ವಾಹನ ಹತ್ತಿಸಿ ಅತ್ತಿಗೆ ಕೊಲೆಗೆ ಯತ್ನಿಸಿದ್ದ ಆರೋಪಿ ಬಂಧನ

KannadaprabhaNewsNetwork |  
Published : Nov 01, 2026, 04:00 AM IST
(ಫೋಟೊಬಿಕೆಟಿ6, ಆರೋಪಿ ಚನ್ನಪ್ಪಗೌಡ ನಾಡಗೌಡ) | Kannada Prabha

ಸಾರಾಂಶ

ಆಸ್ತಿ ವಿವಾದದ ಹಿನ್ನೆಲೆ ಕಂದಗಲ್ಲ ಗ್ರಾಮದಲ್ಲಿ ಅತ್ತಿಗೆ ಮೇಲೆ ಬೊಲೆರೋ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ಚನ್ನಪ್ಪಗೌಡ ನಾಡಗೌಡ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಸ್ತಿ ವಿವಾದದ ಹಿನ್ನೆಲೆಅತ್ತಿಗೆ ಮೇಲೆ ಬೊಲೆರೋ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದ ಆರೋಪಿ ಚನ್ನಪ್ಪಗೌಡ ನಾಡಗೌಡ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ಅ.23ರಂದು ಇಳಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಜಮೀನು ವಿಷಯದಲ್ಲಿ ಕಲಹ ಉಂಟಾಗಿ ಅತ್ತಿಗೆ ಮಂಗಳಾದೇವಿ ಮೇಲೆ ಆರೋಪಿ ಚನ್ನಪ್ಪಗೌಡ ನಾಡಗೌಡ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಸಿದ್ದಾರ್ಥ ಗೋಯಲ್ ಆರೋಪಿ ಬಂಧನಕ್ಕೆ ಪ್ರತ್ಯೇಕ ಎರಡು ತಂಡಗಳನ್ನು ರಚಿಸಿದ್ದರು. ಆರಂಭದಲ್ಲಿ ಆರೋಪಿ ಬಳ್ಳಾರಿ ಭಾಗದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿತ್ತು. ಕೊನೆಗೆ ಬೆಂಗಳೂರಿನ ಗಾಂಧಿನಗರದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಂಧಿತ ಚನ್ನಪ್ಪಗೌಡ ನಾಡಗೌಡನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ.13ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ. ಚನ್ನಪ್ಪಗೌಡ ಪತ್ನಿ ಪುಷ್ಪಾ ನಾಡಗೌಡ ಮೇಲೆಯೂ ಮಂಗಳಾದೇವಿ ಅವರ ಪುತ್ರಿ ಪ್ರಿಯಾ ರೆಡ್ಡಿ ಇಳಕಲ್ಲ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಗೆ ರಾತ್ರಿ 8-10ರ ವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ವೈದ್ಯರ ನಿರ್ಲಕ್ಷ್ಯದಿಂದ 1 ವರ್ಷದ ಮಗು 3 ತಿಂಗಳಿಂದ ಕೋಮಾದಲ್ಲಿ: ಆರೋಪ