannada Prabha

ಸಾರಾಂಶ

ಕಡೂರು: ತಾಲೂಕಿನ ಸಿಂಗಟಗೆರೆ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ರೈತ ಪಿ.ಮಹೇಶ್ವರಪ್ಪ ಸಂಗ್ರಹಿಸಿಟ್ಟಿದ್ದ ಕೊಬ್ಬರಿ, ತೆಂಗಿನಕಾಯಿ ಮತ್ತು 4 ವಾಹನಗಳು ಆಕಸ್ಮಿಕ ಬೆಂಕಿಗೆ ಸುಟ್ಟು ಹೋಗಿರುವುದಾಗಿ ಪಂಚನಹಳ್ಳಿ ಪೊಲೀಸ್ ಠಾಣೆಗೆ ಶೆಟ್ಟಿಹಳ್ಳಿ ಮಹೇಶ್ವರಪ್ಪ ಅವರ ಮಗ ವೇದಮೂರ್ತಿ ದೂರು ನೀಡಿದ್ದಾರೆ.

ಕಡೂರು: ತಾಲೂಕಿನ ಸಿಂಗಟಗೆರೆ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ರೈತ ಪಿ.ಮಹೇಶ್ವರಪ್ಪ ಸಂಗ್ರಹಿಸಿಟ್ಟಿದ್ದ ಕೊಬ್ಬರಿ, ತೆಂಗಿನಕಾಯಿ ಮತ್ತು 4 ವಾಹನಗಳು ಆಕಸ್ಮಿಕ ಬೆಂಕಿಗೆ ಸುಟ್ಟು ಹೋಗಿರುವುದಾಗಿ ಪಂಚನಹಳ್ಳಿ ಪೊಲೀಸ್ ಠಾಣೆಗೆ ಶೆಟ್ಟಿಹಳ್ಳಿ ಮಹೇಶ್ವರಪ್ಪ ಅವರ ಮಗ ವೇದಮೂರ್ತಿ ದೂರು ನೀಡಿದ್ದಾರೆ.

ಘಟನೆ ಡಿ.19 ರ ರಾತ್ರಿ ನಡೆದಿದ್ದು ಕೊಬ್ಬರಿ ಶೆಡ್‌ನಲ್ಲಿ ಸುಮಾರು 25 ಸಾವಿರ ಕೊಬ್ಬರಿ ಮತ್ತು ತೆಂಗಿನ ಕಾಯಿ ಸಂಗ್ರಹಿಸಿ ಇಡಲಾಗಿತ್ತು. ಶೆಡ್ಡಿನಲ್ಲಿ ಒಂದು ಓಮಿನಿ ಕಾರು, ದ್ವಿಚಕ್ರ ವಾಹನ, ಒಂದು ಟ್ರಾಕ್ಟರ್ ಮತ್ತು ಟ್ರಾಲಿಗಳು ಸುಟ್ಟಿರುವುದಾಗಿ ಅಂದು ರಾತ್ರಿ ಶೆಡ್ಡಿನ ಪಕ್ಕದ ಮನೆಯವರು ಮಾಹಿತಿ ನೀಡಿದ್ದು ಶೆಡ್ಡಿಗೆ ಹೋಗಿ ನೋಡಿದಾಗ ಬೆಂಕಿಯಿಂದ ಉರಿಯುತ್ತಿದ್ದ ಕೊಬ್ಬರಿ ರಾಶಿ ಕಂಡು ಕಡೂರು ಅಗ್ನಿಶಾಮಕ ಠಾಣೆಗೆ ಪೋನ್ ಮಾಡಿ ಕರೆಸಿದರೂ ಕೊಬ್ಬರಿ ಮತ್ತು ವಾಹನಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಇದರಿಂದ ಸುಮಾರು ₹30 ಲಕ್ಷ ನಷ್ಟವಾಗಿದೆ ಎಂದು ದೂರಿನಲ್ಲಿ ವೇದಮೂರ್ತಿತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪಂಚನಹಳ್ಳಿ ಪೊಲೀಸರು ಸ್ಥಳ ಮಹಜರು ಮಾಡಿ ಮೆಸ್ಕಾಂ ಇಲಾಖೆಯಿಂದ ಮಾಹಿತಿ ಕೇಳಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಪಿಎಸ್ಐ ಮಾಹಿತಿ ನೀಡಿದ್ದಾರೆ.ಶಾಸಕ ಕೆ.ಎಸ್.ಆನಂದ್ ಶೆಟ್ಟಿಹಳ್ಳಿ ರೈತ ಮಹೇಶ್ವರಪ್ಪ ಅವರ ಕೊಬ್ಬರಿ ಶೆಡ್ಡಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಸುಟ್ಟು ರೈತರೊಂದಿಗೆ ಮಾತನಾಡಿ, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಾಧ್ಯ ವಾದಷ್ಟು ಹಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.ರೈತ ಮನವಿ:

ಆಕಸ್ಮಿಕವೋ ಅಥವಾ ಕಿಡಿಗೇಡಿಗಳು ಮಾಡಿರುವ ಕೃತ್ಯವೋ ತಿಳಿಯುತ್ತಿಲ್ಲ ಈಗಾಗಲೇ ಠಾಣೆಗೆ ದೂರು ನೀಡಿದ್ದು ಶಾಸಕರು ಬಡ ರೈತರಿಗೆ ಆಗಿರುವ ನಷ್ಟವನ್ನು ಕಂಡಿದ್ದು ಸರ್ಕಾರಿಂದ ಪರಿಹಾರ ಕೊಡಿಸಬೇಕು ಎಂದು ರೈತ ಮಹೇಶ್ವರಪ್ಪಮನವಿ ಮಾಡಿದರು.

31ಕೆಕೆಡಿಯು2.

ಕಡೂರು ತಾಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕೊಬ್ಬರಿ ಶೆಡ್ ನಲ್ಲಿ ಸುಟ್ಟುಹೋಗಿರುವ ಕೊಬ್ಬರಿ ಮತ್ತು ವಾಹನಗಳನ್ನು ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ